ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮದ ವಿರುದ್ಧ ಹೋರಾಟ ಮಾಡಿದ್ದ ಅಭ್ಯರ್ಥಿಗೆ ಬೆದರಿಕೆ; ದೂರು ದಾಖಲು
ಧಾರವಾಡದಲ್ಲಿರುವ ಪಿಎಸ್ಐ ಅಭ್ಯರ್ಥಿ ರವಿಶಂಕರ್ಗೆ ವಾಟ್ಸಾಪ್ (Whatsapp) ಮೆಸೇಜ್ ಮೂಲಕ ಮಣ್ಣೂರು ಮೂಲದ ಅಸ್ಲಾಂ ಎಂಬಾತ ಬೆದರಿಕೆ ಹಾಕಿದ್ದಾನೆ.
ಧಾರವಾಡ: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ (PSI Recruitment Scam) ನಡೆದ ಅಕ್ರಮ ವಿರುದ್ಧ ಹೋರಾಟ ಮಾಡಿದ್ದ ಅಭ್ಯರ್ಥಿಗೆ ಬೆದರಿಕೆ ಹಾಕಿರುವ ಬಗ್ಗೆ ಆರೋಪ ಕೇಳಿಬಂದಿದೆ. ಧಾರವಾಡದಲ್ಲಿರುವ ಪಿಎಸ್ಐ ಅಭ್ಯರ್ಥಿ ರವಿಶಂಕರ್ಗೆ ವಾಟ್ಸಾಪ್ (Whatsapp) ಮೆಸೇಜ್ ಮೂಲಕ ಮಣ್ಣೂರು ಮೂಲದ ಅಸ್ಲಾಂ ಎಂಬಾತ ಬೆದರಿಕೆ ಹಾಕಿದ್ದಾನೆ. ‘ಅಫಜಲಪುರ ಮಂದಿ ಪವರ್ ಏನು ಅಂತಾ ತೋರಿಸುತ್ತೇವೆ’. ರುದ್ರಗೌಡ ಪಾಟೀಲ್ ಹೊರಗೆ ಬಂದ ಮೇಲೆ ನೀನು ಹೇಗೆ ಪಿಎಸ್ಐ ಆಗ್ತಿಯಾ? ರುದ್ರಗೌಡ ಪಾಟೀಲ್ ನಿನ್ನಿಂದಲೇ ಜೈಲಿಗೆ ಹೋಗಿದ್ದಾರೆ ಎಂದು ಬಂಧಿತ ರುದ್ರಗೌಡ ಪಾಟೀಲ್ ಪರವಾಗಿ ಅಸ್ಲಾಂ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ರವಿಶಂಕರ್ ದೂರು ನೀಡಿದ್ದಾರೆ. ಬೆದರಿಕೆ ಹಾಕಿರುವ ಅಸ್ಲಾಂ ಮುಜಾವರ್ ನಿವಾಸಿ. ಈತ ಕಳೆದ ಕೆಲ ವರ್ಷಗಳಿಂದ ರುದ್ರಗೌಡ ಪಾಟೀಲ್ ಜೊತೆ ಇದ್ದಾನೆ.
ಇದನ್ನೂ ಓದಿ: Sugar: ಆರೋಗ್ಯಕ್ಕೆ ಯಾವುದು ಒಳ್ಳೆಯದು? ಬ್ರೌನ್ ಶುಗರ್ ಅಥವಾ ವೈಟ್ ಶುಗರ್?
ಕಿಂಗ್ಪಿನ್ ರುದ್ರಗೌಡ ಪಾಟೀಲ್ ಸಹಚರ ಬಂಧನ: ಪ್ರಕರಣದ ಕಿಂಗ್ಪಿನ್ ಆಗಿರುವ ರುದ್ರಗೌಡ ಪಾಟೀಲ್ ಸಹಚರನನ್ನು ಸಿಐಡಿ (CID) ಅಧಿಕಾರಿಗಳು ಬಂಧಿಸಿದ್ದಾರೆ. ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಪ್ರಕಾಶ್ ಬಂಧಿತ ಆರೋಪಿ. ಪ್ರಕಾಶ್ ರುದ್ರಗೌಡ ಪಾಟೀಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಅಭ್ಯರ್ಥಿಗಳಿಗೆ ಬ್ಲೂಟೂತ್, ಎಲೆಕ್ಟ್ರಾನಿಕ್ ಡಿವೈಸ್ ನೀಡುವುದು ಮತ್ತು ಹಣ ಪಡೆಯುವ ಕೆಲಸ ಮಾಡುತ್ತಿದ್ದ.
ಬೆಂಗಳೂರಿನಲ್ಲಿ ಇಂದು ಧರಣಿ: ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಬಯಲಾದ ಬೆನ್ನಲ್ಲೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಮರು ಪರೀಕ್ಷೆ ನಡೆಸುವುದಾಗಿ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಆದರೆ ಈ ನಿರ್ಧಾರವನ್ನು ವಿರೋಧಿಸಿ ಅಭ್ಯರ್ಥಿಗಳು ಈಗಾಗಲೇ ಪ್ರತಿಭಟನೆ ನಡೆಸಿದ್ದರು. ಇಂದು ಕೂಡಾ ಮರು ಪರೀಕ್ಷೆ ಆದೇಶ ರದ್ದುಗೊಳಿಸುವಂತೆ ಆಗ್ರಹಿಸಿ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಧರಣಿ ನಡೆಸಲಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Sat, 28 May 22