Sugar: ಆರೋಗ್ಯಕ್ಕೆ ಯಾವುದು ಒಳ್ಳೆಯದು? ಬ್ರೌನ್ ಶುಗರ್ ಅಥವಾ ವೈಟ್ ಶುಗರ್?

ಸಿಹಿ ಎಂದರೆ ಇಷ್ಟಪಡದವರಿಲ್ಲ, ಆದರೆ ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಸಿಹಿಯಿಂದ ದೂರ ಉಳಿಯುತ್ತಿದ್ದಾರೆ. ನಾವು ಕೂಡ ನಮ್ಮ ಆರೋಗ್ಯಕ್ಕೆ ಉತ್ತಮವಾದದನ್ನು ಆರಿಸಿಕೊಳ್ಳಲು ಬಯಸುತ್ತೇವೆ.

Sugar: ಆರೋಗ್ಯಕ್ಕೆ ಯಾವುದು ಒಳ್ಳೆಯದು? ಬ್ರೌನ್ ಶುಗರ್ ಅಥವಾ ವೈಟ್ ಶುಗರ್?
White And Brown Sugar
Follow us
TV9 Web
| Updated By: ನಯನಾ ರಾಜೀವ್

Updated on: May 28, 2022 | 12:14 PM

ಸಿಹಿ ಎಂದರೆ ಇಷ್ಟಪಡದವರಿಲ್ಲ, ಆದರೆ ಕೆಲವು ಆರೋಗ್ಯ ಸಮಸ್ಯೆಗಳಿಂದಾಗಿ ಸಿಹಿಯಿಂದ ದೂರ ಉಳಿಯುತ್ತಿದ್ದಾರೆ. ನಾವು ಕೂಡ ನಮ್ಮ ಆರೋಗ್ಯಕ್ಕೆ ಉತ್ತಮವಾದದನ್ನು ಆರಿಸಿಕೊಳ್ಳಲು ಬಯಸುತ್ತೇವೆ. ನಿಮ್ಮ ಆರೋಗ್ಯವೂ ಉತ್ತಮವಾಗಿರಲೆಂದು ಭಾವಿಸಿ ನೀವು ಸಹ ಬಿಳಿ ಸಕ್ಕರೆಯಿಂದ ಕಂದು ಸಕ್ಕರೆಗೆ ಬದಲಾಯಿಸಿದ್ದೀರಾ ಹಾಗಾದರೆ ಈ ಲೇಖನದಿಂದ ನಿಮಗೆ ಸಹಾಯವಾಗಬಹುದು.

ಕಂದು ಸಕ್ಕರೆ ಬಿಳಿ ಬಣ್ಣಕ್ಕಿಂತ ಉತ್ತಮವಾಗಿದೆ ಎಂಬುದು ಸುಳ್ಳು. ಸಂಸ್ಕರಿಸಿದ ಸಕ್ಕರೆ ಹರಳುಗಳನ್ನು ಕಬ್ಬಿನ ಮೊಲಾಸ್ಗಳೊಂದಿಗೆ ಬೆರೆಸಿ ಬ್ರೌನ್ ಸಕ್ಕರೆಯನ್ನು ತಯಾರಿಸಲಾಗುತ್ತದೆ. ಶೇಕಡಾ 95ರಷ್ಟು ಸಂಸ್ಕರಿಸಿದ ಸಕ್ಕರೆಯನ್ನು 5ರಷ್ಟು ಮೊಲಾಸ್ಗಳೊಂದಿಗೆ ಬೆರೆಸಲಾಗುತ್ತದೆ.

ಕಂದು ಸಕ್ಕರೆ ಜೀರ್ಣಕ್ರಿಯೆಗೆ ಸಹಕಾರಿ ಕಂದು ಸಕ್ಕರೆ ಜೀರ್ಣಕಾರಿ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ನೀವು ಮಲಬದ್ಧತೆಯಿಂದ ಬಳಲುತ್ತಿದ್ದರೆ, ಒಂದು ಲೋಟ ಬೆಚ್ಚಗಿನ ನೀರು ಶುಂಠಿ ಮತ್ತು ಒಂದು ಟೀ ಚಮಚ ಕಂದು ಸಕ್ಕರೆಯೊಂದಿಗೆ ಬೆರೆಸಿ ಕುಡಿಯುವುದರಿಂದ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದು.

ಕ್ಯಾಲೊರಿ ಎಷ್ಟಿರುತ್ತದೆ? ಯುಎಸ್​ಡಿಎ ಡಾಟಾ ಪ್ರಕಾರ, ಕಂದು ಸಕ್ಕರೆಯಲ್ಲಿ 100 ಗ್ರಾಂ ಕ್ಯಾಲೊರಿ ಇರುತ್ತದೆ, ಬಿಳಿ ಸಕ್ಕರೆಯಲ್ಲಿ 380 ರಿಂದ 385 ಗ್ರಾಂನಷ್ಟಿರುತ್ತದೆ. ಹಾಗೆಯೇ ಬ್ರೌನ್ ಶುಗರ್​ ಅಲ್ಲಿ ಕ್ಯಾಲ್ಶಿಯಂ ಪ್ರಮಾಣ 83 ಗ್ರಾಂನಷ್ಟಿರುತ್ತದೆ. ಬಿಳಿ ಸಕ್ಕರೆಯಲ್ಲಿ 1 ಗ್ರಾಂನಷ್ಟಿರುತ್ತದೆ.

ಮೊಲಾಸಸ್​ನಿಂದ ಕಂದು ಬಣ್ಣ ಕಬ್ಬಿನ ಮೊಲಾಸಸ್ ಸಕ್ಕರೆಗೆ ವಿಶಿಷ್ಟ ಕಂದು ಬಣ್ಣ ಮತ್ತು ಮೃದುತ್ವವನ್ನು ನೀಡುತ್ತದೆ. ಕಂದು ಸಕ್ಕರೆ ಮತ್ತು ಬಿಳಿ ಸಕ್ಕರೆ ಎರಡರಲ್ಲೂ ಕ್ಯಾಲೋರಿ ಹೋಲಿಕೆ ಬಂದಾಗ, ಕಂದು ಸಕ್ಕರೆಯು ಬಿಳಿ ಸಕ್ಕರೆಗಿಂತ ಶೇಕಡಾ 0.25 ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಸರಳವಾಗಿ ಹೇಳುವುದಾದರೆ, ಕಂದು ಸಕ್ಕರೆ ಮೊಲಾಸಸ್ ಸಿರಪ್‌ನಿಂದ ಲೇಪಿತವಾದ ಬಿಳಿ ಸಕ್ಕರೆಯಾಗಿದೆ. ಕಂದು ಸಕ್ಕರೆಯು ಬಿಳಿ ಸಕ್ಕರೆಗಿಂತ ಹೆಚ್ಚಿನ ಖನಿಜಗಳನ್ನು ಹೊಂದಿದ್ದರೂ, ಈ ಖನಿಜಗಳ ಪ್ರಮಾಣವು ತುಂಬಾ ಕಡಿಮೆಯಾಗಿದ್ದು, ಇದರಿಂದ ನೀವು ಯಾವುದೇ ಆರೋಗ್ಯ ಪ್ರಯೋಜನಗಳನ್ನು ಪಡೆಯುವುದಿಲ್ಲ.

ಕಂದು ಸಕ್ಕರೆಯಲ್ಲಿ ಮೊಲಾಸಸ್ ಇರುವುದರಿಂದ, ಇದು ಸ್ವಲ್ಪ ತೇವಾಂಶವನ್ನು ಉಳಿಸಿಕೊಳ್ಳುತ್ತದೆ ಮತ್ತು ಮೃದುವಾದ ವಿನ್ಯಾಸವನ್ನು ಹೊಂದಿರುತ್ತದೆ ಮತ್ತು ಬೇಯಿಸಿದ ಸಿಹಿತಿಂಡಿಗಳಿಗೆ ಇದು ಸೂಕ್ತವಾಗಿರುತ್ತದೆ.

ಆರೋಗ್ಯಕರ ಸಿಹಿಕಾರಕಗಳು ನಿಮ್ಮ ಆಹಾರ ಪದ್ಧತಿಯಿಂದ ಸಕ್ಕರೆಯನ್ನು ಬಿಡುವ ಅಥವಾ ತಿನ್ನದೇ ಇರುವ ಬಗ್ಗೆ ಯೋಜಿಸುತ್ತಿದ್ದರೆ ಇದು ಉತ್ತಮ ಅಭ್ಯಾಸ. ಸಕ್ಕರೆಯ ಬದಲಿಗೆ ಮಾರುಕಟ್ಟೆಯಲ್ಲಿ ಹಲವಾರು ಆರೋಗ್ಯಕರ ಪದಾರ್ಥಗಳಿವೆ. ನೀವು ಸ್ಟೀವಿಯಾ ಅಥವಾ ತೆಂಗಿನಕಾಯಿ ಸಕ್ಕರೆಯನ್ನು ಆರಿಸಿಕೊಳ್ಳಬಹುದು.

ಇದು ರುಚಿಕರ ಮತ್ತು ನೋಡಲು ಸಹ ಸಕ್ಕರೆಯಂತೆ ಕಾಣುತ್ತದೆ. ಅಲ್ಲದೇ, ಮ್ಯಾಪಲ್ ಸಿರಪ್, ಜೇನುತುಪ್ಪ ಮತ್ತು ಭೂತಾಳೆ ಮಕರಂದ ನಿಮ್ಮ ಆಹಾರದಲ್ಲಿ ಸಕ್ಕರೆಯನ್ನು ಬದಲಿಸುವ ಕೆಲವು ಆಯ್ಕೆಗಳಾಗಿವೆ.

ಚಹಾದೊಂದಿಗೆ ಸೇವಿಸಬಹುದು: ಸಂಪೂರ್ಣ ಕೆಮಿಕಲ್ ಫ್ರೀ ಆಗಿದ್ದು, ಇದನ್ನು ಚಹಾ, ಕಾಫಿ ಜೊತೆ ಸೇವಿಸಬಹುದು. ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ಸೆಳೆತವು ವಿಪರೀತ ನೋವನ್ನುಂಟು ಮಾಡುತ್ತದೆ. ಬ್ರೌನ್ ಶುಗರ್ ನ್ನು ಸೇವಿಸುವುದು ಈ ಸೆಳೆತದ ವಿರುದ್ಧ ಚೆನ್ನಾಗಿ ಹೋರಾಡಲು ಸಹಾಯ ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ