Monkeypox: ಮಂಕಿಪಾಕ್ಸ್​ ವೈರಸ್ ಕುರಿತು ಜನರ ಸಂದೇಹಗಳಿಗೆ ಇಲ್ಲಿದೆ ವೈದ್ಯರಿಂದ ಉತ್ತರ

Monkeypox: ಕಂಡು ಕೇಳರಿಯದ ಹೊಸ ರೋಗಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿವೆ. ಯಾಕ್ಹೀಗೆ ಆಗುತ್ತಿದೆ? ಪ್ರಳಯ ಆಗುತ್ತದೆ ಎಂದು ಮಾಧ್ಯಮಗಳು ಬಹಳ ವರ್ಷಗಳಿಂದ ಹೇಳುತ್ತಾ ಬರುತ್ತಿವೆ. ಹಾಗಾದರೆ ಇದೇನಾ ಆ ಪ್ರಳಯ? ಮನುಕುಲದ ಅಂತ್ಯ ಸಮೀಪ ಬಂದಿದೆಯೇ? ಹೀಗೆಲ್ಲ ನಿಮ್ಮ ಮನಸ್ಸಿಗೆ ಅನಿಸುತ್ತಿರಬಹುದು.

Monkeypox: ಮಂಕಿಪಾಕ್ಸ್​ ವೈರಸ್ ಕುರಿತು ಜನರ ಸಂದೇಹಗಳಿಗೆ ಇಲ್ಲಿದೆ ವೈದ್ಯರಿಂದ ಉತ್ತರ
Monkeypox
Follow us
TV9 Web
| Updated By: ನಯನಾ ರಾಜೀವ್

Updated on: May 28, 2022 | 10:18 AM

ಕಂಡು ಕೇಳರಿಯದ ಹೊಸ ರೋಗಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿವೆ. ಯಾಕ್ಹೀಗೆ ಆಗುತ್ತಿದೆ? ಪ್ರಳಯ ಆಗುತ್ತದೆ ಎಂದು ಮಾಧ್ಯಮಗಳು ಬಹಳ ವರ್ಷಗಳಿಂದ ಹೇಳುತ್ತಾ ಬರುತ್ತಿವೆ. ಹಾಗಾದರೆ ಇದೇನಾ ಆ ಪ್ರಳಯ? ಮನುಕುಲದ ಅಂತ್ಯ ಸಮೀಪ ಬಂದಿದೆಯೇ? ಹೀಗೆಲ್ಲ ನಿಮ್ಮ ಮನಸ್ಸಿಗೆ ಅನಿಸುತ್ತಿರಬಹುದು.

ವೈದ್ಯನಾದ ನಾನು ಭವಿಷ್ಯ ಹೇಳುವುದು ಸಾದ್ಯವಿಲ್ಲ. ಆದರೆ ವೈಜ್ಞಾನಿಕವಾಗಿ ನೋಡಿದರೆ ನನಗ್ಯಾವ ಹೊಸತು ಕಾಣಿಸುತ್ತಿಲ್ಲ. ವೈದ್ಯಕೀಯ ಇತಿಹಾಸ ತೆಗೆದು ನೋಡಿದರೆ ಹತ್ತು ವರ್ಷಕ್ಕೊಮ್ಮೆ ಹೊಸಮಾದರಿಯ ವಿಷಭರಿತ ವೈರಸ್​ಗಳು ಕಾಣಿಸುವುದು ಸಾಮಾನ್ಯ. ಪ್ರತಿ ಪ್ರಾಣಿ ಪಕ್ಷಿಗಳಲ್ಲೂ ಆಗಾಗ ಹೊಸ ವೈರಸ್ ಸಂತತಿ ಜನುಮತಾಳುತ್ತಿರುತ್ತವೆ.

ಹಾಗೇ ಈ ಸರತಿ ಮಾನವನಲ್ಲಿ ಆಗಿದೆ. ನೂರು ವರ್ಷಗಳಲ್ಲಿ ಒಂದು ಮುಖ್ಯ ಪ್ಯಾಂಡಮಿಕ್ (ಜಾಗತಿಕ ರೋಗ) ಬರುತ್ತದೆ. ಅದೇ ಈಗ ಕೊರೊನಾ ರೂಪದಲ್ಲಿ ಬಂದಿದೆ. ಕೆಲವೊಮ್ಮೆ ರೋಗಗಳು ಪ್ರಾಣಿಗಳಿಂದ ಮತ್ತು ಪಕ್ಷಿಗಳಿಂದ ಮನುಷ್ಯನಿಗೆ ಹರಡುವ ಸಾಧ್ಯತೆ ಇರುತ್ತದೆ. ಹಾಗೆ ಹರಡಿ ಬಂದಿರುವುದೇ ಈ ಮಂಕಿಪಾಕ್ಸ್ (ಕೋತಿ ಸಿಡುಬು).

1. ಕೊರೊನಾ ಮತ್ತು ಮಂಕಿ ಪಾಕ್ಸ್​ಗೂ ಏನಾದರೂ ಸಂಬಂಧ ಇದೆಯೇ?

ಇಲ್ಲ. ಕೊರೊನಾವೇ ಬೇರೆ. ಮಂಕಿಪಾಕ್ಸೇ ಬೇರೆ.

2. ಎಲ್ಲಿಂದ ಬಂತು ಈ ಮಂಕಿ ಪಾಕ್ಸ್ (ಕೋತಿ ಸಿಡುಬು)? ಇದೇನು ಹೊಸ ರೋಗವೇ?

ಇದೊಂದು ಹಳೆಯ ರೋಗ. ಮಂಕಿಪಾಕ್ಸ್ ವೈರಾಣುವಿನಿಂದ ಬರುತ್ತದೆ. ಇದನ್ನು 1958ರಲ್ಲಿ ಗುರುತಿಸಲಾಗಿದೆ. 1970 ರಲ್ಲಿ ಮೊದಲ ಸೋಂಕಾದ ಮಾನವನನ್ನು ಕಾಂಗೋ ದೇಶದಲ್ಲಿ ಪತ್ತೆ ಹಚ್ಚಲಾಗಿತ್ತು. ಹೆಚ್ಚಿನ ಪತ್ತೆಯಾದ ರೋಗಿಗಳು ಆಫ್ರಿಕಾ ಖಂಡದಲ್ಲಿ ಜೀವಿಸಿರುವವರಾಗಿರುತ್ತಾರೆ. ಮಂಕಿಪಾಕ್ಸ್ ವೈರಸ್ ಇಲಿಗಳಲ್ಲಿ ಮತ್ತು ಕೋತಿಗಳಲ್ಲಿ ಹರಡುವುದು ಸಾಮಾನ್ಯ. ಸೋಂಕಾದ ಪ್ರಾಣಿಗಳು ಮನುಷ್ಯನ ಸಂಪರ್ಕ ಪಡೆದಾಗ ಅವರಿಗೂ ಹರಡುವ ಸಾಧ್ಯತೆ ಇರುತ್ತದೆ.

2003 ರಲ್ಲಿ ಅಮೇರಿಕಾದಲ್ಲಿ 47 ರೋಗಿಗಳು ಪತ್ತೆಯಾಗಿದ್ದರು. ಆಫ್ರಿಕಾ ದಿಂದ ತರಿಸಿಕೊಂಡ ಪ್ರಾಣಿಗಳ ಮೂಲಕ ಸೋಂಕು ಅಮೆರಿಕ ರವಾನಾಗಿರುವ ಶಂಕೆ ವ್ಯಕ್ತಪಡಿಸಲಾಗಿತ್ತು.

ಈ ರೋಗ ಕೂಡ ಸಿಡುಬು ರೋಗಕ್ಕೆ ಸಂಭಂದಿಸಿದ್ದರಿಂದ ಚಿಕನ್ ಪಾಕ್ಸ್ ಲಸಿಕೆ ಪಡೆಯುವುದರಿಂದ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಸಾದ್ಯವಿದೆ. ಇದು ಶೇಖಡಾ 85 ರಷ್ಟು ರಕ್ಷಣೆ ನೀಡುತ್ತದೆ.

3.ಇತ್ತೀಚೆಗೆ ಮಂಕಿಪಾಕ್ಸ್ ರೋಗ ಮಾಧ್ಯಮಗಳಲ್ಲಿ ಏಕೆ ಸದ್ದು ಮಾಡುತ್ತಿದೆ?

ಇತ್ತೀಚೆಗೆ ಯಾವುದೇ ಅಂತಾರಾಷ್ಟ್ರೀಯ ಸೋಂಕುಗಳು ಸುದ್ದಿ ಮಾಡುವುದು ಸಹಜವಾಗಿದೆ. ಜನರಿಗೆ ಈ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆ ಅಗತ್ಯವಿದೆ.

4. ಮಂಕಿಪಾಕ್ಸ್ ಕಾಯಿಲೆ ಎಂದರೇನು ?

ಹಿಂದೆ ಹೇಳಿದಂತೆ ಮಂಕಿಪಾಕ್ಸ್ ಒಂದು ವೈರಾಣುವಿನ ಸೋಂಕಿನಿಂದ ಉಂಟಾಗುವ ಅಪರೂಪದ ಕಾಯಿಲೆಯಾಗಿದೆ. ಮಂಕಿಪಾಕ್ಸ್ ವೈರಸ್ ಪಾಕ್ಸ್ ವಿರಿಡೆ ಕುಟುಂಬದಲ್ಲಿ ಆರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದೆ ಒಂದು ವೈರಸ್. ಇದೊಂದು ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುವ ಒಂದು ಸೋಂಕು ರೋಗವಾಗಿದೆ. ಹೆಚ್ಚಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಸಾಂದರ್ಭಿಕವಾಗಿ ಇತರ ಪ್ರದೇಶಗಳಿಗೆ ಹರಡುವ ಸಾದ್ಯತೆ ಇರುತ್ತದೆ.

5. ಮಂಕಿಪಾಕ್ಸ್ ಕಾಯಿಲೆ ಹೇಗೆ ಹರಡುತ್ತದೆ?

ಮಂಕಿಪಾಕ್ಸ್ ಮನುಷ್ಯನಲ್ಲಿ ಕಾಣುವುದು ಬಹಳ ಅಪರೂಪ. ಸೋಂಕಿತ ಪ್ರಾಣಿಗಳ ರಕ್ತ, ದೈಹದಿಂದ ಸ್ರವಿಸುವ ದ್ರವಗಳು ಅಥವಾ ಚರ್ಮದ ಅಥವಾ ದೇಹದ ಅಂಗಾಂಶಗಳಿಗೆ ತಾಗಿದಾಗ ಅಥವಾ ಸೋಂಕಿತ ದ್ರವಗಳು ಗಾಯಗಳೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ ಮಂಕಿಪಾಕ್ಸ್ ರೋಗ ಹರಡುವ ಸಾದ್ಯತೆ ಇದೆ.

ಅಸಮರ್ಪಕವಾಗಿ ಬೇಯಿಸಿದ ಮಾಂಸ ಮತ್ತು ಸೋಂಕಿತ ಪ್ರಾಣಿಗಳ ಉತ್ಪನ್ನಗಳ ಮೂಲಕವೂ ಮಂಕಿಪಾಕ್ಸ್ ವೈರಸ್ ಹರಡಬಹುದಾಗಿದೆ. ಸೋಂಕಿತ ವ್ಯಕ್ತಿಯೊಂದಿಗೆ ಯಾವುದೇ ಸಂಪರ್ಕ ಬಂದರೂ ವೈರಾಣು ಹರಡುವ ಸಾದ್ಯತೆ ಇದೆ.

ಈ ವೈರಾಣು ಉಸಿರಾಟದ ಮೂಲಕವೂ ಹರಡಬಹುದಾಗಿದೆ.

ಪ್ರಾಣಿಪ್ರಿಯರು ಈ ಬಗ್ಗೆ ಎಚ್ಚರ ವಹಿಸಬೇಕು. ಸಾಕು ಪ್ರಾಣಿಗಳನ್ನು ಸೋಂಕಿತ ಪ್ರಾಣಿಗಳ ಮತ್ತು ವ್ಯಕ್ತಿಯ ಜೊತೆ ಸೇರುವುದನ್ನು ತಡೆಯಬೇಕು ಮತ್ತು ಸೋಂಕನ ಲಕ್ಷಣಗಳಿದ್ದರೆ ಪಶುವೈದ್ಯರ ಸಲಹೆ ಪಡೆಯಬೇಕು.

6. ಮಂಕಿಪಾಕ್ಸ್ ವೈರಸ್ ದೇಹ ಸೇರಿದ ನಂತರ ಎಷ್ಟು ದಿನಗಳಾದ ಮೇಲೆ ರೋಗಲಕ್ಷಣಗಳು ಕಾಣಿಸಬಹುದು?

ವೈರಸ್​ಗಳು ದೇಹ ಪ್ರವೇಶಿಸಿದ ನಂತರ ಜೀವಕೋಶಗಳಲ್ಲಿ ಬೆಳೆದು ರೋಗಲಕ್ಷಣಗಳನ್ನು ಹೊರಹಾಕಲು 5 ರಿಂದ 21 ದಿನಗಳ ಕಾಲ ಬೇಕಾಗುತ್ತದೆ.

7. ಮಂಕಿಪಾಕ್ಸ್ ಕಾಯಿಲೆಯ ಲಕ್ಷಣಗಳಾವುವು?

ದೇಹದಲ್ಲಿ ಮಂಕಿಪಾಕ್ಸ್ ರೋಗವು ಅನೇಕ ಲಕ್ಷಣಗಳನ್ನು ತೋರಬಹುದು. ಅವೆಂದರೆ, ಜ್ವರ, ಚರ್ಮದ ಮೇಲೆ ದದ್ದಾಗುವುದು, ತೀವ್ರವಾದ ತಲೆನೋವು, ಮೈಕೈ ನೋವು, ಸ್ನಾಯುಗಳ ನೋವು, ಶಕ್ತಿ ಹೀನತೆ ಮತ್ತು ದುಗ್ಧರಸ ಗ್ರಂಥಿಗಳ ಊತ ಇತರೆ.

ಜ್ವರ ಕಾಣಿಸಿಕೊಂಡ 1-3 ದಿನಗಳಲ್ಲಿ ಮಂಕಿಪಾಕ್ಸ್ ರೋಗಿಗಳಲ್ಲಿ ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಳ್ಳಬಹುದು. ಅವು ಮುಖದ ಮೇಲೆ ಹೆಚ್ಚು ಸಂಖ್ಯೆಯಲ್ಲಿ ಕಾಣಬಹುದು. ಅದಲ್ಲದೇ, ಅಂಗೈಗಳು ಮತ್ತು ಪಾದಗಳ ಅಡಿಭಾಗ, ಬಾಯಿಯ ಒಳಮೇಲ್ಮೈಯಲ್ಲಿ, ಜನನಾಂಗಗಳ ಮೇಲೆ, ಮತ್ತು ಕಣ್ಣಿನ ರೆಪ್ಪೆ ಮತ್ತು ಕಣ್ಣಿನ ಹೊರಪದರವಾದ ಕಾಂಜಂಕ್ಟಿವಾ ಮತ್ತು ಪಾರದರ್ಶಕ ಭಾಗವಾದ ಕಾರ್ನಿಯಾದಲ್ಲಿ ದದ್ದುಗಳು ಕಾಣಬಹುದು. ಇಂತಹ ಸಂದರ್ಭದಲ್ಲಿ ಕಣ್ಣಿನ ದೃಷ್ಟಿ ದೋಷ ಉಂಟಾಗುವ ಸಾಧ್ಯತೆ ಇರುತ್ತದೆ.

ದದ್ದುಗಳು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳತ್ತಾ ನಿರುತುಂಬಿದ, ಕೀವುತುಂಬಿದ ಗುಳ್ಳೆಗಳಾಗಿ ಮಾರ್ಪಾಡಾಗುತ್ತವೆ. ನಂತರ ಮಚ್ಚೆಗಳು ಉಳಿದುಕೊಳ್ಳಬಹುದು.

8. ಮಂಕಿಪಾಕ್ಸ್​ ಅನ್ನು ಅಥವಾ ಇತರೆ ಸಿಡುಬು. ಇವುಗಳನ್ನು ಬೇರ್ಪಡಿಸುವುದು ಹೇಗೆ? ಎಲ್ಲಾ ಸಿಡುಬು ಒಂದೇ ಅಲ್ಲವೇ?

ಇಲ್ಲ. ಎಲ್ಲಾ ಸಿಡುಬು ಒಂದೇ ಅಲ್ಲ. ಮಂಕಿಪಾಕ್ಸ್, ಸ್ಮಾಲ್ ಪಾಕ್ಸ್, ಚಿಕನ್ ಪಾಕ್ಸ್ ಒಂದೇ ಕುಟುಂಬದ ಸದಸ್ಯರಾದರೂ ಅವು ಬೇರೆ ಬೇರೆ ಜೀವತಂತ್ರಾಂಶಗಳನ್ನು ಹೊಂದಿವೆ. ಹಾಗಾಗಿ ಇದನ್ನು ಕಂಡು ಹಿಡಿಯಲು ಪಿಸಿಆರ್ ಟೆಸ್ಟ್ ಮಾಡಿದರೆ ತಿಳಿಯುತ್ತದೆ.

9. ಮಂಕಿಪಾಕ್ಸ್​ಗೆ ಚಿಕಿತ್ಸೆ ಏನು? 

ಅನೇಕ ವೈರಸ್​ಗಳಿಗೆ ಚಿಕಿತ್ಸೆ ಇಲ್ಲ. ಅವಕ್ಕೆ ಉತ್ತಮ ದೇಹದ ರೋಗನಿರೋಧಕ ಶಕ್ತಿಯೇ ಚಿಕಿತ್ಸೆಯಾಗಿದೆ. ಅದರಂತೆ ಮಂಕಿಪಾಕ್ಸ್​ಗೂ ಸದ್ಯಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸ ಇಲ್ಲ.

ಸಿಡುಬು ವಿರುದ್ಧ ಬಳಸುವ ವ್ಯಾಕ್ಸಿನ್ ಮಂಕಿಪಾಕ್ಸ್ ರೋಗವನ್ನು ತಡೆಗಟ್ಟುವಲ್ಲಿ ಶೇಕಡಾ 85 ℅ ರಷ್ಟು ಪರಿಣಾಮಕಾರಿ ಎಂದು ತಿಳಿದಿದೆ. ಆದ್ದರಿಂದ, ಮಂಕಿಪಾಕ್ಸ್​ನ ಗಂಭೀರ ಲಕ್ಷಣಗಳನ್ನು ತಡೆಗಟ್ಟಲು ಸಿಡುಬು ಲಸಿಕೆಯನ್ನು ತೆಗೆದು ಕೊಂಡಿದ್ದರೆ ಹೆದರುವ ಅವಶ್ಯಕತೆ ಇಲ್ಲ.

ಸೋಂಕಾದವರು ರೋಗಲಕ್ಷಣಗಳು ಬರುವ ಮುನ್ನ ಕೆಲವು ಔಷಧಗಳನ್ನು ನಿಮ್ಮ ವೈದ್ಯರು ಸಲಹೆ ಮಾಡುವರು. ಅಕಸ್ಮಾತ್ ನೀವು ಸೋಂಕು ಹೊಂದಿರುವ ಅನುಮಾನ ಇದ್ದರೆ ವೈದ್ಯರ ಸಲಹೆ ಪಡೆಯಿರಿ.

10. ಲೈಂಗಿಕ ಸಂಪರ್ಕ ದಿಂದ ವೈರಸ್​ ಹರಡಬಹುದೇ?

ಹಿಂದೆ ಹೇಳಿದಂತೆ ಮಂಕಿಪಾಕ್ಸ್ ಸೊಂಕಿರುವ ವ್ಯಕ್ತಿಯೊಂದಿಗೆ ಚರ್ಮದಿಂದ ಚರ್ಮಕ್ಕೆ ತಗುಲಿದರೆ ವೈರಸ್ ಹಂಚಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗೆಯೇ ಮಂಕಿಪಾಕ್ಸ್ ಉಸಿರಾಟದಲ್ಲಿ ಇರುವ ಉಗಳುಗುಳ್ಳೆಗಳಲ್ಲಿ ವೈರಸ್ ಅಡಗಿದ್ದರೆ, ಅಥವಾ ಗಾಯಗಳು, ಮೂಗು, ಬಾಯಿ ಅಥವಾ ಕಣ್ಣುಗಳು ಸ್ರವಿಸುವ ರಸಗಳಲ್ಲಿ ಇದ್ದರೆ ಆಗ ಈ ಮೂಲಕ ವೈರಾಣುಗಳು ದೇಹವನ್ನು ಪ್ರವೇಶಿಸಬಹುದು. ಜನನಾಂಗದಲ್ಲಿ ಸಿಡುಬು ಗುಳ್ಳೆಗಳಿದ್ದರೆ ಆಗಲೂ ಲೈಂಗಿಕ ಕ್ರಿಯೆಯಿಂದ ರೋಗ ಹರಡುವ ಸಾಧ್ಯತೆ ಇದೆ.

ಲೇಖಕರ ಪರಿಚಯ: ಡಾ. ಶಿವಮೂರ್ತಿ MBBS, MD MBA, ಅವರು, ವೃತ್ತಿಯಲ್ಲಿ ವೈದ್ಯರು ಮತ್ತು ಔಷಧಶಾಸ್ತ್ರಜ್ಞರು, ತಮ್ಮ 21 ವರ್ಷದ ವೃತ್ತಿ ಜೀವನದಲ್ಲಿ ಹಲವಾರು ಉತ್ತಮ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿ ಕೆಲಸ ಮಾಡಿದ್ದಾರೆ.

ಔಷಧ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ರಾಜೀವ್​ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮೊದಲ ರಾಂಕ್ ಪಡೆದು ಉತ್ತೀರ್ಣರಾದ ಬಳಿಕ ಸಂತ ಜಾನ್ ವೈದ್ಯಕೀಯ ಕಾಲೇಜು, ಬೆಂಗಳೂರು, ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜು, ವಯನಾಡು ಅಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿ ಈಗ ಡಾ. ಚಂದ್ರಮ್ಮ ದಯಾನಂದ ಸಾಗರ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಇಲ್ಲಿ ಸಹ ಪ್ರಾಧ್ಯಾಪಕರಾಗಿ ಔಷಧಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಡಾ. ಶಿವಮೂರ್ತಿಯವರು ವೈದ್ಯಕೀಯ ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ್ದು, ಹಲವು ಕಂಪನಿಗಳ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಲೋಟಸ್ ಲ್ಯಾಬ್, ಫೋರ್ಟಿಸ್ ಕ್ಲಿನಿಕಲ್ ರಿಸರ್ಚ್​, ಕ್ಯಾರ್ಟೇಸಿಯನ್ ರಿಸರ್ಚ್, ಐಕಾನ್ ರಿಸರ್ಚ್​, ಜುಬಿಲ್ಯಾಂಟ್ ರಿಸರ್ಚ್​, ಇತರೆ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.

ನೋವಾನಾರ್ಡಿಸ್ ಫಾರ್ಮಾ ಕಂಪನಿಯಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದು, ಅನೇಕ ಔಷಧಗಳ ಸಂಶೋಧನೆಯಲ್ಲಿ ತೊಟಗಿಸಿಕೊಂಡ ಅನುಭವವಿದೆ.

ಡಾ. ಶಿವಮೂರ್ತಿ ಅವರು, ಸಾಹಿತ್ಯ, ಕಲೆ, ಹಾಡುಗಾರಿಕೆಯಲ್ಲಿ ವಿಶೇಷ ಒಲವು ಹೊಂದಿದ್ದು, ವೈದ್ಯಕೀಯ ಕವನ, ಹಾಡು ಬರೆಯುವುದು, ಅವಕ್ಕೆ ರಾಗಸಂಯೋಜಿಸುವುದು, ಆರೋಗ್ಯಕ್ಕೆ ಸಂಭಂದಿಸಿದ ಕಥೆ ಮತ್ತು ಸಂಭಾಷಣೆ ಬರೆಯುವುದು, ವೈದ್ಯಕೀಯ ಆರೊಗ್ಯ ಮಾಹಿತಿ ಸಾರುವ ಬರಹಗಳನ್ನು ಬರೆಯುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ