AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monkeypox ಮಂಕಿಪಾಕ್ಸ್‌ ಎದುರಿಸಲು ಭಾರತ ಸಿದ್ಧ ಎಂದ ಐಸಿಎಂಆರ್; ಸಾಮೂಹಿಕ ಲಸಿಕೆ ಅಗತ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಫಿನ್ಲ್ಯಾಂಡ್ ಶುಕ್ರವಾರ ತನ್ನ ಮೊದಲ ಮಂಕಿಪಾಕ್ಸ್ ಪ್ರಕರಣವನ್ನು ದೃಢಪಡಿಸಿದೆ ಮತ್ತು ಕೆನಡಾ 10 ಹೊಸ ಸೋಂಕುಗಳನ್ನು ವರದಿ ಮಾಡಿದೆ. ಇಲ್ಲಿ ಪ್ರಕರಣಗಳ ಸಂಖ್ಯೆ 25 ಕ್ಕೆ ಏರಿದೆ. ಅಮೆರಿಕ ಏಳು ರಾಜ್ಯಗಳಲ್ಲಿ ಒಂಬತ್ತು ಹೆಚ್ಚುವರಿ ಪ್ರಕರಣಗಳನ್ನು ದೃಢಪಡಿಸಿದೆ.

Monkeypox ಮಂಕಿಪಾಕ್ಸ್‌ ಎದುರಿಸಲು ಭಾರತ ಸಿದ್ಧ ಎಂದ ಐಸಿಎಂಆರ್; ಸಾಮೂಹಿಕ ಲಸಿಕೆ ಅಗತ್ಯವಿಲ್ಲ: ವಿಶ್ವ ಆರೋಗ್ಯ ಸಂಸ್ಥೆ
ಮಂಕಿಪಾಕ್ಸ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: May 27, 2022 | 7:35 PM

Share

ಉತ್ತರ ಅಮೆರಿಕ ಮತ್ತು ಯುರೋಪ್ ನಲ್ಲಿರುವ 20 ದೇಶಗಳಲ್ಲಿ 200ಕ್ಕಿಂತಲೂ ಹೆಚ್ಚು ಮಂಕಿಪಾಕ್ಸ್ (monkeypox )ಪ್ರಕರಣ ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು (WHO) ಸಾಂಕ್ರಾಮಿಕ ರೋಗವನ್ನು ‘ತಡೆಹಿಡಿಯಬಹುದಾದ’ ರೋಗ (containable) ಎಂದು ವಿವರಿಸಿದೆ. ಲಭ್ಯವಿರುವ ಸೀಮಿತ ಲಸಿಕೆಗಳು ಮತ್ತು ಔಷಧಿಗಳನ್ನು ಸಮಾನವಾಗಿ ಹಂಚಿಕೊಳ್ಳಲು ಸಂಗ್ರಹ ಮಾಡುವಂತೆ ದೇಶಗಳಿಗೆ ಸೂಚಿಸಿದೆ. ಈ ದೇಶಗಳಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದರೂ ಭಾರತದಲ್ಲಿ ಇದುವರೆಗೆ ಯಾವುದೇ ಸೋಂಕು ವರದಿಯಾಗಿಲ್ಲ, ಸೋಂಕು ಎದುರಿಸಲು ನಾವು ಸಿದ್ಧವಾಗಿದ್ದೇವೆ ಎಂದು ಭಾರತ ಹೇಳಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಪ್ರಕಾರ ಸೋಂಕು ಬಗ್ಗೆ ಕೇಂದ್ರ ಗಮನ ಹರಿಸಿದೆ. ಮಂಕಿಪಾಕ್ಸ್ ಬಾಧಿತ ದೇಶಗಳಿಗೆ ಪ್ರಯಾಣ ಮಾಡದಂತೆ ಐಸಿಎಂಆರ್ ಸಂಶೋಧಕಿ ಡಾ ಅಪರ್ಣಾ ಮುಖರ್ಜಿ ಜನರಲ್ಲಿ ವಿನಂತಿಸಿದ್ದಾರೆ. ಜ್ವರ, ಮೈ ಕೈ ನೋವು ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಪರೀಕ್ಷಿಸಿಕೊಳ್ಳಿ ಎಂದು ಅವರು ಹೇಳಿದ್ದಾರೆ.

ಮಂಕಿಪಾಕ್ಸ್ ವೈರಸ್ ಸೋಂಕು ಬಗ್ಗೆ ಇತ್ತೀಚಿನ ಬೆಳವಣಿಗೆಗಳು

1. ಮಂಕಿಪಾಕ್ಸ್ ಪ್ರಕರಣಗಳು ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೆರಿಕದಲ್ಲಿ ಪತ್ತೆಯಾಗುತ್ತಿವೆ. ಆದರೆ ಜನರು ಭಯಪಡಬಾರದು ಎಂದು ಐಸಿಎಂಆರ್ ವಿಜ್ಞಾನಿ ಡಾ. ಅಪರ್ಣಾ ಮುಖರ್ಜಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. “ತೀವ್ರ ಜ್ವರ, ದುಗ್ಧರಸ ಗ್ರಂಥಿ ಹಿಗ್ಗುವಿಕೆ (ಲಿಂಫಾಡೆನೋಪತಿ), ಹಿರಿದಾಗುವ ದುಗ್ಧರಸ ಗ್ರಂಥಿಗಳು, ದೇಹದ ನೋವು, ದದ್ದುಗಳು, ಇತ್ಯಾದಿಗಳಂತಹ ಅಸಾಮಾನ್ಯ ಲಕ್ಷಣಗಳನ್ನು ನಾವು ಗಮನಿಸಬೇಕು. ವಿಶೇಷವಾಗಿ ಸೋಂಕಿತ ದೇಶಗಳಿಂದ ಪ್ರಯಾಣದ ಇತಿಹಾಸವನ್ನು ಹೊಂದಿರುವವರು ಇದನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
ಮಂಕಿಪಾಕ್ಸ್ ಹಾಗೂ ಕೊರೊನಾ ಸೋಂಕು ಏಕಕಾಲಕ್ಕೆ ದೇಹದಲ್ಲಿರಬಹುದೇ?
Image
Monkeypox: ಬನ್ನೇರುಘಟ್ಟ ಪಾರ್ಕ್ ಸುತ್ತಲಿನ‌ ಜನಕ್ಕೆ ಶುರುವಾಯ್ತು ಮಂಕಿ ಪಾಕ್ಸ್ ಭಯ, ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ
Image
Monkeypox: ಬೆಲ್ಜಿಯಂನಲ್ಲಿ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ಪತ್ತೆ | ರೋಗಿಗಳಿಗೆ 21 ದಿನಗಳ ಕಾಲ ಕ್ವಾರಂಟೈನ್
Image
Monkeypox: ಟ್ರಾವೆಲ್ ಹಿಸ್ಟರಿಯೇ ಇಲ್ಲದಿದ್ರೂ ಆಫ್ರಿಕಾದ ಹೊರಗೂ ಹಬ್ಬುತ್ತಿದೆ ಮಂಕಿಪಾಕ್ಸ್

2. ಇತರ ದೇಶಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು ಎಂದು ವಿಶ್ವ ಆರೋಗ್ಯಸಂಸ್ಥೆ ಹೇಳಿದೆ. ತ್ವರಿತಕ್ರಮಗಳ ಮೂಲಕ ಇದನ್ನು ಸಾಧಿಸಬಹುದು. ನಾವು ಈಗ ಸರಿಯಾದ ಕ್ರಮಗಳನ್ನು ತೆಗೆದುಕೊಂಡರೆ ನಾವು ಅದನ್ನು ಸುಲಭವಾಗಿ ಅದನ್ನು ಸಾಧಿಸಬಹುದು ಎಂದು ನಾವು ಭಾವಿಸುವುದಾಗಿ ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯ ವಾರ್ಷಿಕ ಅಸೆಂಬ್ಲಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕಿ ಸಿಲ್ವಿ ಬ್ರಿಯಾಂಡ್ ಹೇಳಿದ್ದಾರೆ.

3. ಪ್ರಸ್ತುತ ಮಂಕಿಪಾಕ್ಸ್ ವೈರಸ್ ವಿರುದ್ಧ ಸಾಮೂಹಿಕ ವ್ಯಾಕ್ಸಿನೇಷನ್ ಅಗತ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ, ಆದರೆ ಸೋಂಕಿತ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರುವವರಿಗೆ ವ್ಯಾಕ್ಸಿನೇಷನ್ ಲಭ್ಯವಿದೆ ಎಂದು ಅವರು ಹೇಳಿದ್ದಾರೆ.

4. ಯುರೋಪ್‌ನ ಅತಿದೊಡ್ಡ ಗೇ ಪ್ರೈಡ್ ಆಚರಣೆಗಳು ಸಮೀಪಿಸುತ್ತಿವೆ. ಸ್ಪೇನ್‌ನ LGBTQ ಸಮುದಾಯವು ಖಂಡದಲ್ಲಿ ಮಂಕಿಪಾಕ್ಸ್‌ನ ಏಕಾಏಕಿ ಸೋಂಕು ಏಪಿಕೆಯಾಗಿದ್ದು ರೋಗದ ಬಗ್ಗೆ ತಪ್ಪು ಗ್ರಹಿಕೆಗಳಿಂದ ಸಲಿಂಗಕಾಮಿಗಳು ಚಿಂತಿತರಾಗಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

5. ಫಿನ್ಲ್ಯಾಂಡ್ ಶುಕ್ರವಾರ ತನ್ನ ಮೊದಲ ಮಂಕಿಪಾಕ್ಸ್ ಪ್ರಕರಣವನ್ನು ದೃಢಪಡಿಸಿದೆ ಮತ್ತು ಕೆನಡಾ 10 ಹೊಸ ಸೋಂಕುಗಳನ್ನು ವರದಿ ಮಾಡಿದೆ. ಇಲ್ಲಿ ಪ್ರಕರಣಗಳ ಸಂಖ್ಯೆ 25 ಕ್ಕೆ ಏರಿದೆ. ಅಮೆರಿಕ ಏಳು ರಾಜ್ಯಗಳಲ್ಲಿ ಒಂಬತ್ತು ಹೆಚ್ಚುವರಿ ಪ್ರಕರಣಗಳನ್ನು ದೃಢಪಡಿಸಿದೆ. ಮೇ 18 ರಂದು ಮೊದಲ ಬಾರಿಗೆ ಪತ್ತೆಯಾದ ನಂತರ ಅಮೆರಿಕದಲ್ಲಿ ಒಟ್ಟು ಸೋಂಕುಗಳ ಸಂಖ್ಯೆ 11 ಕ್ಕೆ ಏರಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ