Independence day: ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ ನೆರವೇರಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಇವತ್ತು ಹರ್ ಘರ್ ತಿರಂಗಾ ಹಾರಾಡುತ್ತಿದೆ. ಇವತ್ತು ದೊಡ್ಡ ಸಂಚಲನವಾಗುತ್ತಿದೆ. ಅಮೃತ್ ಮಹೋತ್ಸವದಲ್ಲಿ ಮನೆ ಮನೆಯಲ್ಲೂ ತ್ರಿವಣ ಹಾರಿಸುವ ಮೂಲಕ 75ನೇ ವರ್ಷದ ಸ್ವಾತಂತ್ರ್ಯ ಆಚರಣೆಯಾಗುತ್ತಿದೆ.
ಬೆಂಗಳೂರು: ಭಾರತಕ್ಕೆ ದೂರದೃಷ್ಟಿ ಇರುವ ನಾಯಕ ಸಿಕ್ಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಹರ್ ಘರ್ ತಿರಂಗ (Har Ghar Tiranga) ಕರೆಗೆ ದೇಶದ 40ಕೋಟಿ ಜನ ತಿರಂಗ ಹಾರಿಸಿದ್ದಾರೆ. ಬರುವ 100 ವರ್ಷಗಳಲ್ಲಿ ಭಾರತ ನಂಬರ್ 1 ಆಗಬೇಕು. ಸಬಕಾ ಸಾಥ್, ಸಬಕಾ ವಿಕಾಸ್ ಸಬಕಾ ವಿಶ್ವಾಸ್ ಎಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆ ನಗರದ ಮಲ್ಲೇಶ್ವರಂನ 18ನೇ ಅಡ್ಡ ರಸ್ತೆಯ ಮೈದಾನದಲ್ಲಿ ಮಧ್ಯರಾತ್ರಿ 12 ಗಂಟೆಗೆ ಧ್ವಜಾರೋಹಣ ನೆರವೇರಿಸಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಈ ದೇಶದಲ್ಲಿ ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದು ಮೊದಲು ರೈತರು. ಇವತ್ತಿನ ದಿನ ನಾಡಿನ ಜನ ಮಲಗೋದಿಲ್ಲ. ಎಲ್ಲೆಲ್ಲೂ ಸಂಭ್ರಮ ಇದೆ. ರಾಜ್ಯದಲ್ಲಿ, ದೇಶದಲ್ಲಿ ಸಾವಿರಾರು ಜನ ಅನಾಮಧೇಯ ಹೋರಾಟಗಾರರಿದ್ದಾರೆ. ಸ್ವಾತಂತ್ರ್ಯ ಮಾಡುವ ನಿಟ್ಟಿನಲ್ಲಿ ಹೋರಾಟ ಮಾಡಬೇಕು ಅಂತ ತಮ್ಮ ಜೀವನ ತ್ಯಾಗ ಮಾಡಿದ್ದಾರೆ ಎಂದು ಸ್ವಾತಂತ್ರ್ಯ ಹೋರಾಟ ಶುರುವಾಗಿದ್ದು 1947 ರಲ್ಲಿ. 1924 ರಾಣಿ ಚೆನ್ನಮ್ಮ ಮೊದಲು ಸ್ವಾತಂತ್ರ್ಯ ಹೋರಾಟ ಶುರು ಮಾಡಿದರು.
ಇದನ್ನೂ ಓದಿ: Independence Day Celebration 2022 Live: ಕೆಂಪುಕೋಟೆಯಲ್ಲಿ ಧ್ವಜಾರೋಹಣಕ್ಕೆ ಕ್ಷಣಗಣನೆ
ಲೋಕಮಾನ್ಯ ತಿಲಕ್, ಲಾಲ ಲಜಪಾತ್ ರಾಯ್, ಸುಭಾಸ್ ಚಂದ್ರ ಬೋಸ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್ ಇವರು ನಿಜವಾದ ಹೊರಟಗಾರರು. ಇವರನ್ನು ನೆನೆಸುವುದು ನಮ್ಮ ಕರ್ತವ್ಯ. ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ಯಾರ್ಯಾರು ಏನೇನ್ ಮಾಡಿದ್ದಾರೆ ಎಲ್ಲರಿಗೂ ಗೊತ್ತೇ ಇದೆ ಎಂದು ಹೇಳಿದರು. ಸಿಎಂ ಜೊತೆಯಲ್ಲಿ ಡಾ.ಸಿ.ಎನ್ ಅಶ್ವಥ್ ನಾರಯಣ್ ಧ್ವಜಾರೋಹಣ ನೆರವೇರಿಸಿದರು.
ಜಾತಿ, ಧರ್ಮಗಳನ್ನ ಮೀರಿ ಒಗ್ಗಟ್ಟಿನಲ್ಲಿ ಬಾಳೋಣ: ಡಾ.ಸಿ.ಎನ್ ಅಶ್ವಥ್ ನಾರಯಣ್
ಡಾ.ಸಿ.ಎನ್ ಅಶ್ವಥ್ ನಾರಯಣ್ ಮಾತನಾಡಿ, ಇವತ್ತು ಹರ್ ಘರ್ ತಿರಂಗಾ ಹಾರಾಡುತ್ತಿದೆ. ಇವತ್ತು ದೊಡ್ಡ ಸಂಚಲನವಾಗುತ್ತಿದೆ. ಅಮೃತ್ ಮಹೋತ್ಸವದಲ್ಲಿ ಮನೆ ಮನೆಯಲ್ಲೂ ತ್ರಿವಣ ಹಾರಿಸುವ ಮೂಲಕ 75ನೇ ವರ್ಷದ ಸ್ವಾತಂತ್ರ್ಯ ಆಚರಣೆಯಾಗುತ್ತಿದೆ. ಈ ಸ್ವಾತಂತ್ರ್ಯ ಪಡೆಯುವಲ್ಲಿ ನಮ್ಮ ದೇಶದ ವೀರರ ತ್ಯಾಗ ಬಲಿದಾನವಿದೆ. ಅವರ ಕನಸನ್ನ ನನಸನ್ನ ಮಾಡುವಂತದ್ದು ಆಗಬೇಕು. 75 ಮತ್ತು 100 ಕಾಲದ ಮಧ್ಯದಲ್ಲಿ 25 ವರ್ಷದ ಅಮೃತ ಮಹೋತ್ಸವವನ್ನ ಮಾಡಬೇಕು. ಉತ್ತಮ ದೇಶವನ್ನ ಕಟ್ಟವಲ್ಲಿ ನಾವೆಲ್ಲರು ಶ್ರಮವಹಿಸಬೇಕು. ನಿಜಕ್ಕೂ ಇವತ್ತು ನೀವೂ ಸೇರಿರುವುದೇ ನಿಮ್ಮ ದೇಶಭಕ್ತಿ ತೋರಿಸುತ್ತದೆ. ಜಾತಿ, ಧರ್ಮಗಳನ್ನ ಮೀರಿ ಒಗ್ಗಟ್ಟಿನಲ್ಲಿ ಬಾಳೋಣ. ವಿವಿಧತೆಯಲ್ಲಿ ಏಕತೆಯನ್ನ ತೋರಿಸೋಣ ಎಂದು ಹೇಳಿದರು.
ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ ಮಾಡಿಸಿದ ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್ನಲ್ಲಿ ಪೌರ ಕಾರ್ಮಿಕ ಮಹಿಳೆಯಿಂದ ಶಾಸಕ ಸಿ.ಟಿ.ರವಿ. ಧ್ವಜಾರೋಹಣ ಮಾಡಿಸಿದರು. ಪೌರ ಕಾರ್ಮಿಕ ಮಹಿಳೆ ನಾಗಮ್ಮ ಎಂಬುವರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಕಾಫಿನಾಡಲ್ಲಿ ಅದ್ಧೂರಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಜರುಗಿದ್ದು, ಧ್ವಜಾರೋಹಣದಲ್ಲಿ 2000ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ನಗರದ ಮುಖ್ಯ ಬೀದಿಗಳಲ್ಲಿ ಬೃಹತ್ ತಿರಂಗ ಯಾತ್ರೆ ನಡೆಸಿ ಧ್ವಜಾರೋಹಣ ಮಾಡಲಾಯಿತು. ಧ್ವಜಾರೋಹಣದ ಬಳಿಕ ದೇಶ ಪ್ರೇಮಿಗಳು ಕುಣಿದು ಕುಪ್ಪಳಿಸಿದರು.
ರಾಷ್ಟ್ರಧ್ವಜದ ಜೊತೆಗೆ ಭಗವಾ ಧ್ವಜವೂ ಹಾರಾಟ:
ವಿಜಯಪುರ: 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಮಧ್ಯರಾತ್ರಿ 12 ಗಂಟೆಗೆ ನಗರದ ಶಿವಾಜಿ ಸರ್ಕಲ್ನಲ್ಲಿ ಧ್ವಜಾರೋಹಣ ನೆರವೇರಿಲಾಯಿತು. ಹಿಂದೂ ಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರಧ್ವಜದ ಜೊತೆಗೆ ಭಗವಾ ಧ್ವಜವನ್ನೂ ಹಾರಿಸಲಾಯಿತು. ಹುತಾತ್ಮ ಯೋಧ ಕಾಶಿರಾಯ ಬೊಮ್ಮನಹಳ್ಳಿ ತಂದೆ ತಾಯಿಯಿಂದ ರಾಷ್ಟ್ರ ಧ್ವಜಾರೋಹಣ ಮಾಡಿಸಲಾಯಿತು. ಸ್ವಾಮೀಜಿಯವರಿಂದ ಭಗವಾನ್ ಧ್ವಜಾರೋಹಣ ನೆರವೇರಿತು. ಅಖಂಡ ಭಾರತ ಯುವ ಸಂಕಲ್ಪ ದಿನ ಕಾರ್ಯಕ್ರಮದ ಅಂಗವಾಗಿ ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. ನೂರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.
ಬಾಗಲಕೋಟೆಯಲ್ಲಿ ಮಧ್ಯರಾತ್ರಿಯೇ ಧ್ವಜಾರೋಹಣ
ಬಾಗಲಕೋಟೆ: 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಹಿನ್ನೆಲೆ ಜಿಲ್ಲೆಯ ನವನಗರದಲ್ಲಿ ಮಧ್ಯರಾತ್ರಿಯೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ವೈಷ್ಣೋದೇವಿ ಕ್ರಿಯೇಷನ್ಸ್ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಸಂಸ್ಥೆಯ ಮುಖ್ಯಸ್ಥ ಘನಶ್ಯಾಮ್ ಬಾಂಡಗೆ ಅವರಿಂದ ಮಧ್ಯರಾತ್ರಿ ಧ್ವಜಾರೋಹಣ ಆಯೋಜನೆ ಮಾಡಲಾಯಿತು. ಮಂಜಮ್ಮ ಜೋಗತಿ, ಎಮ್ ಎಲ್ ಸಿ ಪಿಹೆಚ್ ಪೂಜಾರ ಅವರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಮಧ್ಯರಾತ್ರಿಯೇ ಧ್ವಜ ಹಾರಿಸಿ ಜನರು ರಾಷ್ಟ್ರಗೀತೆ ಹಾಡಿದರು.
75 ಅಡಿ ಎತ್ತರದ ಧ್ವಜಸ್ತಂಭ ಮಧ್ಯರಾತ್ರಿ ಅನಾವರಣ
ಧಾರವಾಡ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸ್ಥಾಪಿಸಲಾಗಿರುವ 75 ಅಡಿ ಎತ್ತರದ ಧ್ವಜಸ್ತಂಭವನ್ನು ಆ.14 ರ ಮಧ್ಯರಾತ್ರಿ 12 ಗಂಟೆಗೆ ಅನಾವರಣಗೊಳಿಸಲಾಯಿತು. ಹು-ಧಾ ಮಹಾನಗರಪಾಲಿಕೆ ಕಚೇರಿ ಆವರಣದಲ್ಲಿ ಧ್ವಜಾರೋಹಣ ಮಾಡಿದ್ದು, ಬಾನೆತ್ತರಕ್ಕೆ ಭಾರತದ ಹೆಮ್ಮೆಯ ತಿರಂಗಾ ಹಾರಾಡಿತು. ಜನರ ಹರ್ಷೋದ್ಗಾರ ಮುಗಿಲು ಮುಟ್ಟಿದ್ದು, ಮೇಯರ್ ಈರೇಶ ಅಂಚಟಗೇರಿ ಧ್ವಜಾರೋಹಣ ನೆರವೇರಿಸಿದರು. ನಡುರಾತ್ರಿಯಲ್ಲಿಯೂ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ದೇಶಪ್ರೇಮಕ್ಕೆ ಸಾಕ್ಷಿಯಾಯಿತು. ಉಪಮೇಯರ್ ಉಮಾ ಮುಕುಂದ್, ಆಯುಕ್ತ ಡಾ.ಬಿ. ಗೋಪಾಲಕೃ಼ಷ್ಣ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.