ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಸಿಎಂ ಬೊಮ್ಮಾಯಿ; ಉಪಚುನಾವಣಾ ಪ್ರಚಾರದ ವಿಚಾರವಾಗಿ ಚರ್ಚೆ

ಉಪಚುನಾವಣಾ ಪ್ರಚಾರದ ವಿಚಾರವಾಗಿ ಬಿಎಸ್​ವೈ ಜತೆ ಸಿಎಂ ಬೊಮ್ಮಾಯಿ ಚರ್ಚೆ ಮಾಡಿದ್ದಾರೆ. ಹಾನಗಲ್, ಸಿಂದಗಿ ಉಪಚುನಾವಣೆ ನಿಟ್ಟಿನಲ್ಲಿ ಅಕ್ಟೋಬರ್ 20ರ ಬಳಿಕ ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾದ ಸಿಎಂ ಬೊಮ್ಮಾಯಿ; ಉಪಚುನಾವಣಾ ಪ್ರಚಾರದ ವಿಚಾರವಾಗಿ ಚರ್ಚೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 15, 2021 | 6:27 PM

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪರನ್ನು ಬೆಂಗಳೂರಿನ ಕೆ.ಕೆ.ರಸ್ತೆಯಲ್ಲಿರುವ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿಯಾಗಿದ್ದಾರೆ. ಉಪಚುನಾವಣಾ ಪ್ರಚಾರದ ವಿಚಾರವಾಗಿ ಬಿಎಸ್​ವೈ ಜತೆ ಸಿಎಂ ಬೊಮ್ಮಾಯಿ ಚರ್ಚೆ ಮಾಡಿದ್ದಾರೆ. ಹಾನಗಲ್, ಸಿಂದಗಿ ಉಪಚುನಾವಣೆ ನಿಟ್ಟಿನಲ್ಲಿ ಅಕ್ಟೋಬರ್ 20ರ ಬಳಿಕ ಪ್ರಚಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶುಭಾಶಯ ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿದ್ದು, ದಸರಾ ಹಬ್ಬದ ಶುಭ ಕೋರಿ ಆಶೀರ್ವಾದ ಪಡೆದಿದ್ದೇನೆ. ಮೈಸೂರಿನಲ್ಲಿಂದು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವೆ. ನಾಳೆ (ಅಕ್ಟೋಬರ್ 16) ದಾವಣಗೆರೆ ಜಿಲ್ಲೆಯ ಹೊನ್ನಾಳಿಗೆ ತೆರಳುತ್ತೇನೆ. ನಾಡಿನ‌ ಜನತೆಗೆ ದಸರಾ ಹಬ್ಬದ ಶುಭಾಶಯಗಳು ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅಕ್ಟೋಬರ್ 17ರಂದು ಹಾನಗಲ್​ಗೆ ಹೋಗುತ್ತೇನೆ. ನಂತರ ಎರಡು ದಿನ‌ಗಳ ಕಾಲ ಸಿಂದಗಿಗೆ ತೆರಳುತ್ತೇನೆ. ಅ.20ರ ಬಳಿಕ ಹಾನಗಲ್, ಸಿಂದಗಿ ಎರಡೂ ಕಡೆ ಯಡಿಯೂರಪ್ಪ ಪ್ರಚಾರಕ್ಕೆ ಬರುತ್ತಾರೆ. ಶಾಸಕ ಮಸಾಲೆ ಜಯರಾಂ ಜೊತೆ ಈ ಸಂಬಂಧ ಮಾತನಾಡಿದ್ದೇನೆ. ಶಾಸಕ ಮಸಾಲೆ ಜಯರಾಂ ನಮ್ಮ ಒಳ್ಳೆಯ ಸ್ನೇಹಿತರು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬಿ.ಎಸ್. ಯಡಿಯೂರಪ್ಪರನ್ನು ಸಿದ್ದರಾಮಯ್ಯ ಭೇಟಿಯಾದ ಕುರಿತು ಹೆಚ್​ಡಿಕೆ ಆರೋಪದ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಯಡಿಯೂರಪ್ಪನವರು ಸ್ಪಷ್ಟನೆ‌ ಕೊಟ್ಟಿದ್ದಾರೆ. ಹೀಗಾಗಿ ಮತ್ತೆ ಅದರ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ. ಭೇಟಿ ಮಾಡಿಲ್ಲ ಎಂದು ಬಿಎಸ್​ವೈ ಸ್ಪಷ್ಟವಾಗಿ ಹೇಳಿದ್ದಾರೆ. ಸ್ಪಷ್ಟವಾಗಿ ಹೇಳಿದ ಮೇಲೆ ಭೇಟಿ ಆಗಿಲ್ಲ ಅಂತಾನೇ ಅರ್ಥ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ದಸರಾ ಬಳಿಕ ಕೊರೊನಾ ನಿಯಮ ಸಡಿಲಿಕೆ ಬಗ್ಗೆ ನಿರ್ಧಾರ; ಸಿಎಂ ಬಸವರಾಜ ಬೊಮ್ಮಾಯಿ

ಆಯುಧ ಪೂಜೆ ಹಿನ್ನೆಲೆ ಮಗನ ಕಂಪನಿಗೆ ಭೇಟಿ ನೀಡಿ ಕಾರ್ಮಿಕರಿಗೆ ಬೋನಸ್ ಹಂಚಿದ ಸಿಎಂ ಬಸವರಾಜ ಬೊಮ್ಮಾಯಿ

Published On - 10:39 am, Fri, 15 October 21