ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರನ್ನು ಸಿಲಿಕಾನ್ ಸಿಟಿ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ದೇಶ, ವಿದೇಶದಿಂದ ಜನರು ಬರಬೇಕೆಂದು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. 20 ವರ್ಷ ಆದ್ರೂ ಗುಂಡಿ ಬೀಳದಂತೆ ರಸ್ತೆ ಅಭಿವೃದ್ಧಿ ಆಗಿದೆ. ಕೆರೆ, ರಾಜಕಾಲುವೆ ಅಭಿವೃದ್ಧಿ ದಿಶೆಯಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಬೆಂಗಳೂರು ರೌಂಡ್ಸ್ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ನಮ್ಮ ಸಚಿವರಾದ ಡಾ. ಅಶ್ವತ್ಥ ನಾರಯಣ್, ಅಶೋಕ್, ಗೋಪಾಲಯ್ಯ ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲರೂ ಜೊತೆಗಿದ್ದು ಕೆಲಸ ಕಾರ್ಯಗಳನ್ನು ಮೆಚ್ಚಿ ಅಭಿನಂದನೆ ಸಲ್ಲಿಸಿದರು. ಬೆಂಗಳೂರನ್ನು ನಿಜವಾಗಲೂ ಸಿಲಿಕಾನ್ ಸಿಟಿ ಮಾಡಬೇಕು. ನಗರವು ಪ್ರವಾಸಿ ತಾಣ ಆಗಬೇಕು, ಅನೇಕ ಅಭಿವೃದ್ಧಿ ಕೆಲಸಗಳಾಗಬೇಕು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಇದಕ್ಕಾಗಿ ಹಗಲು ಇರಳು ದುಡಿದು ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಗುಣಮಟ್ಟವುಳ್ಳ ರಾಜಕಾಲುವೆ, ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಹಣಕಾಸಿನ ಕೊರತೆ ಆಗದಂತೆ ನೋಡಿಕೊಂಡು ಬೆಂಗಳೂರನ್ನು ಅಭಿವೃದ್ಧಿ ಪಡಿಸಲಾಗುತ್ತೆ. ಕೆರೆ ಕಟ್ಟೆ ನಿರ್ಮಾಣ ಪಾರ್ಕ್ ನಿರ್ಮಾಣ ಹೀಗೆ ಹೆಚ್ಚು ಕೆಲಸ ಮಾಡಿ ಬೆಂಗಳೂರು ಅಭಿವೃದ್ಧಿ ಮಾಡಲಾಗುತ್ತದೆ ಎಂದು ನಗರ ಪ್ರದಕ್ಷಿಣೆ ಬಳಿಕ ಅವರು ಹೇಳಿಕೆ ನೀಡಿದ್ದಾರೆ.
ಮಳೆಯಿಂದ ಅನಾಹುತ ಆಗ್ತಿದೆ ಅಂತಾ ಸುದ್ದಿ ಇದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುತ್ತಿದ್ದೇನೆ. ಕಳೆದ ನಾಲ್ಕೈದು ದಿನಗಳಿಂದ ಡಿಸಿಗಳ ಜೊತೆ ಚರ್ಚೆ ಮಾಡುತ್ತಿದ್ದೇನೆ. ಗೋವಿಂದ ಕಾರಜೋಳ ಅವರಿಗೂ ಸೂಚಿಸಿದ್ದೇನೆ. ಜುಲೈ 25ರವರೆಗೆ ಜಿಲ್ಲೆಯಲ್ಲಿರಲು ಸೂಚಿಸಿದ್ದೇನೆ. ಪ್ರಾಣ ಹಾನಿ ಆಗದಂತೆ ನೋಡಿಕೊಳ್ಳಲು ಸೂಚನೆ ಕೊಟ್ಟಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಬಿಎಸ್‌ವೈರಿಂದ ನಗರ ಪ್ರದಕ್ಷಿಣೆ ನಡೆಸಲಾಗಿದೆ. ಈ ಮಧ್ಯೆ, ಬ್ರಿಗೇಡ್ ರಸ್ತೆ ವೀಕ್ಷಣೆ ವೇಳೆ ಸಿಎಂಗೆ ಸನ್ಮಾನ ಮಾಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಶಾಸಕ ಹ್ಯಾರಿಸ್ ಸನ್ಮಾನ ಮಾಡಿದ್ದಾರೆ. ಸಿಎಂ ಇದ್ದ ಬಸ್ ಒಳಗೆ ಹೋಗಿ ಬಿ.ಎಸ್. ಯಡಿಯೂರಪ್ಪಗೆ ಸನ್ಮಾನ ಮಾಡಲಾಗಿದೆ.
ಇದನ್ನೂ ಓದಿ: BS Yediyurappa: ರಾಜೀನಾಮೆಗೆ ಸಿದ್ಧವೆಂದಿರುವ ಸಿಎಂ ಯಡಿಯೂರಪ್ಪ ಇಂದು ಬೆಂಗಳೂರು ಸಿಟಿ ರೌಂಡ್ಸ್
(CM BS Yediyurappa on Bangalore Roads Silicon City Bengaluru City Rounds)
Published On - 2:49 pm, Fri, 23 July 21