CM of Karnataka: ಮುಖ್ಯಮಂತ್ರಿಯ ಟ್ವಿಟರ್​ ಖಾತೆಯನ್ನೇ ಹ್ಯಾಕ್​ ಮಾಡಿದ ಕಿಡಿಗೇಡಿಗಳು

| Updated By: ganapathi bhat

Updated on: Mar 26, 2022 | 5:48 PM

ಬೆಳಗ್ಗೆ 6.15 ರಿಂದ 6.19ರ ವರೆಗೂ ಟ್ವಿಟರ್​ ಖಾತೆ ಹ್ಯಾಕ್ ಆಗಿರುವುದು ತಿಳಿದುಬಂದಿದೆ. ಈ ಸಮಯದಲ್ಲಿ 50 ಪೋಸ್ಟ್​​ಗಳನ್ನು ಕಿಡಿಗೇಡಿಗಳು ಪಿನ್​ ಮಾಡಿರುವ ಬಗ್ಗೆ ತಿಳಿದುಬಂದಿದೆ. ಆದರೆ, ಈ ಕುರಿತು ಸಿಎಂ ಕಚೇರಿ ಯಾವುದೇ ದೂರು ನೀಡಿಲ್ಲ.

CM of Karnataka: ಮುಖ್ಯಮಂತ್ರಿಯ ಟ್ವಿಟರ್​ ಖಾತೆಯನ್ನೇ ಹ್ಯಾಕ್​ ಮಾಡಿದ ಕಿಡಿಗೇಡಿಗಳು
ಮುಖ್ಯಮಂತ್ರಿಯ ಟ್ವಿಟರ್​ ಖಾತೆಯೇ ಹ್ಯಾಕ್​
Follow us on

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವಿಟರ್​ ಖಾತೆಯನ್ನೇ ಕಿಡಿಗೇಡಿಗಳು ಹ್ಯಾಕ್​ ಮಾಡಿದ ಘಟನೆ ಇಂದು (ಮಾರ್ಚ್ 26) ನಡೆದಿದೆ. ಬೆಳಗ್ಗೆ 6.15 ರಿಂದ 6.19ರ ವರೆಗೂ ಟ್ವಿಟರ್​ ಖಾತೆ ಹ್ಯಾಕ್ ಆಗಿರುವುದು ತಿಳಿದುಬಂದಿದೆ. ಈ ಸಮಯದಲ್ಲಿ 50 ಪೋಸ್ಟ್​​ಗಳನ್ನು ಕಿಡಿಗೇಡಿಗಳು ಪಿನ್​ ಮಾಡಿರುವ ಬಗ್ಗೆ ತಿಳಿದುಬಂದಿದೆ. ಆದರೆ, ಈ ಕುರಿತು ಸಿಎಂ ಕಚೇರಿ ಯಾವುದೇ ದೂರು ನೀಡಿಲ್ಲ. ಸಿಎಂ ಆಫ್ ಕರ್ನಾಟಕ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಪೋಸ್ಟ್ ಪಿನ್​​ ಮಾಡುವಾಗ ಆಡ್ಮಿನ್​​ಗೆ ಮೆಸೇಜ್ ಹೋಗಿದ್ದು ಆಡ್ಮಿನ್​ ನಂತರ ಸಿಎಂ ಖಾತೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Basavaraj S Bommai ಎಂಬ ವೈಯಕ್ತಿಕ ಟ್ವಿಟರ್ ಖಾತೆಯನ್ನು ಪ್ರತ್ಯೇಕವಾಗಿ ಹೊಂದಿದ್ದಾರೆ. ಹಾಗೂ ಹ್ಯಾಕ್ ಆಗಿರುವುದು CM of Karnataka ಎಂಬ ಕರ್ನಾಟಕದ ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್ ಖಾತೆ ಆಗಿದೆ. ಕರ್ನಾಟಕದ ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್ ಖಾತೆಯೇ ಹ್ಯಾಕ್ ಆಗಿರುವುದು ಅಚ್ಚರಿ ಮೂಡಿಸಿದೆ. ಸಿಎಂ ಆಫ್ ಕರ್ನಾಟಕ ಎಂಬ ಮುಖ್ಯಮಂತ್ರಿಯ ಅಧಿಕೃತ ಖಾತೆಯನ್ನು ಕರ್ನಾಟಕದ ಮುಖ್ಯಮಂತ್ರಿ ಆದವರು ಬಳಸುತ್ತಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರೊಫೈಲ್ ಚಿತ್ರದೊಂದಿಗೆ ಆ ಖಾತೆ ಕಾರ್ಯನಿರ್ವಹಿಸುತ್ತಿತ್ತು. ಪ್ರಸ್ತುತ ಮುಖ್ಯಮಂತ್ರಿ ಆಗಿರುವವರ ಖಾತೆ ಅದಾಗಿದೆ.

ಈ ಮೊದಲು ಫೆಬ್ರವರಿ 27 ರಂದು ಬೆಳಗ್ಗೆ ಬಿಜೆಪಿ ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ (JP Nadda) ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ರಷ್ಯಾ ಮತ್ತು ಉಕ್ರೇನ್‌ಗೆ ಸಹಾಯ ಮಾಡಲು ಕ್ರಿಪ್ಟೋಕರೆನ್ಸಿಯಲ್ಲಿ (cryptocurrency) ದೇಣಿಗೆಯನ್ನು ಕೇಳುವ ಹಲವಾರು ಟ್ವೀಟ್‌ಗಳನ್ನು ಮಾಡಲಾಗಿತ್ತು. ಅವು ಬಳಿಕ ಡಿಲೀಟ್ ಆಗಿದ್ದವು. ಯುಕ್ರೇನ್ ಜನರ ಪರವಾಗಿ ನಿಲ್ಲಿ. ಕ್ರಿಪ್ಟೋಕರೆನ್ಸಿ ಮೂಲಕ ದೇಣಿಗೆ ನೀಡಿ ಎಂದು ಟ್ವೀಟ್ ಮಾಡಲಾಗಿತ್ತು. ಇನ್ನೊಂದು ಟ್ವೀಟ್​​ನಲ್ಲಿ ನನ್ನ ಖಾತೆ ಹ್ಯಾಕ್ ಆಗಿಲ್ಲ. ಎಲ್ಲ ದೇಣಿಗೆಯನ್ನು ಉಕ್ರೇನ್ ಸರ್ಕಾರಕ್ಕೆ ನೀಡಲಾಗುವುದು ಎಂದಿತ್ತು.

ಬಳಿಕ ನಡ್ಡಾ ಟ್ವಿಟರ್ ಖಾತೆಯನ್ನು ಪುನಸ್ಥಾಪಿಸಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿತ್ತು. ಟ್ವೀಟ್‌ನಲ್ಲಿ ಹಿಂದಿಯಲ್ಲಿ ಸಂದೇಶವಿತ್ತು ಮತ್ತು ಬಿಟ್‌ಕಾಯಿನ್ ಮತ್ತು ಎಥೆರಿಯಮ್ ವ್ಯಾಲೆಟ್‌ಗಳಿಗೆ ವಿಳಾಸಗಳಿತ್ತು. ಟ್ವೀಟ್ ಅನ್ನು ಬೆಳಗ್ಗೆ 9:52 ಕ್ಕೆ ಪೋಸ್ಟ್ ಮಾಡಲಾಗಿತ್ತು. 10 ನಿಮಿಷಗಳಲ್ಲಿ, ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಸೂಚಿಸುವ ಮತ್ತೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಲಾಗಿದ್ದು ಜನರು ರಷ್ಯಾವನ್ನು ಬೆಂಬಲಿಸಬೇಕು ಎಂದು ಹೇಳಿತ್ತು. ನಡ್ಡಾ ಅವರ ಟ್ವಿಟರ್ ಖಾತೆ ಹ್ಯಾಕ್  ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹ್ಯಾಕ್ ಆಗಿರುವ ಬಗ್ಗೆ ಸರ್ಕಾರಕ್ಕೆ ತಿಳಿದಿದೆ ಮತ್ತು ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT) ಇದನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Twitter: ಟ್ವಿಟರ್​ನ ಸ್ಪೇಸಸ್ ಆಡಿಯೋ ರೂಮ್​​ನಲ್ಲಿ ಅಚ್ಚರಿಯ ಫೀಚರ್: ಬಳಕೆದಾರರು ಫುಲ್ ಖುಷ್

ಇದನ್ನೂ ಓದಿ: Aishwaryaa Rajinikanth: ಧನುಷ್ ‘ಫ್ರೆಂಡ್’ ಎಂದು ಕರೆದ ಬೆನ್ನಲ್ಲೇ ಟ್ವಿಟರ್​ನಲ್ಲಿ ಹೆಸರು ಬದಲಾಯಿಸಿದ ಐಶ್ವರ್ಯಾ!

Published On - 5:38 pm, Sat, 26 March 22