ಬೆಂಗಳೂರು, ಡಿಸೆಂಬರ್ 20: ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ (Indira canteen). ಬಡವರ ಪಾಲಿಗೆ ಅನ್ನಪೂರ್ಣ. ಇದೀಗ ಮತ್ತಷ್ಟು ಶುಚಿ, ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧಗೊಂಡಿವೆ. ಇಂದಿರಾ ಕ್ಯಾಂಟೀನ್ ಊಟದ ಹೊಸ ಮೆನುವನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. ಈ ಹೊಸ ಮೆನುದಲ್ಲಿ ರಾಜ್ಯದ ಎಲ್ಲ ಪ್ರದೇಶದ ಊಟಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಇಂದಿರಾ ಕ್ಯಾಂಟೀನ್ ಊಟದ ಹೊಸ ಮೆನು ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ಗಳು ಈಗ ಮತ್ತಷ್ಟು ಶುಚಿ, ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧಗೊಂಡಿವೆ. ರಿಯಾಯಿತಿ ದರದಲ್ಲಿ ಸ್ವಾದಿಷ್ಟ ತಿಂಡಿ, ಊಟ ದೊರೆಯುವ ಇಂದಿರಾ ಕ್ಯಾಂಟೀನ್ ಯೋಜನೆಯ ಸಂಪೂರ್ಣ ಸದುಪಯೋಗ ಪಡೆಯಿರಿ ಎಂದು ಬರೆದುಕೊಂಡಿದ್ದಾರೆ.
ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಗಳು ಈಗ ಮತ್ತಷ್ಟು ಶುಚಿ, ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧಗೊಂಡಿವೆ.
ರಿಯಾಯಿತಿ ದರದಲ್ಲಿ ಸ್ವಾದಿಷ್ಟ ತಿಂಡಿ, ಊಟ ದೊರೆಯುವ ಇಂದಿರಾ ಕ್ಯಾಂಟೀನ್ ಯೋಜನೆಯ ಸಂಪೂರ್ಣ ಸದುಪಯೋಗ ಪಡೆಯಿರಿ.
-… pic.twitter.com/c2k9uEQQFd— CM of Karnataka (@CMofKarnataka) December 20, 2023
ಹಸಿದ ಹೊಟ್ಟೆಗೆ ಅಕ್ಷಯಪಾತ್ರೆ ಇಂದಿರಾ ಕ್ಯಾಂಟೀನ್ನಲ್ಲಿ ಅಗ್ಗದ ದರದಲ್ಲಿ ದೇಹಕ್ಕೆ ಒಗ್ಗುವ ಊಟ-ಉಪಹಾರ ನೀಡಲಾಗುತ್ತಿದೆ. ಬೆಳಗಿನ ಉಪಹಾರಕ್ಕೆ (ಬೆಳಿಗ್ಗೆ 7ರಿಂದ 10) ಇಡ್ಲಿ-ಸಾಂಬಾರ್, ಇಡ್ಲಿ-ಚಟ್ನಿ, ವೆಜ್ ಪುಲಾವ್-ರಾಯಿತಾ, ಖಾರಾಬಾತ್-ಚಟ್ನಿ, ಚೌಚೌಬಾತ್- ಚಟ್ನಿ, ಮಂಗಳೂರು ಬನ್ಸ್, ಬಿಸಿಬೇಳೆ ಬಾತ್-ಬೂಂದಿ, ಪೊಂಗಲ್-ಚಟ್ನಿ, ಬ್ರೆಡ್-ಜಾಮ್ ಮತ್ತು ಬನ್ಸ್ ನೀಡಲಾಗುತ್ತಿದ್ದು, ಪ್ಲೇಟ್ಗೆ 5 ರೂ, ಬೆಲೆ ಇರಲಿದೆ.
ಇದನ್ನೂ ಓದಿ: ಟಿವಿ9 ರಿಯಾಲಿಟಿ ಚೆಕ್: ಸಿದ್ದರಾಮಯ್ಯ ತವರಿನಲ್ಲೇ ಸರ್ಕಾರದ ಕನಸಿನ ಯೋಜನೆಗೆ ಎಳ್ಳುನೀರು: ಇಂದಿರಾ ಕ್ಯಾಂಟೀನ್ ಸ್ಥಗಿತ
ಮಧ್ಯಾಹ್ನದ ಊಟಕ್ಕೆ (ಮಧ್ಯಾಹ್ನ 1ರಿಂದ 3) ಅನ್ನ-ತರಕಾರಿ ಸಂಬಾರು, ಖೀರು, ಅನ್ನ-ತರಕಾರಿ ಸಾಂಬಾರು, ರಾಯಿತಾ, ಅನ್ನ-ತರಕಾರಿ ಸಾಂಬಾರು, ಮೊಸರನ್ನ, ರಾಗಿ ಮುದ್ದೆ-ಸೊಪ್ಪಿನ ಸಾರು, ಖೀರು ಮತ್ತು ಚಪಾತಿ-ಸಾಗು, ಖೀರು ನೀಡಲಾಗುತ್ತಿದ್ದು, ಪ್ಲೇಟ್ಗೆ 10 ರೂ, ಬೆಲೆ ಇರಲಿದೆ.
ಇದನ್ನೂ ಓದಿ: ನಂದಿ ಹಿಲ್ಸ್ ನಲ್ಲಿಯೂ ಇಂದಿರಾ ಕ್ಯಾಂಟೀನ್ ಮಾದರಿ ಮಯೂರ್ ಹೋಟೆಲ್ ಆರಂಭ
ರಾತ್ರಿ ಊಟಕ್ಕೆ (ಸಂಜೆ 7:30 ರಿಂದ ರಾತ್ರಿ 9) ಅನ್ನ-ತರಕಾರಿ ಸಾಂಬಾರು, ಅನ್ನ-ತರಕಾರಿ ಸಾಂಬಾರು, ರಾಯಿತಾ, ರಾಗಿ ಮುದ್ದೆ-ಸೊಪ್ಪಿನ ಸಾರು ಮತ್ತು ಚಪಾತಿ-ವೆಜ್ ಗ್ರೇವಿ ಇರುತ್ತದೆ. ಪ್ಲೇಟ್ಗೆ 10 ರೂ, ಬೆಲೆ ಇರಲಿದೆ. ಮಾವಿನಕಾಯಿ ಸೀಸಸ್ನಲ್ಲಿ ಮಾವಿನಕಾಯಿ ಚಿತ್ರಾನ್ನ ಸಹ ಇರಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.