AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಗೆದಷ್ಟು ಬಯಲಾಗ್ತಿದೆ ಪಿಲಿಕುಳದ ಅಕ್ರಮ: ಕಾಳಿಂಗ ಸರ್ಪದ ಹೆಸರಲ್ಲೂ ಭ್ರಷ್ಟಾಚಾರ?

ಪಿಲಿಕುಳ ಝೂನಲ್ಲಿ ಕಾಳಿಂಗ ಸರ್ಪ ಸಂತಾನೋತ್ಪತ್ತಿ ಕೇಂದ್ರದ ಹೆಸರಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಸರಿಯಾದ ಆರೈಕೆ ಮತ್ತು ಆಹಾರವಿಲ್ಲದೆ ಕಾಳಿಂಗ ಸರ್ಪದ ಮರಿಗಳು ಸಾವನ್ನಪ್ಪಿವೆ. ಹೀಗಿದ್ದರೂ ಚಾರ್ಮಾಡಿ ಬಳಿ ಮರಿಗಳನ್ನು ಬಿಟ್ಟಿದ್ದೇವೆ ಎಂದು ಆಡಳಿತ ಮಂಡಳಿ ಸಬೂಬು ಹೇಳುತ್ತಿದ್ದು, ಹಾವುಗಳಿಗೆ ಆಹಾರ ನೀಡಿದ ಬಿಲ್ ವಿಚಾರದಲ್ಲೂ ಅಕ್ರಮ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ಬಗೆದಷ್ಟು ಬಯಲಾಗ್ತಿದೆ ಪಿಲಿಕುಳದ ಅಕ್ರಮ: ಕಾಳಿಂಗ ಸರ್ಪದ ಹೆಸರಲ್ಲೂ ಭ್ರಷ್ಟಾಚಾರ?
ಸಾಂದರ್ಭಿಕ ಚಿತ್ರImage Credit source: Google
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on:Feb 19, 2026 | 5:30 PM

Share

ಮಂಗಳೂರು, ಫೆಬ್ರವರಿ 19: ಪಿಲಿಕುಳ ಝೂ‌‌ ಕಳೆದ ಕೆಲ ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿದ್ದು, ಇಲ್ಲಿಯ ಸ್ಥಿತಿ ಕಂಡು ಸ್ವತಃ ಹೈಕೋರ್ಟ್ ಗರಂ ಆಗಿತ್ತು. ಆ ಬೆನ್ನಲ್ಲೇ ಕಾಳಿಂಗ ಸರ್ಪದ ಹೆಸರಲ್ಲೂ ಇಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿಬಂದಿದೆ. ಕಾಳಿಂಗ ಸರ್ಪ ಸಂತಾನಾಭಿವೃದ್ಧಿ ಕೇಂದ್ರ ತೆರೆದು 2 ಕೋಟಿಗೂ ಅಧಿಕ ಅನುದಾನ ಪಡೆದಿದ್ದ ಇಲ್ಲಿಯ ಆಡಳಿತ ಅವುಗಳ ಪಾಲನೆ ಮರೆತಿದೆ. ಹೀಗಾಗಿ ಸರಿಯಾಗಿ ಆಹಾರ, ಆರೈಕೆ ಸಿಗದೆ ಅವು ಸಾವನ್ನಪ್ಪಿವೆ ಎಂದು ದೂರಲಾಗಿದೆ.

2022ರ ಜುಲೈನಲ್ಲಿ ಮೊಟ್ಟೆಯೊಡೆದು 38 ಕಾಳಿಂಗ ಸರ್ಪ ಮರಿಗಳು ಹೊರ ಬಂದಿದ್ದ ವಿಚಾರ ಭಾರಿ ಸದ್ದು ಮಾಡಿತ್ತು. ಆದರೆ ಆ ಮರಿಗಳು ಈಗ ಏನಾಗಿವೆ ಎಂಬುದಕ್ಕೆ ದಾಖಲೆಗಳೇ ಇಲ್ಲ. ಇತ್ತ ಪಿಲುಕುಳದ ಆಡಳಿತ ಮಾತ್ರ ಆ ಮರಿಗಳನ್ನು ಚಾರ್ಮಾಡಿ ಬಳಿ ಬಿಟ್ಟಿದ್ದೇವೆ ಎಂದು ಸಬೂಬು ನೀಡುತ್ತಿದೆ. ಪಶ್ಚಿಮಘಟ್ಟಕ್ಕೆ ಮರಿಗಳನ್ನು ಬಿಡುವಾಗ ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳಬೇಕು. ಇಲ್ಲಿ ಇವರು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ. ಅಲ್ಲದೆ ಮರಿಗಳನ್ನು ಬಿಟ್ಟಿರುವ ಬಗ್ಗೆ ಯಾವುದೇ ದಾಖಲೆಯನ್ನೂ ಇಟ್ಟುಕೊಂಡಿಲ್ಲ ಎಂಬ ವಿಚಾರ ಮಾಹಿತಿ ಹಕ್ಕಿನಡಿ ಬಹಿರಂಗವಾಗಿದೆ.

ಇದನ್ನೂ ಓದಿ:  ಪಿಲಿಕುಳ ಝೂ ಅವ್ಯವಸ್ಥೆಗೆ ಹೈಕೋರ್ಟ್​​ ಗರಂ; ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದ ಪೀಠ

ಈ ನಡುವೆ ಹಾವುಗಳಿಗೆ ಆಹಾರ ನೀಡಿದ ಬಿಲ್ ಸಹ ಪಡೆಯಲಾಗಿದ್ದು, ಮಾಂಸ ಪೂರೈಸುವ ವ್ಯಾಪಾರಿಯ ಹೆಸರಲ್ಲಿ ಹಣ ತೆಗೆದುಕೊಂಡಿದ್ದಾರೆ. ಸ್ನೇಕ್ ಫೀಡ್ ಎಂದು ಹೆಸರಿಟ್ಟು ಕೇರೆ ಹಾವು ಪೂರೈಕೆ ಮಾಡಲಾಗಿದ್ದು, ಈ‌ ಅಕ್ರಮಗಳ ಬಗ್ಗೆ ವೈಲ್ಡ್‌ ಲೈಫ್ ಕ್ರೈಮ್ ಕಂಟ್ರೋಲ್​​ಗೆ ದೂರು ನೀಡಿರೋದಾಗಿ ವನ್ಯಜೀವಿ ಸಂರಕ್ಷಕ ಭುವನ್ ತಿಳಿಸಿದ್ದಾರೆ.

2022ರಲ್ಲಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 38 ಕಾಳಿಂಗ ಸರ್ಪ ಮರಿಗಳು ಮೊಟ್ಟೆಯೊಡೆದು ಹೊರ ಬಂದಿವೆ ಎಂದು ಹೇಳಲಾಗಿತ್ತು. ಆದರೆ ದಾಖಲೆಯಲ್ಲಿ ಇರುವುದು ಕೇವಲ 22 ಮರಿಗಳ ಉಲ್ಲೇಖ ಮಾತ್ರ. ಅವು ಸಹ ಮೂರು ತಿಂಗಳು ಕಳೆಯುವುದರ ಒಳಗೆ ಮೃತಪಟ್ಟಿವೆ. ಕಾಳಿಂಗ ಸರ್ಪ ಸಂತಾನೋಭಿವೃದ್ಧಿ ಕೇಂದ್ರದ ಹೆಸರಲ್ಲಿ ಇವರು ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ಸ್ಥಳೀಯ ಕಂಪನಿಯ ಸಿಎಸ್ಆರ್ ಅನುದಾನದಡಿ ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದಾರೆ. ಪಿಲಿಕುಳ ಅವ್ಯವಸ್ಥೆಯ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್​​ನಲ್ಲಿ ನಡೆಯುತ್ತಿದ್ದು, ಈ ವಿಚಾರವನ್ನು ಸಹ ನ್ಯಾಯಾಲಯದ ಗಮನಕ್ಕೆ ತರೋದಾಗಿ ಭುವನ್ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:40 pm, Thu, 19 February 26

Follow Us
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ
ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ
ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ
ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
CCTV Video: ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಕೊಂಡ ರಾತ್ರಿಯೇ ಕಳ್ಳತನ!
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
ಯುವತಿಯರ ಅಂಗಾಂಗ ಮುಟ್ಟಿ ಪರಾರಿಯಾಗುತ್ತಿರುವ ಕಾಮುಕರು: ವಿಡಿಯೋ ವೈರಲ್
‘ಇದು ನನ್ನ ಕರಿಯರ್​​ಗೆ ಟ್ವಿಸ್ಟ್ ಕೊಟ್ಟ ಸಿನಿಮಾ’; ‘ಶೇರ್’ ಮೆಚ್ಚಿದ ತನಿಷಾ
‘ಇದು ನನ್ನ ಕರಿಯರ್​​ಗೆ ಟ್ವಿಸ್ಟ್ ಕೊಟ್ಟ ಸಿನಿಮಾ’; ‘ಶೇರ್’ ಮೆಚ್ಚಿದ ತನಿಷಾ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ
ಜರ್ಮನಿಯ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ, ಬಂದೂಕು, ಚಾಕುವಿನಿಂದ ದಾಳಿ