AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ನಿಗಮಗಳ ಬಂಡವಾಳ ಬಟಾಬಯಲು: ಶಕ್ತಿ ಯೋಜನೆ ಬಗ್ಗೆ ಕೋರ್ಟ್ ಹೇಳಿದ್ದೇನು?

ಕೊರೊನಾದ ಎರಡು ಅಲೆಯಲ್ಲೂ ಸಾರಿಗೆ ನೌಕರರು ತಮ್ಮ ಪ್ರಾಣಾದ ಹಂಗನ್ನು ತೊರೆದು ಕೆಲಸ ಮಾಡಿದ್ದು, ಆ ವೇಳೆ ಸಾಕಷ್ಟು ಸಾರಿಗೆ ಸಿಬ್ಬಂದಿ ಕೊರೊನಾಗೆ ಬಲಿಯಾಗಿದ್ದರು. ಈ ವೇಳೆ ಮೃತಪಟ್ಟ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡುವುದಾಗಿ ನೀಡುವುದಾಗಿ ಭರವಸೆಯನ್ನ ಸಹ ನೀಡಲಾಗಿತ್ತು. ಪರಿಹಾರ ಮಾತ್ರ ಸಿಕಿಲ್ಲ. ಈ ಸಂಬಂಧ ವ್ಯಕ್ತಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದು, ಈ ವೇಳೆ ನಾರಿಗೆ ನಿಗಮಗಳ ಅಸಲಿತ್ತು ಬಟಾಬಯಲಾಗಿದೆ.

ಸಾರಿಗೆ ನಿಗಮಗಳ ಬಂಡವಾಳ ಬಟಾಬಯಲು: ಶಕ್ತಿ ಯೋಜನೆ ಬಗ್ಗೆ ಕೋರ್ಟ್ ಹೇಳಿದ್ದೇನು?
Karnataka High Court
Ramesha M
| Edited By: |

Updated on: Feb 18, 2026 | 4:44 PM

Share

ಬೆಂಗಳೂರು, (ಫೆಬ್ರವರಿ 18): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು (karnataka transport corporations) ನಷ್ಟವನ್ನು ಅನುಭವಿಸುತ್ತಿವೆ. ಇದರ ಮಧ್ಯೆ ಶಕ್ತಿ ಯೋಜನೆ ಸಹ ಹೊಡೆತಕೊಟ್ಟಿದ್ದು, ವ್ಯಕ್ತಿಯೊಬ್ಬರು ಕೋರ್ಟ್​​​ಗೆ ಸಲ್ಲಿಸಿದ್ದ ಪಿಐಎಲ್​​ನಲ್ಲಿ ಕರ್ನಾಟಕ ಸಾರಿಗೆ ನಿಗಮಗಳು ಅಸಲಿಯತ್ತು ಬಹಿರಂಗವಾಗಿದೆ. ಹೌದು…ಕೊವಿಡ್ ವೇಳೆ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ಪರಿಹಾರ ವಿಚಾರವಾಗಿ ಪಿಐಎಲ್​​ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ವೇಳೆ ಸಿಬ್ಬಂದಿಗೆ ವೇತನ ನೀಡುವುದೇ ಕಷ್ಟವೆಂಬ ಪರಿಸ್ಥಿತಿ ಇದೆ ಎಂದು ಹೈಕೋರ್ಟ್​ಗೆ (Karnataka High Court) ಸಾರಿಗೆ ನಿಗಮಗಳ ಪರ ವಕೀಲ ಒಪ್ಪಿಕೊಂಡಿದ್ದಾರೆ.

ಕೊವಿಡ್ ವೇಳೆ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ಪರಿಹಾರ ವಿಚಾರವಾಗಿ ದಾವಣಗೆರೆಯ ತಾಹಿರ್ ಹುಸೇನ್ ಎನ್ನುವರು ಹೈಕೋರ್ಟ್​​​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಕೊವಿಡ್ ಸಂದರ್ಭದಲ್ಲಿ 323 ಉದ್ಯೋಗಿಗಳು ಮೃತಪಟ್ಟಿದ್ದಾರೆ.ಆದರೆ 7 ಕುಟುಂಬಗಳಿಗೆ ಮಾತ್ರ 30 ಲಕ್ಷ ರೂ. ಪರಿಹಾರ ನೀಡಲಾಗಿದೆ. ಉಳಿದವರಿಗೆ ಹಣ ನೀಡಿಲ್ಲವೆಂದು ಅರ್ಜಿದಾರರ ಆರೋಪಿಸಿದ್ದಾರೆ.

ಇದನ್ನೋ ನೋಡಿ: KSRTC BMTC Employees Strike: ನಾಳೆ ಸಾರಿಗೆ ಬಸ್ ಇರೋದಿಲ್ವಾ? ಹೇಗಿರುತ್ತೆ ಮುಷ್ಕರ?

ಇನ್ನೊಂದೆಡೆ ಸಾರಿಗೆ ನಿಗಮಗಳ ಪರ ವಕೀಲ ವಾದ ಮಂಡಿಸಿದ್ದು, ಸಾರಿಗೆ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ. ಸಿಬ್ಬಂದಿಗೆ ವೇತನ ನೀಡುವುದೇ ಕಷ್ಟವೆಂಬ ಪರಿಸ್ಥಿತಿ ಇದೆ. ಹೀಗಾಗಿ ಪರಿಹಾರ ನಿರ್ಣಯ ಜಾರಿಗೊಳಿಸದಿರಲು ನಿಗಮಗಳು ನಿರ್ಧರಿಸಿವೆ ಎಂದು ಹೇಳಿದರು. ಈ ವಾದ ಪ್ರತಿವಾದ ಆಲಿಸಿದ ಕೋರ್ಟ್, ಶಕ್ತಿ ಯೋಜನೆಯಡಿ ಸರ್ಕಾರ ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ? ಸಾರಿಗೆ ನಿಗಮಗಳಿಗೆ ನೀಡಬೇಕಾದ ಬಾಕಿಯ ವಿವರ ಮಾರ್ಚ್​​ 23ರೊಳಗೆ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.

ಈ ಮೂಲಕ ಕರ್ನಾಟಕ ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ಸಿಬ್ಬಂದಿಗೆ ವೇತನ ನೀಡಲು ಸಹ ಕಷ್ಟವಾಗುತ್ತಿದೆ ಎನ್ನುವುದನ್ನು ವಕೀಲರೇ ಕೋರ್ಟ್​ ಮುಂದೆ ಒಪ್ಪಿಕೊಂಡಿದ್ದಾರೆ. ಈ ಮೂಲಕ ಸಾರಿಗೆ ನಿಗಮಗಳ ಬಂಡವಾಳ ಬಟಾಬಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ