ಅಧಿಕಾರಿ, ಗುತ್ತಿಗೆದಾರ ನಡುವೆ ಜಟಾಪಟಿ: ಇಬ್ಬರ ಜಗಳದಲ್ಲಿ ಇಂದಿರಾ ಕ್ಯಾಂಟೀನ್ ಬಂದ್
ಹಾವೇರಿ ಜಿಲ್ಲೆಯಲ್ಲಿನ ಮೂರು ಇಂದಿರಾ ಕ್ಯಾಂಟೀನ್ಗಳ ಬಿಲ್ ಪಾವತಿ ಮಾಡಲು, ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರ ವಿಶ್ವನಾಥ್ ದರ್ಶನಾಪೂರ ಆರೋಪಿಸಿದ್ದಾರೆ. ಆ ಮೂಲಕ ಅಧಿಕಾರಿ ಮತ್ತು ಗುತ್ತಿಗೆದಾರ ನಡುವಿನ ಜಟಾಪಟಿಗೆ ಸಾಕ್ಷಿ ಆಗಿದೆ. ಸರ್ಕಾರದ ಹಣ ಹೊಡೆಯಲು ಮಾಡಿದ ಸಂಚು ಬಯಲಾಗಿದ್ದು, ಇಬ್ಬರ ನಡುವೆ ಭಾರಿ ಗದ್ದಲ ಸೃಷ್ಟಿ ಆಗಿದೆ.
ಹಾವೇರಿ, ಅಕ್ಟೋಬರ್ 19: ಇಂದಿರಾ ಕ್ಯಾಂಟೀನ್ (Indira canteen) ಸಿದ್ಧರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಬಡವರ ಹೊಟ್ಟೆ ತುಂಬಿಸುವ ಕೇಂದ್ರ ಆಗಬೇಕಿತ್ತು. ಆದರೆ ಅಧಿಕಾರಿ ಮತ್ತು ಗುತ್ತಿಗೆದಾರ ನಡುವಿನ ಜಟಾಪಟಿಗೆ ಸಾಕ್ಷಿ ಆಗಿದೆ. ಸರ್ಕಾರದ ಹಣ ಹೊಡೆಯಲು ಮಾಡಿದ ಸಂಚು ಬಯಲಾಗಿದ್ದು, ಇಬ್ಬರ ನಡುವೆ ಭಾರಿ ಗದ್ದಲ ಸೃಷ್ಟಿಗೆ ಕಾರಣವಾಗಿದೆ. ಆ ಕುರಿತು ಒಂದು ವರದಿ ಇಲ್ಲಿದೆ ಮುಂದೆ ಓದಿ.
ಹಾವೇರಿ ಜಿಲ್ಲೆಯಲ್ಲಿನ ಮೂರು ಇಂದಿರಾ ಕ್ಯಾಂಟೀನ್ಗಳ ಬಿಲ್ ಪಾವತಿ ಮಾಡಲು, ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರ ವಿಶ್ವನಾಥ್ ದರ್ಶನಾಪೂರ ಆರೋಪಿಸಿದ್ದಾರೆ. ಕಮಿಷನ್ ಹಾವಳಿಯಿಂದ ಹೈರಾಣಾದ ಗುತ್ತಿಗೆದಾರ ಇಂದಿರಾ ಕ್ಯಾಂಟಿನ್ ಹಳೆ ಬಿಲ್ ಪಾವತಿ ಮಾಡಿಸಿ ನನ್ನನ್ನು ಟೆಂಡರ್ನಿಂದ ಮುಕ್ತಿ ಕೊಡಿ ಎಂದು ಮನವಿ ಮಾಡಿ ಪತ್ರ ಬರೆದಿದ್ದಾನೆ.
ಇದನ್ನೂ ಓದಿ: ಇನ್ಮಂದೆ ಇಂದಿರಾ ಕ್ಯಾಂಟೀನ್ನಲ್ಲಿ ಸಿಗಲಿದೆ ವೆರೈಟಿ ಊಟ: ಇಲ್ಲಿದೆ ಹೊಸ ಮೆನು
ಗುತ್ತಿಗೆದಾರನ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಹಾವೇರಿ ನಗರಾಭಿವೃದ್ದಿ ಇಲಾಖೆಯ ಯೋಜನಾಧಿಕಾರಿ ಮಮತಾ. ಕಳೆದ ನವೆಂವರ್ ತಿಂಗಳಿನಿಂದ ಎಪ್ರಿಲ್ ತಿಂಗಳವರೆಗೂ ಅವರು ಸಲ್ಲಿಸಿದ ಬಿಲ್ ಗೂ ಹಾಗೂ ಫುಟ್ ಬಾಲ್ ರಿಪೊರ್ಟ್ಗೂ ವ್ಯತ್ಯಾಸ ಕಂಡು ಬಂದ ಹಿನ್ನೆಲೆ, ಮಾಹಿತಿ ನೀಡುವಂತೆ ನೋಟಿಸ್ ನೀಡಿದ್ದೆವೆ. ನಮ್ಮ ನೋಟಿಸ್ಗೆ ಉತ್ತರ ನೀಡಲಾಗದೆ, ಸುಖಾ ಸುಮ್ಮನೆ ಕಮಿಷನ್ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಂದಿ ಹಿಲ್ಸ್ ನಲ್ಲಿಯೂ ಇಂದಿರಾ ಕ್ಯಾಂಟೀನ್ ಮಾದರಿ ಮಯೂರ್ ಹೋಟೆಲ್ ಆರಂಭ
ಇಬ್ಬರ ಜಗಳದಿಂದ ಕೂಸು ಬಡವಾಯಿತು ಎಂಬಂತೆ, ಹಣ ಬಾರದ ಹಿನ್ನೆಲೆ ನಿಯಮನುಸಾರ ಇಂದಿರಾ ಕ್ಯಾಂಟೀನ್ ನಡೆಯುತ್ತಿಲ್ಲ. ಕಾಟಾಚಾರಕ್ಕೆ ಮುಂದುವರೆಸಿಕೊಂಡು ಹೊಗಲಾಗುತ್ತಿದ್ದು, ಹಸಿವು ನಿಗಿಸಲು ಬಡವರು ಇದರಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ.
ಕಮಿಷನ್ ಆರೋಪದ ಕುರಿತು ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣ ವಿ.ಬಿ. ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.