ಬೆಂಗಳೂರು, ಆ.29: ಬೆಂಗಳೂರಿನಲ್ಲಿ ಮತ್ತೊಂದು ಹಂತದ ಮೆಟ್ರೋ ಸಂಚಾರಕ್ಕೆ(Namma Metro) ಸಜ್ಜಾಗುತ್ತಿದೆ. ಬೈಯಪ್ಪನಹಳ್ಳಿ-K.R.ಪುರಂ(Baiyappanahalli To KR puram Metro), ಕೆಂಗೇರಿ-ಚಲ್ಲಘಟ್ಟ(Kengeri to Challaghatta Metro) ಮಾರ್ಗದ ಮೆಟ್ರೋ ಸಂಚಾರಕ್ಕೆ ಸಿದ್ಧವಾಗುತ್ತಿದೆ. ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ವಿಸ್ಕೃತ ಮೆಟ್ರೋ ಮಾರ್ಗ ಸೇವೆಗೆ ಲಭ್ಯವಾಗಲಿದೆ ಎಂದು ಬಿಎಂಆರ್ಸಿಎಲ್ನ(BMRCL) ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಈಗಾಗಲೇ ಸಂಪೂರ್ಣ ಕಾಮಗಾರಿ ಮುಗಿಸಿ ರೈಲಿನ ಟ್ರಯಲ್ ರನ್ ನಡೆಸಲಾಗುತ್ತಿದೆ. ಸೆಪ್ಟೆಂಬರ್ 7 ರ ಬಳಿಕ ಸುರಕ್ಷತಾ ಆಯುಕ್ತರು ಒಂದು ವಾರಗಳ ಕಾಲ ವಿಸ್ತೃತ ಮೆಟ್ರೋ ಮಾರ್ಗ ತಪಾಸಣೆ ನಡೆಸಲಿದ್ದಾರೆ. ತಪಾಸಣೆ ಕಾರ್ಯ ಮುಗಿದ ಬಳಿಕ 43 ಕಿ.ಮೀ ಉದ್ದದ ಸಂಪೂರ್ಣ ನೇರಳೆ ಮಾರ್ಗ ಸಂಚಾರ ಮುಕ್ತವಾಗಲಿದೆ.
ಬಹುನಿರೀಕ್ಷಿತ ಬೈಯಪ್ಪನಹಳ್ಳಿ-ಕೆ.ಆರ್.ಪುರಂ ನಡುವಿನ ರೈಲು ಸಂಚಾರಕ್ಕೆ ಕಾಲ ಕೂಡಿ ಬಂದಿದೆ. ಸದ್ಯ ಅಂತಿಮ ಹಂತದ ತಪಾಸಣೆ ಮಾತ್ರ ಬಾಕಿ ಇದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸುರಕ್ಷತೆ ತಂಡ ಸೆಪ್ಟೆಂಬರ್ 7 ರಂದು ಈ ಮಾರ್ಗವನ್ನು ಒಂದು ವಾರಗಳ ಕಾಲ ಪರಿಶೀಲನೆ ನಡೆಸಲಿದೆ. ಬಳಿಕ ಮೆಟ್ರೋ ಮಾರ್ಗಗಳ ಉದ್ಘಾಟನೆಗೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತೆ. ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ಸೆಪ್ಟೆಂಬರ್ ಕೊನೆಯ ವಾರದ ಒಳಗೆ ಎರಡು ವಿಸ್ತೃತ ಮಾರ್ಗ ಸಂಚಾರಕ್ಕೆ ಲಭ್ಯವಾಗಲಿದೆ. ಪೂರ್ವ ಬೆಂಗಳೂರು ವ್ಯಾಪ್ತಿಗೆ ಸೇರುವ ಬೈಯಪ್ಪನಹಳ್ಳಿ-ಕೆ.ಆರ್.ಪುರಂ ನಡುವಿನ ಮೆಟ್ರೋ ಮಾರ್ಗ ಸುಮಾರು ಎರಡು ಕಿಲೋ ಮೀಟರ್ ಉದ್ದವಿದ್ದು ಇದು ಐಟಿ ಕಾರಿಡಾರ್‌ಗೆ ಸಂಪರ್ಕಿಸುವ ಕಾಡುಗೋಡಿ ರೈಲು ಮಾರ್ಗಕ್ಕೆ ಸಂಪರ್ಕ ಕೊಂಡಿಯಾಗಿದೆ.
ಇದನ್ನೂ ಓದಿ: Viral Video: ಮೆಟ್ರೋ; ಯಾರಿಗೆ ಕರೀತೀಯೋ ಕರಿ! ಲೇಡೀಸ್ ಕೋಚ್ನಲ್ಲಿ ನುಗ್ಗಿದ ಯುವಕನ ಆಟಾಟೋಪ
ಇನ್ನು BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಈ ಬಗ್ಗೆ ಮಾತನಾಡಿದ್ದು, ಬೈಯಪ್ಪನಹಳ್ಳಿ-ಕೆಆರ್ ಪುರಂ ಮಾರ್ಗದಲ್ಲಿ ಸಿಗ್ನಲ್ ಪರೀಕ್ಷೆ ಮತ್ತು ಇತರ ಪ್ರಯೋಗಗಳು ನಡೆಯುತ್ತಿವೆ. ಮುಂದಿನ ಸೆಪ್ಟಂಬರ್ 6 ರೊಳಗೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸೆಪ್ಟೆಂಬರ್ 7ರ ಬಳಿಕ CMRS ತಂಡದ ಅಧಿಕಾರಿಗಳು ಈ ಮಾರ್ಗವನ್ನು ಪರಿಶೀಲಿಸಲಿದ್ದಾರೆ ಎಂದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:45 am, Tue, 29 August 23