ಕಾಫಿ ಪ್ರಿಯರಿಗೆ ಕಾದಿದೆ ಶಾಕ್: ಬೆಂಗಳೂರಿನಲ್ಲಿ ಇನ್ನಷ್ಟು ದುಬಾರಿಯಾಗಲಿದೆ ಕಾಫಿ ದರ

ಬೆಂಗಳೂರಿನ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳು ಕಾಫಿ ಬೆಲೆಯನ್ನು ಹೆಚ್ಚಿಸಲು ಮುಂದಾಗಿವೆ. ಜಾಗತಿಕ ಮಟ್ಟದಲ್ಲಿ ಕಾಫಿ ಬೀಜದ ಬೆಲೆ ಏರಿಕೆ ಹಾಗೂ ಭಾರತದಿಂದ ರಫ್ತು ಹೆಚ್ಚಾಗಿರುವುದು ಇದಕ್ಕೆ ಮುಖ್ಯ ಕಾರಣ. ಕಾಫಿ ಬೀಜದ ಬೆಲೆ ಕಳೆದ ಮೂರು ತಿಂಗಳಲ್ಲಿ ಶೇಕಡಾ 60ರಷ್ಟು ಏರಿಕೆಯಾಗಿದೆ. ಹೊಸ ವರ್ಷದಿಂದ ಬೆಲೆಯನ್ನು ಹೆಚ್ಚಿಸುವುದಾಗಿ ಬೆಂಗಳೂರಿನ ಕೆಫೆಗಳು ಘೋಷಿಸಿವೆ. ಫಿಲ್ಟರ್ ಕಾಫಿಯ ಬೆಲೆ ಈಗಾಗಲೇ ಏರಿಕೆಯಾಗಿದೆ. ಬೆಲೆ ವಿವರ ಇಲ್ಲಿದೆ.

ಕಾಫಿ ಪ್ರಿಯರಿಗೆ ಕಾದಿದೆ ಶಾಕ್: ಬೆಂಗಳೂರಿನಲ್ಲಿ ಇನ್ನಷ್ಟು ದುಬಾರಿಯಾಗಲಿದೆ ಕಾಫಿ ದರ
ಸಾಂದರ್ಭಿಕ ಚಿತ್ರImage Credit source: Getty Images
Follow us
|

Updated on: Oct 25, 2024 | 8:24 AM

ಬೆಂಗಳೂರು, ಅಕ್ಟೋಬರ್ 25: ಬೆಂಗಳೂರಿನಲ್ಲಿರುವ ಕೆಫೆಗಳು ಮತ್ತು ರೆಸ್ಟೊರೆಂಟ್‌ಗಳು ಕಾಫಿ ಬೆಲೆಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿರುವುದಾಗಿ ವರದಿಯಾಗಿದೆ. ಕಾಫಿ ಬೀಜದ ದರ ಹೆಚ್ಚಳವೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿ ಬೀಜದ ಬೆಲೆ ಕಳೆದ ಮೂರು ತಿಂಗಳಲ್ಲಿ ಶೇ 60ರಷ್ಟು ಏರಿಕೆಯಾಗಿದೆ. ಕರ್ನಾಟಕವು ಭಾರತದ ಅತಿದೊಡ್ಡ ಕಾಫಿ ಬೆಳೆಯುವ ರಾಜ್ಯವಾಗಿದ್ದು, ಇಲ್ಲಿಯೂ ದರ ಹೆಚ್ಚಳವಾಗಿದೆ. ಜತೆಗೆ, ಭಾರತದಾದ್ಯಂತ ಕಾಫಿ ಬೀಜದ ಬೆಲೆ ಏರಿಕೆಯಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಹುರಿದ ಕಾಫಿ ಬೀಜದ ಬೆಲೆ 100-200 ರೂ.ಗಳಷ್ಟು ಏರಿಕೆಯಾಗಿದೆ. ಪ್ರಸ್ತುತ ಹುರಿದ ಕಾಫಿ ಬೀಜದ ಬೆಲೆ 1 ಕೆಜಿಗೆ 800 ರಿಂದ 1,200 ರೂ. ಇದೆ.

ದಿ ಕೆಫೀನ್ ಬಾರ್‌ನ ಚರ್ಚ್ ಸ್ಟ್ರೀಟ್‌ ಮತ್ತು ಜಯನಗರದಲ್ಲಿ ಔಟ್‌ಲೆಟ್‌ಗಳಲ್ಲಿ ಮುಂದಿನ 10 ದಿನಗಳಲ್ಲಿ ಒಂದು ಕಪ್ ಕ್ಯಾಪುಸಿನೊ ಕಾಫಿ ದರ 200 ರೂ.ನಿಂದ 220 ರೂ.ಗೆ ಹೆಚ್ಚಳವಾಗಲಿದೆ. ಕೆಫೆಯು ಅರೇಬಿಕಾ ಕಾಫಿ ಬೀಜವನ್ನು ಬಳಸುತ್ತದೆ. ಬೆಲೆಗಳು ಶೇಕಡಾ 40 ರಷ್ಟು ಹೆಚ್ಚಾಗುವುದರೊಂದಿಗೆ, ನಾವು ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಚರ್ಚ್ ಸ್ಟ್ರೀಟ್‌ನಲ್ಲಿ ಗ್ರಾಹಕರ ಪ್ರತಿಕ್ರಿಯೆ ಬಗ್ಗೆ ಚಿಂತೆ ಇಲ್ಲ. ಆದರೆ, ಜಯನಗರದ ಗ್ರಾಹಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಗಮನಿಸಬೇಕಿದೆ ಎಂದು ಸಹ ಸಂಸ್ಥಾಪಕ ಪೂಜ್ಯ ಪ್ರಸಾದ್ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಈ ಕೆಫೆಯಲ್ಲಿ ಸಿಗುವ ಅತ್ಯಂತ ದುಬಾರಿ ಕಾಫಿಯ ಬೆಲೆ 320 ರೂ. ಆಗಿದೆ.

ಹೊಸ ವರ್ಷದಿಂದ ದುಬಾರಿಯಾಗಲಿದೆ ಕಾಫಿ

ಹಲಸೂರು ಮತ್ತು ಕೋರಮಂಗಲದಲ್ಲಿ ಶಾಖೆಗಳನ್ನು ಹೊಂದಿರುವ ಮೇವರಿಕ್ ಮತ್ತು ಫಾರ್ಮರ್‌ನಲ್ಲಿ ಹೊಸ ವರ್ಷದಲ್ಲಿ ಕಾಫಿ ಬೆಲೆ ಶೇಕಡಾ 10 ರಿಂದ 20 ರಷ್ಟು ಏರಿಕೆಯಾಗಲಿವೆ. ನಮಗೆ ಪ್ರಸ್ತುತ ಸ್ವಲ್ಪ ಹಿನ್ನಡೆಯಾಗುತ್ತಿದೆ. ಇದನ್ನು ಎದುರಿಸಲು ನಾವು ಹೊಸ ಬೆಲೆ ನಿಗದಿಪಡಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಸಹ ಸಂಸ್ಥಾಪಕ ಆಶಿಶ್ ಡಿ’ಬ್ರೆಯೊ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ. ಪ್ರಸ್ತುತ ಬಿಸಿ ಕಾಫಿ ದರ 180 ರಿಂದ 290 ರೂ, ಮತ್ತು ಕೋಲ್ಡ್ ಕಾಫಿ ದರ 250 ರಿಂದ 340 ರೂ. ನಡುವೆ ಇದೆ ಎಂದು ವರದಿ ಉಲ್ಲೇಖಿಸಿದೆ.

ಫಿಲ್ಟರ್ ಕಾಫಿ ದರವೂ ಏರಿಕೆ

ಬೆಂಗಳೂರಿನ ದರ್ಶಿನಿಗಳು ತಮ್ಮ ಫಿಲ್ಟರ್ ಕಾಫಿ ಬೆಲೆಯನ್ನು 2 ರಿಂದ 5 ರೂ.ಗಳಷ್ಟು ಹೆಚ್ಚಿಸಿವೆ. ಒಂದು ಕಾಫಿಗೆ ಈಗ 12 ರಿಂದ 35 ರೂ. ವರೆಗೆ ಇದೆ ಎಂದು ವರದಿ ತಿಳಿಸಿದೆ. ಗಾಂಧಿ ಬಜಾರ್‌ನಲ್ಲಿರುವ ವಿದ್ಯಾರ್ಥಿ ಭವನದ ಫಿಲ್ಟರ್ ಕಾಫಿಯ ಬೆಲೆಯನ್ನು ಮೇ ತಿಂಗಳಲ್ಲಿ 23 ರಿಂದ 25 ರೂ.ಗೆ ಹೆಚ್ಚಿಸಲಾಗಿತ್ತು.

ಕಾಫಿ ಬಿಕ್ಕಟ್ಟಿಗೆ ಕಾರಣವೇನು?

ಹವಾಮಾನ ಬದಲಾವಣೆ, ವೈಪರೀತ್ಯದಂಥ ಘಟನೆಗಳು ವಿಯೆಟ್ನಾಂ ಮತ್ತು ಬ್ರೆಜಿಲ್‌ನಂತಹ ಪ್ರಮುಖ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಇದು ಕಾಫಿ ಬೀಜಗಳ ಬೆಲೆಗಳು ಗಗನಕ್ಕೇರುವಂತೆ ಮಾಡಿವೆ. ಇದರ ಪರಿಣಾಮವಾಗಿ ಭಾರತದ ರಫ್ತು ಹೆಚ್ಚಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಟ್​ ಡ್ರಿಂಕ್ಸ್​​ಗಿಂತ ಬಿಯರ್​ ಹೆಚ್ಚು ಮಾರಾಟ!

ಸಾಮಾನ್ಯವಾಗಿ ಅಗ್ಗದ ರೋಬಸ್ಟಾ ಕಾಫಿ ಬೀಜ ಉತ್ಪಾದನೆಯ ಕೊರತೆಯ ಪರಿಣಾಮವಾಗಿ ಅರೇಬಿಕಾ ಕಾಫಿ ಬೀಜದ ಬೆಲೆಗಳು ಸುಮಾರು ಶೇ 40 ರಷ್ಟು ಹೆಚ್ಚಾಗಿದೆ. ಭವಿಷ್ಯದಲ್ಲಿ ಮತ್ತಷ್ಟು ಬೆಲೆ ಏರಿಕೆ ಸಾಧ್ಯತೆ ಇದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Daily Devotional: ಆಯಸ್ಸು ವೃದ್ಧಿಗಾಗಿ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಆಯಸ್ಸು ವೃದ್ಧಿಗಾಗಿ ಏನು ಮಾಡಬೇಕು? ವಿಡಿಯೋ ನೋಡಿ
ಶುಕ್ರವಾರ ಶುಭದಿನದಂದು ಈ ರಾಶಿಯವರಿಗೆ 4 ರಾಶಿಗಳ ಶುಭ ಫಲವಿದೆ
ಶುಕ್ರವಾರ ಶುಭದಿನದಂದು ಈ ರಾಶಿಯವರಿಗೆ 4 ರಾಶಿಗಳ ಶುಭ ಫಲವಿದೆ
ಬೆಂಗಳೂರು, ಒಂದಾದಮೇಲೊಂದು ಕಟ್ಟಡ ಕುಸಿಯುವ ಭೀತಿ: ಮತ್ತೊಂದು ಕಟ್ಟಡ ಬಿರುಕು
ಬೆಂಗಳೂರು, ಒಂದಾದಮೇಲೊಂದು ಕಟ್ಟಡ ಕುಸಿಯುವ ಭೀತಿ: ಮತ್ತೊಂದು ಕಟ್ಟಡ ಬಿರುಕು
ದಿವ್ಯ ನಿರ್ಲಕ್ಷ್ಯ ತೊರಿ ರನೌಟ್​ಗೆ ಬಲಿಯಾದ ಕಿವೀಸ್ ನಾಯಕಿ
ದಿವ್ಯ ನಿರ್ಲಕ್ಷ್ಯ ತೊರಿ ರನೌಟ್​ಗೆ ಬಲಿಯಾದ ಕಿವೀಸ್ ನಾಯಕಿ
ಚನ್ನಪಟ್ಟಣದಲ್ಲಿ ನಮ್ಮ ಎದುರಾಳಿ ಯಾರೇ ಆದರೂ ಯೋಗೇಶ್ವರ್ ಗೆಲ್ತಾರೆ: ಸಿಎಂ
ಚನ್ನಪಟ್ಟಣದಲ್ಲಿ ನಮ್ಮ ಎದುರಾಳಿ ಯಾರೇ ಆದರೂ ಯೋಗೇಶ್ವರ್ ಗೆಲ್ತಾರೆ: ಸಿಎಂ
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ: ಸೋಮಶೇಖರ್
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ: ಸೋಮಶೇಖರ್
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರ ಮಾಡುವ ಅವಕಾಶ ಎಲ್ಲರಿಗೂ ಇದೆ: ಶಾಸಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರ ಮಾಡುವ ಅವಕಾಶ ಎಲ್ಲರಿಗೂ ಇದೆ: ಶಾಸಕ
ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ