AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಅರಮನೆ ಮೈದಾನದಲ್ಲಿ ಕಾರ್ಯಕ್ರಮ: ಏರ್‌ಪೋರ್ಟ್‌​, ರಾಜಭವನ, ಎಂಜಿ ರಸ್ತೆಯಲ್ಲಿ ಪಾರ್ಕಿಂಗ್​ ನಿಷೇಧ

ಬೆಂಗಳೂರು ಅರಮನೆ ಮೈದಾನದ ಕೃಷ್ಣ ವಿಹಾರ್‌ನಲ್ಲಿ ಅಕ್ಟೋಬರ್ 26 ರಂದು ನಡೆಯುವ ಕಾರ್ಯಕ್ರಮದಿಂದಾಗಿ ಅಕ್ಟೋಬರ್ 25 ಮತ್ತು 26 ರಂದು ಬೆಂಗಳೂರಿನಲ್ಲಿ ಸಂಚಾರ ವ್ಯತ್ಯಯವಾಗಲಿದೆ. ವಾಹನ ನಿಲುಗಡೆ ನಿಷೇಧಿಸಲಾಗಿದೆ. ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆ ಮುಂತಾದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಯಂತ್ರಣ ಇರಲಿದೆ. ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚಿಸಲಾಗಿದೆ. ಸಂಚಾರ ಮಾರ್ಗಸೂಚಿಗಳನ್ನು ಪರಿಶೀಲಿಸಿ.

ಬೆಂಗಳೂರು ಅರಮನೆ ಮೈದಾನದಲ್ಲಿ ಕಾರ್ಯಕ್ರಮ: ಏರ್‌ಪೋರ್ಟ್‌​, ರಾಜಭವನ, ಎಂಜಿ ರಸ್ತೆಯಲ್ಲಿ ಪಾರ್ಕಿಂಗ್​ ನಿಷೇಧ
ಬೆಂಗಳೂರು ಸಂಚಾರ ಪೊಲೀಸ್​ ಮಾರ್ಗಸೂಚಿ
ವಿವೇಕ ಬಿರಾದಾರ
|

Updated on:Oct 25, 2024 | 7:51 AM

Share

ಬೆಂಗಳೂರು, ಅಕ್ಟೋಬರ್​​ 25: ಅರಮನೆ ಮೈದಾನದ ಕೃಷ್ಣ ವಿಹಾರ್​ನಲ್ಲಿ (Bengaluru Palace Ground) ಶನಿವಾರ (ಅ.26) ರಂದು ಕಾರ್ಯಕ್ರಮ ಇದ್ದು, ಗಣ್ಯರ ಆಗಮನ ಮತ್ತು ನಿರ್ಗಮನ ಇರಲಿದೆ. ಹೀಗಾಗಿ ಈ ಭಾಗದಲ್ಲಿ ಶುಕ್ರವಾರ (ಅ.25) ಮತ್ತು ಶನಿವಾರ (ಅ.26) ರಂದು ಸಂಚಾರ ವ್ಯತ್ಯಯವಾಗಲಿದೆ. ಹಾಗೂ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಶನಿವಾರ ಕಾರ್ಯಕ್ರಮವು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಗಣ್ಯರು, ನಗರದ ವಿವಿಧ ಭಾಗಗಳಿಂದ ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆ ಮತ್ತು ಅರಮನೆ ಮೈದಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಮಾರ್ಗಸೂಚಿ ಹೊರಡಿಸಿದ್ದಾರೆ.

ಅ.25 ರಿಂದ 26ರವರೆಗೆ ಬೆಂಗಳೂರು ನಗರದಲ್ಲಿ ವಾಹನ ಸಂಚಾರ ಮಾರ್ಗ ಮತ್ತು ನಿಲುಗಡೆಯಲ್ಲಿ ಕೆಲ ಮಾರ್ಪಾಡು ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಶುಕ್ರವಾರ (ಅ.25) ಮಾರ್ಗಸೂಚಿ

ಸಂಜೆ 4.15 ರಿಂದ ರಾತ್ರಿ 09.00 ಗಂಟೆಯವರೆಗೆ ಹೆಚ್​​ಎಎಲ್​ ಏರ್‌ಪೋರ್ಟ್‌​ ರಸ್ತೆ, ಕಬ್ಬನ್​ ರಸ್ತೆ, ಎಂ.ಜಿ. ರಸ್ತೆ (ಟ್ರಿನಿಟಿ ವೃತ್ತದಿಂದ ಮೇಯೋಹಾಲ್ ವರೆಗೆ) ರಾಜ್ ಭವನ್ ರಸ್ತೆ, ಅಂಬೇಡ್ಕರ್ ವೀಧಿ ರಸ್ತೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಮತ್ತು ಈ ರಸ್ತೆಗಳನ್ನು ಬಳಸದೆ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸೂಚಿಸಿದ್ದಾರೆ.

ಶನಿವಾರ (ಅ.26) ಮಾರ್ಗಸೂಚಿ

ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 02.00 ಗಂಟೆಯವರೆಗೆ ರಾಜ್ ಭವನ ರಸ್ತೆ, ಬಳ್ಳಾರಿ ರಸ್ತೆ, ಇನ್ ಫ್ಯಾಂಟ್ರಿ ರಸ್ತೆ, ಕಬ್ಬನ್ ರಸ್ತೆ, ಎಂ.ಜಿ. ರಸ್ತೆ (ಟ್ರಿನಿಟಿ ವೃತ್ತದಿಂದ ಮೇಯೋಹಾಲ್‌ವರೆಗೆ) ಹೆಚ್.ಎ.ಎಲ್ ಏರ್ಪೋರ್ಟ್​​ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಮತ್ತು ಈ ರಸ್ತೆಗಳನ್ನು ಬಳಸದೆ ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.

ಕಾರ್ಯಕ್ರಮಕ್ಕೆ ವಿವಿಧ ವಾಹನಗಳಲ್ಲಿ ಬರುವ ಸಾರ್ವಜನಿಕರು ಕೃಷ್ಣ ವಿಹಾರ್ ಅರಮನೆ ಮೈದಾನ ಪ್ರವೇಶಿಸಲು ಬಳಸಬೇಕಾದ ಮಾರ್ಗ

ಬಸ್ಸುಗಳಲ್ಲಿ ಮತ್ತು ಟಿಟಿಗಳಲ್ಲಿ ಬರುವವರು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿವಿ ಟವರ್ ಬಳಿ ಇರುವ ಸರ್ಕಸ್ ಮೈದಾನದಲ್ಲಿ ವಾಹನಗಳನ್ನು ಪಾರ್ಕ್​​ ಮಾಡಿ ನಂತರ ಕಾಲ್ನಡಿಗೆಯಲ್ಲಿ ಕಾರ್ಯಕ್ರಮದ ಸ್ಥಳ ತಲುಪಬಹುದು. ವಾಪಾಸ್ಸು ಹೋಗುವಾಗ ಸರ್ಕಸ್ ಮೈದಾನದಿಂದ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಹೋಗಬಹುದಾಗಿದೆ.

ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಬರುವ ಸಾರ್ವಜನಿಕರು ಆರಮನೆ ಮೈದಾನ ಪ್ರವೇಶಿಸಲು ಬಳಸಬೇಕಾದ ಮಾರ್ಗ

ಗೇಟ್ ನಂ-02, ಗೇಟ್ ನಂ-03 ಮತ್ತು ಗೇಟ್ ನಂ-04 ರಿಂದ ಪ್ರವೇಶಿಸಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕ್​​ ಮಾಡಿ ನಂತರ ಕಾಲ್ನಡಿಗೆಯಲ್ಲಿ ಕಾರ್ಯಕ್ರಮದ ಸ್ಥಳ ತಲುಪಬಹುದು. ಹಿಂತಿರುಗಿ ವಾಪಾಸ್ಸು ಹೋಗುವಾಗ ತ್ರಿಪುರವಾಸಿನಿ ಎಕ್ಸಿಟ್ ಗೇಟ್ (ಹುಣಸೇಮರದ ಗೇಟ್) ನಲ್ಲಿ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇತ್ರಿ ಸರ್ಕಲ್ ಮುಖಾಂತರ ಹೋಗಬಹುದಾಗಿದೆ.

ಇದನ್ನೂ ಓದಿ: ಮಳೆ ನಡುವೆ ಬೆಂಗಳೂರಿಗೆ ಕಸದ ಸಮಸ್ಯೆ: ವಿಲೆವಾರಿಯಾಗದೆ ಉಳಿದಿದೆ ಸಾವಿರಾರು ಟನ್ ಕಸ

ಟ್ವಿಟರ್​ ಪೋಸ್ಟ್​​

ಕಾರ್ಯಕ್ರಮವನ್ನು ಹೊರತುಪಡಿಸಿ ಇತರೆ ಸ್ಥಳಗಳಿಗೆ ಹೋಗುವ ರಸ್ತೆ ಬಳಕೆದಾರರು ಬಳಸಬೇಕಾದ ಬದಲಿ ಮಾರ್ಗ

ಅರಮನೆ ರಸ್ತೆ: ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ವಸಂತನಗರ ಅಂಡರ್‌ಪಾಸ್​ ಮುಖಾಂತರ ಸಂಚರಿಸಬಹುದಾಗಿದೆ.

ಎಂ.ವಿ.ಜಯರಾಮರಸ್ತೆ: ಅರಮನೆರಸ್ತೆ, ಬಿ.ಡಿ.ಎ.ಜಂಕ್ಷನ್ ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ ಪಾಸ್ ನಿಂದ ಹಳೆ ಉದಯ ಟಿ.ವಿ. ಜಂಕ್ಷನ್. ಈ ರಸ್ತೆಗಳಲ್ಲಿ ಎರಡು ದಿಕ್ಕಿನಲ್ಲಿ ಸಂಚರಿಸಬಹುದಾಗಿದೆ.

ಬಳ್ಳಾರಿ ರಸ್ತೆ: ಎಲ್.ಆರ್.ಡಿ.ಇಯಿಂದ ಹೆಬ್ಬಾಳ ರಸ್ತೆ ಮುಖಾಂತರ ಸಂಚರಿಸಬಹುದಾಗಿದೆ. ಕನ್ನಿಂಗ್ ಹ್ಯಾಂರಸ್ತೆ: ಬಾಳೇಕುಂದ್ರಿ ಸರ್ಕಲ್‌ನಿಂದ ಲಿ ಮೆರಿಡಿಯನ್ ಅಂಡರ್ ಪಾಸ್​ ಮುಖಾಂತರ ಸಂಚರಿಸಬಹುದಾಗಿದೆ.

ಮಿಲ್ಲರ್ಸ್​ ರಸ್ತೆ: ಹಳೆ ಉದಯ ಟಿ.ವಿ. ಜಂಕ್ಷನ್​ನಿಂದ ಎಲ್.ಆ‌ರ್.ಡಿ.ಇ ಜಂಕ್ಷನ್‌ ಮುಖಾಂತರ ಸಂಚರಿಸಬಹುದಾಗಿದೆ.

ಜಯಮಹಲ್‌ ರಸ್ತೆ: ಜಯಮಹಲ್ ರಸ್ತೆ ಹಾಗೂ ಬೆಂಗಳೂರು ಅರಮನೆಯ ಸುತ್ತಮುತ್ತಲ ರಸ್ತೆಗಳ ಮುಖಾಂತರ ಸಂಚರಿಸಬಹುದಾಗಿದೆ.

ಯಶವಂತಪುರ ಮತ್ತು ಮೇಖ್ರಿ ಸರ್ಕಲ್ ರಸ್ತೆ: ಯಶವಂತಪುರ-ಟಾಟಾ ವಿಜ್ಞಾನ ಸಂಸ್ಥೆ-ಮೇಬ್ರಿ ಸರ್ಕಲ್‌ ರಸ್ತೆ ಮುಖಾಂತರ ಸಂಚರಿಸಬಹುದಾಗಿದೆ.

ರಮಣ ಮಹರ್ಷಿ ರಸ್ತೆ: ತರಳಬಾಳು ರಸ್ತೆ ಮುಖಾಂತರ ಸಂಚರಿಸಬಹುದಾಗಿದೆ.

ಕಂಟೋನ್ ಮೆಂಟ್ ರಸ್ತೆ: ಕ್ರೀನ್ಸ್ ರಸ್ತೆ, ತಿಮ್ಮಯ್ಯ ವೃತ್ತ, ಬಾಳೆ ಕುಂದ್ರಿ ಸರ್ಕಲ್ ರಸ್ತೆ ಮುಖಾಂತರ ಸಂಚರಿಸಬಹುದಾಗಿದೆ.

ಸರ್‌ಸಿ.ವಿ. ರಾಮನ್ ರಸ್ತೆ: ಬಾಷ್ಯಂ ಸರ್ಕಲ್, ಸ್ಯಾಂಕಿ ರಸ್ತೆ, ಸರ್ಕಲ್ ಮಾರಮ್ಮ. ಬಿಹೆಚ್‌ ಇಎಲ್ ಸರ್ಕಲ್ ರಸ್ತೆ ಮುಖಾಂತರ ಸಂಚರಿಸಬಹುದಾಗಿದೆ.

ಯಶವಂತಪುರ ಮೇಲು ಸೇತುವೆ: ಮಾರಪ್ಪನ ಪಾಳ್ಯ ಪಾರಿಜಾತ ಜಂಕ್ಷನ್, ಓರಾಯನ್ ಮಾಲ್, ರಾಜಕುಮಾರ್ ರಸ್ತೆ ಮುಖಾಂತರ ಸಂಚರಿಸಬಹುದಾಗಿದೆ.

ವಾಹನ ನಿಲುಗಡೆ ನಿಷೇಧ ರಸ್ತೆಗಳು

ಪ್ಯಾಲೇಸ್‌ರಸ್ತೆ, ಎಂ.ವಿ. ಜಯರಾಮ್‌ ರಸ್ತೆ, ವಸಂತನಗರ ರಸ್ತೆ, ಜಯಮಹಲ್ ರಸ್ತೆ, ಸಿ.ವಿ. ರಾಮನ್ ರಸ್ತೆ, ಬಳ್ಳಾರಿ ರಸ್ತೆ, ರಮಣಮಹರ್ಷಿ ರಸ್ತೆ, ನಂದಿದುರ್ಗ ರಸ್ತೆ, ತರಳಬಾಳು ರಸ್ತೆ, ಮೌಂಟ್ ಕಾರ್ಮೆಲ್ ಕಾಲೇಜ್ ರಸ್ತೆ, ಮೇತ್ರಿ ಸರ್ಕಲ್​ನಿಂದ ಯಶವಂತಪುರ ರಸ್ತೆವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಭಾರಿ ಸರಕು ಸಾಗಾಣಿಕಾ ವಾಹನಗಳ ಸಂಚಾರವನ್ನು ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಮೇಲ್ಕಂಡ ರಸ್ತೆಗಳಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಮಾರ್ಗ ಬದಲಾವಣೆ ರಸ್ತೆಗಳು

ಸಿ.ಎಂ.ಟಿ.ಐ.ಜಂಕ್ಷನ್, ನ್ಯೂ ಜಂಕ್ಷನ್, ಉದಯ ಟಿ.ವಿ. ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಬಿ.ಹೆಚ್.ಇ.ಎಲ್, ಹೆಚ್​​ ಕ್ಯಾಂಪ್​ ನಂದಿದುರ್ಗ ರಸ್ತೆ, ಹೆಬ್ಬಾಳ ಜಂಕ್ಷನ್​, ಬಸವೇಶ್ವರ ಸರ್ಕಲ್ ಮತ್ತು ಯಶವಂತಪುರ ಗೋವರ್ಧನ್ ಮುಖಾಂತರ ಸಂಚರಿಸಬಹುದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:50 am, Fri, 25 October 24

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ