ಮೊಬೈಲ್​ಗಾಗಿ ತನ್ನೆರಡು ಕಾಲುಗಳನ್ನೇ ಕಳೆದುಕೊಂಡ ಕಾಲೇಜು ವಿದ್ಯಾರ್ಥಿ

| Updated By: ವಿವೇಕ ಬಿರಾದಾರ

Updated on: Oct 02, 2022 | 9:11 PM

ಬೆಂಗಳೂರಿನಲ್ಲಿ ಮೊಬೈಲ್​ಗಾಗಿ ಕಾಲೇಜು ವಿದ್ಯಾರ್ಥಿ ತನ್ನೆರಡು ಕಾಲುಗಳನ್ನೇ ಕಳೆದುಕೊಂಡಿದ್ದಾನೆ.

ಮೊಬೈಲ್​ಗಾಗಿ ತನ್ನೆರಡು ಕಾಲುಗಳನ್ನೇ ಕಳೆದುಕೊಂಡ ಕಾಲೇಜು ವಿದ್ಯಾರ್ಥಿ
ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು (College student) ಮೊಬೈಲ್​ ಬಿಟ್ಟು ಒಂದು ಕ್ಷಣವು ಇರಲಾರೆವು ಎಂಬುವುದರ ಮಟ್ಟಿಗೆ ಮೊಬೈಲ್​ಗೆ ಅಡಿಟ್​ ಆಗಿದ್ದಾರೆ. ನಿರಂತರವಾಗಿ ಮೊಬೈಲ್ ಉಪಯೋಗಿಸುವುದರಿಂದ ಸಾಕಷ್ಟು ತೊಂದರೆಗಳಿವೆ ಎಂದು ಸಾಕಷ್ಟು ಭಾರಿ ಓದಿ, ನೋಡಿ ತಿಳದಿದ್ದರು ಅದನ್ನು ಬಿಟ್ಟಿರಲಾರರು. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ವಾಹನ ಚಲಾಯಿಸುವಾಗ ಮೊಬೈಲ್​ನಲ್ಲೇ ಮಗ್ನರಾಗಿರುತ್ತಾರೆ. ಇದರಿಂದ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಅದೇ ರೀತಿಯಾಗಿ ಬೆಂಗಳೂರಿನಲ್ಲಿ ಮೊಬೈಲ್​ಗಾಗಿ ಕಾಲೇಜು ವಿದ್ಯಾರ್ಥಿ ತನ್ನೆರಡು ಕಾಲುಗಳನ್ನೇ ಕಳೆದುಕೊಂಡಿದ್ದಾನೆ.

ಕಲಬುರಗಿ ಜಿಲ್ಲೆಯ, ಸೇಡಂ ತಾಲೂಕಿನ ಹುಳಗೋಳ ನಿವಾಸಿ ಸಾಬಣ್ಣ(23) ಗಾಯಾಳು ಯುವಕ. ಯುವಕ ಸಾಬಣ್ಣ ಬೆಂಗಳೂರಿನ ನಾಯಂಡಹಳ್ಳಿ ರೈಲ್ವೆ ನಿಲ್ದಾಣದ ಸಮೀಪ ರೈಲು ಹಳಿ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಮೊಬೈಲ್ ಕೈ ಜಾರಿ ರೈಲ್ವೆ ಟ್ರಾಕ್​ನಲ್ಲಿ ಬಿದ್ದಿದೆ. ಹೀಗಾಗಿ ಮೊಬೈಲ್​ ತೆಗೆದುಕೊಳ್ಳಲು ಹೋದಾಗ ರೈಲು ಹರಿದು ಯುವಕ‌ನ ಕಾಲುಗಳು ಕಟ್ ಆಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ