ಖಾದಿ ಎಂಪೋರಿಯಾಂನಲ್ಲಿ 3,329 ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿಸಿದ ಸಿಎಂ ಬೊಮ್ಮಾಯಿ
ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ಖಾದಿ ಎಂಪೋರಿಯಾಂಗೆ ಭೇಟಿ ನೀಡಿ 3,329 ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದಾರೆ.
ಬೆಂಗಳೂರು: ಮಹಾತ್ಮ ಗಾಂಧಿ ಜಯಂತಿ (Gandhi Jayanti) ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಇಂದು ಬೆಂಗಳೂರಿನ ಖಾದಿ ಎಂಪೋರಿಯಾಂಗೆ (Khadi Emporium) ಭೇಟಿ ನೀಡಿ ಒಂದು ಡಜನ್ ಕರವಸ್ತ್ರ, ಎರಡು ಪ್ಯಾಂಟ್, ಆರು ಶರ್ಟ್, ಎರಡು ಜುಬ್ಬಾ ಒಟ್ಟು 3,329 ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೆ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಹುಬ್ಬಳ್ಳಿಯ ಖಾದಿ ಎಂಪೋರಿಯಂಗೂ ಭೇಟಿ ನೀಡಬೇಕೆಂದು ಸಿಬ್ಬಂದಿ ಮನವಿ ಮಾಡಿದರು.
ಸಿಎಂ ಬೊಮ್ಮಾಯಿ ಖಾದಿ ಎಂಪೋರಿಯಂನಲ್ಲಿ 12 ಕರವಸ್ತ್ರ, ಎರಡು ಪ್ಯಾಂಟ್, ಆರು ಶರ್ಟ್, ಎರಡು ಜುಬ್ಬಾ, 1 ಲೇಡಿಸ್ ಟಾಪ್ ಡ್ರೆಸ್, 1 ರೆಡಿಮೇಡ್ ಫುಲ್ ಶರ್ಟ್, 1 ರೆಡಿಮೇಡ್ ಟೀ ಶರ್ಟ್, 3 ಜುಬ್ಬಾ ಸೇರಿದಂತೆ 8 ವಿವಿಧ ಬಟ್ಟೆಗಳನ್ನು ಸಿಎಂ ಬೊಮ್ಮಾಯಿ ಖರೀದಿ ಮಾಡಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 2 ಇದೇ ದಿನದಂದು ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಖಾದಿ ಎಂಪೋರಿಯಾಂಗೆ ಭೇಟಿ ನೀಡಿ ತಮ್ಮ ಮಡದಿಗೆ ಸೀರೆ ಖರೀದಿಸಿದ್ದರು. ಜೊತೆಗೆ ತಮಗೂ ಜುಬ್ಬಾ ಬಟ್ಟೆ ತೆಗೆದುಕೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ