ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಮತ್ತೆ ಇಡಿ ನೋಟಿಸ್, ಅಕ್ಟೋಬರ್ 7ರಂದು ಹಾಜರಾಗುವಂತೆ ಸೂಚನೆ
DK Shivakumar 7 ನೇ ತಾರೀಖು ನನಗೆ ಹಾಗೂ ಡಿಕೆ ಸುರೇಶ್ ಗೆ ನೋಟಿಸ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಅಂದು ಆದಿಚುಂಚನಗಿರಿಗೆ ಹೋಗುತ್ತಿದ್ದಾರೆ. 7 ನೇ ತಾರೀಖು ಬಿಟ್ಟು ಬೇರೆ ದಿನ ಕೊಡಿ ಅಂತ...
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National herald case) ನನಗೆ ಹಾಗೂ ನನ್ನ ತಮ್ಮ ಡಿ.ಕೆ.ಸುರೇಶ್ ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಮಾತನಾಡಿದ ಡಿಕೆಶಿ ಎಐಸಿಸಿ ಅಧ್ಯಕ್ಷ ಚುನಾವಣೆ ಹಿನ್ನೆಲೆ ಕಾಲಾವಕಾಶ ಕೇಳಿದ್ದೇನೆ. ಆದರೆ ಇಡಿ ಅಧಿಕಾರಿಗಳು ಆಗಲ್ಲ ಎಂದು ಹೇಳಿದ್ದಾರೆ ಎಂದಿದ್ದಾರೆ. ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಕೇಸ್ನಲ್ಲಿ ಹೊಸ ಸಮನ್ಸ್ ಕೊಟ್ಟಿದ್ದಾರೆ. 7 ನೇ ತಾರೀಖು ನನಗೆ ಹಾಗೂ ಡಿಕೆ ಸುರೇಶ್ ಗೆ ನೋಟಿಸ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಅಂದು ಆದಿಚುಂಚನಗಿರಿಗೆ ಹೋಗುತ್ತಿದ್ದಾರೆ. 7 ನೇ ತಾರೀಖು ಬಿಟ್ಟು ಬೇರೆ ದಿನ ಕೊಡಿ ಅಂತ ಇನ್ನೊಮ್ಮೆ ಮನವಿ ಮಾಡಿಕೊಂಡಿರುವುದಾಗಿ ಡಿಕೆಶಿ ಹೇಳಿದ್ದಾರೆ. ಆದಿಚುಂಚನಗಿರಿಗೆ ಪ್ರಿಯಾಂಕ ಗಾಂಧಿ ಕೂಡ ಭೇಟಿ ನೀಡುವ ಸಾಧ್ಯತೆ ಇದೆ. ನಾನು ಇಲ್ಲದೇ ಹೋದ್ರೆ ತಪ್ಪಾಗುತ್ತದೆ. ಎಲ್ಲಾ ಜವಾಬ್ದಾರಿ ನನ್ನ ತಮ್ಮನೇ ಮಾಡುತ್ತಿದ್ದಾನೆ. ಇಲ್ಲಿಂದ ಅಲ್ಲಿಯವರಗೂ ಬ್ಯಾನರ್ ಕಟ್ಟುತ್ತಿದ್ದಾನೆ. ಆದಿಚುಂಚನಗಿರಿಯಲ್ಲಿ ರಾಹುಲ್ ಗಾಂಧಿ ತಂಗಲಿದ್ದಾರೆ ಎಂದು ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಬೊಮ್ಮಾಯಿ ಹೇಳಿಕೆಗೆ ಡಿಕೆಶಿ ತಿರುಗೇಟು
Yes,I’m on bail. Sonia Gandhi & Rahul Gandhi also on bail. They’ve (BJP) dozens who’re on bail. Yediyurappa has no case against him? Bommai registered cases against me. Let him send me to Parappana Agrahara (Central Jail), I’ll take some rest: Karnataka Cong chief DK Shivakumar pic.twitter.com/lCO4cE7VAw
— ANI (@ANI) October 2, 2022
ಇಂದು ಗಾಂಧಿ ಜಯಂತಿ, ನಕಲಿ ಗಾಂಧಿಗಳ ಬಗ್ಗೆ ನಾನೇಕೆ ಮಾತನಾಡಬೇಕು? ಇಡೀ ಕಾಂಗ್ರೆಸ್ ಪಕ್ಷ ಜಾಮೀನು ಪಡೆದು ಹೊರಗಿದೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಡಿಕೆ ಶಿವಕುಮಾರ್ ಜಾಮೀನಿನ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಆಗಿತ್ತು, ಈಗ ಅದು ಇಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೊಮ್ಮಾಯಿ ಮಾತಿಗೆ ಪ್ರತಿಕ್ರಿಯಿಸಿದ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಹೌದು, ನಾನು ಜಾಮೀನಿನ ಮೇಲೆ ಇದ್ದೇನೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರು (ಬಿಜೆಪಿ) ಜಾಮೀನಿನ ಮೇಲೆ ಹತ್ತಾರು ಮಂದಿ ಹೊರಗೆ ಇದ್ದಾರೆ. ಯಡಿಯೂರಪ್ಪ ವಿರುದ್ಧ ಕೇಸ್ ಇಲ್ಲವೇ? ಬೊಮ್ಮಾಯಿ ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ನನ್ನನ್ನು ಪರಪ್ಪನ ಅಗ್ರಹಾರಕ್ಕೆ (ಕೇಂದ್ರ ಕಾರಾಗೃಹ) ಕಳುಹಿಸಲಿ, ನಾನು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
Published On - 1:57 pm, Sun, 2 October 22