ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರು ಇರಲಿಲ್ಲವೇ, ಸಿದ್ದರಾಮಯ್ಯನವರನ್ನು ಆಮದು ಮಾಡಿಕೊಂಡಿದ್ದೇಕೆ? ಲಹರ್ ಸಿಂಗ್ ಪ್ರಶ್ನೆ

| Updated By: ಆಯೇಷಾ ಬಾನು

Updated on: Nov 06, 2023 | 4:53 PM

ಎಂ.ಬಿ. ಪಾಟೀಲ್ ಅವರ ಹೇಳಿಕೆಗೆ ಬಿಜೆಪಿ ಸಂಸದ ಲಹರ್ ಸಿಂಗ್ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರು ಇರಲಿಲ್ಲವೇ? ಜೆಡಿಎಸ್ ನಿಂದ ಸಿದ್ದರಾಮಯ್ಯನವರನ್ನು ಆಮದು ಮಾಡಿಕೊಂಡು ಮುಖ್ಯಮಂತ್ರಿ ಮಾಡಲು ಕಾರಣವೇನು? ಎಂದು ಲಹರ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಎಕ್ಸ್(ಟ್ವಿಟರ್)ನಲ್ಲಿ ಪೋಸ್ಟ್ ಹಾಕಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರು ಇರಲಿಲ್ಲವೇ, ಸಿದ್ದರಾಮಯ್ಯನವರನ್ನು ಆಮದು ಮಾಡಿಕೊಂಡಿದ್ದೇಕೆ? ಲಹರ್ ಸಿಂಗ್ ಪ್ರಶ್ನೆ
ಲಹರ್ ಸಿಂಗ್
Follow us on

ಬೆಂಗಳೂರು, ನ.06: ವಿರೋಧ ಪಕ್ಷದ ನಾಯಕರಾಗಲು ಬಿಜೆಪಿಯಲ್ಲಿ ಸಮರ್ಥರು ಯಾರೂ ಇಲ್ಲವೇ? ಬಸವರಾಜ ಬೊಮ್ಮಾಯಿ, ಆರ್. ಅಶೋಕ, ಅಶ್ವತ್‌ನಾರಾಯಣ, ಸುನಿಲ್ ಕುಮಾರ್, ಯತ್ನಾಳ ಅವರೆಲ್ಲ ಅಸಮರ್ಥರೇ ಎಂದು ಪ್ರಶ್ನೆ ಮಾಡಿದ್ದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil) ಅವರಿಗೆ ಬಿಜೆಪಿ ಸಂಸದ ಲಹರ್ ಸಿಂಗ್ (Lehar Singh Siroya) ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರು ಇರಲಿಲ್ಲವೇ? ಜೆಡಿಎಸ್ ನಿಂದ ಸಿದ್ದರಾಮಯ್ಯನವರನ್ನು ಆಮದು ಮಾಡಿಕೊಂಡು ಮುಖ್ಯಮಂತ್ರಿ ಮಾಡಲು ಕಾರಣವೇನು? ಎಂದು ಲಹರ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.

ಸಂಸದ ಲಹರ್ ಸಿಂಗ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದು, “ಬಿಜೆಪಿಯಲ್ಲಿ ವಿಪಕ್ಷ ನಾಯಕರಾಗಲು ಸಮರ್ಥರಿಲ್ಲವೇ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮುಂದಾಳತ್ವ ವಹಿಸಲು ಬಿಜೆಪಿಯವರು ಏಕೆ ಕೇಳುತ್ತಿದ್ದಾರೆ ಎಂದು ಕರ್ನಾಟಕ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ. ಆದರೆ, ಮೊದಲು ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಲು ಸಮರ್ಥ ನಾಯಕರಿರಲಿಲ್ಲವೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲಿ.”

“ಜೆಡಿಎಸ್ ನಾಯಕ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಆಮದು ಮಾಡಿಕೊಂಡಿದ್ದು ಏಕೆ? ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಅಥವಾ ಎಂ.ಬಿ.ಪಾಟೀಲ್ ಅವರನ್ನೇ ಏಕೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ: ಸಿದ್ದೇಶ್ವರ ಶ್ರೀ ಅಗಲಿ ಜನವರಿ 2ಕ್ಕೆ 1 ವರ್ಷ: ಗುರುವಂದನಾ ಕಾರ್ಯಕ್ರಮ ಆಯೋಜಿಸಲು ತೀರ್ಮಾನ; ಎಂಬಿ ಪಾಟೀಲ್​

ಎಂಬಿ ಪಾಟೀಲ್ ಹೇಳಿದ್ದೇನು?

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂಬಿ ಪಾಟೀಲ್, `ವಿರೋಧ ಪಕ್ಷದ ನಾಯಕರಾಗಲು ಬಿಜೆಪಿಯಲ್ಲಿ ಸಮರ್ಥರು ಯಾರೂ ಇಲ್ಲವೇ? ಬಸವರಾಜ ಬೊಮ್ಮಾಯಿ, ಆರ್. ಅಶೋಕ, ಅಶ್ವತ್‌ನಾರಾಯಣ, ಸುನಿಲ್ ಕುಮಾರ್, ಯತ್ನಾಳ ಅವರೆಲ್ಲ ಅಸಮರ್ಥರೇ ಎಂದು ಪ್ರಶ್ನಿಸಿದ್ದರು. ಹಾಗೂ ಹೆಚ್​ಡಿ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಎನ್ನುತ್ತಿದ್ದಾರೆ. ಬಿಜೆಪಿಯವರಿಗೆ ಬರಗಾಲ ಬಂದಿದೆ ಎಂದು ವ್ಯಂಗ್ಯವಾಡಿದ್ದರು. ಅದೇ ವೇಳೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್‌ನ 19 ಶಾಸಕರು ಬೆಂಬಲ ಕೊಡುತ್ತೇವೆ ಎಂಬ ಹೆಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ ಪರಮೇಶ್ವರ, ಅವರು ಬಿಜೆಪಿ ಸೇರಿಕೊಂಡಿದ್ದಾರೆ. ಅಲ್ಲಿ ಬೆಂಬಲ ಕೊಡುತ್ತಾರೆಂದರೆ ಒಳ್ಳೆಯದೇ ಎಂದಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ