ಬೆಂಗಳೂರು: ಎಂಎಲ್ಸಿ ಸಿ.ಎಂ ಇಬ್ರಾಹಿಂ(CM Ibrahim) ಸ್ವಾಗತಿಸಿದ್ದ ತನ್ವೀರ್ ಸೇಠ್(Tanveer sait) ಆಪ್ತನಿಗೆ ಕಾಂಗ್ರೆಸ್ ಗೇಟ್‌ಪಾಸ್ ನೀಡಿದೆ. ತನ್ವೀರ್ ಸೇಠ್ ಆಪ್ತ ಅಬ್ದುಲ್ ಖಾದರ್ ಶಾಹೀದ್ರನ್ನು(Abdul Khader Shaheed) ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿ ಕಾಂಗ್ರೆಸ್ ಆದೇಶ ಹೊರಡಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆಯ ಮೇರೆಗೆ ಅಬ್ದುಲ್ ಖಾದರ್ ಶಾಹೀದ್ರನ್ನ ಉಚ್ಚಾಟನೆ ಮಾಡಲಾಗಿದೆ.
ಅಬ್ದುಲ್ ಖಾದರ್ ಶಾಹೀದ್, ಮೈಸೂರು ಮೇಯರ್ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದರು. ಸಿದ್ದು ವಿರುದ್ಧ ಘೋಷಣೆ ಕೂಗಿ ಪಕ್ಷದಿಂದ ಅಮಾನತ್ತುಗೊಂಡಿದ್ದರು. ಈಗ ಸಿ.ಎಂ ಇಬ್ರಾಹಿಂ ಸ್ವಾಗತಿಸಿದಕ್ಕೆ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಮೈಸೂರು ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ಮೂರ್ತಿ, ಅಬ್ದುಲ್ ಖಾದರ್ ಶಾಹೀದ್ ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆಂದು ದೂರು ನೀಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಉಚ್ಚಾಟನೆ ಮಾಡಲಾಗಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮತ್ತು ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ ಎಂದು ಕ್ರಮ ಕೈಗೊಳ್ಳಲಾಗಿದೆ.
‘ರಾಹುಲ್ ಗಾಂಧಿ ಇಲ್ಲಿನ ನಾಯಕರ ಹೆಸರು ಹೇಳಿ ಕರೆಯುವುದನ್ನು ಕಲಿಯಲಿ‘- ಸಿಎಂ ಇಬ್ರಾಹಿಂ
ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಲ್ಲಿನ ನಾಯಕರ ಹೆಸರು ಹೇಳಿ ಕರೆಯುವುದನ್ನು ಕಲಿಯಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ (C.M.Ibrahim) ಖಾರವಾಗಿ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ಥಾನಮಾನದ ಕುರಿತಂತೆ ಆಗಿರುವ ಮೋಸದಲ್ಲಿ ಹೈಕಮಾಂಡ್ ಕೈವಾಡ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಾಪ ಹೈಕಮಾಂಡ್ನವರಿಗೆ ಏನು ಗೊತ್ತಿದೆ? ರಾಹುಲ್ ಗಾಂಧಿಗೆ ಇಲ್ಲಿನ ನಾಯಕರ ಬಗ್ಗೆ ಏನು ಗೊತ್ತಿದೆ?’ ಎಂದು ಮರುಪ್ರಶ್ನಿಸಿದ್ದಾರೆ. ಈ ಹಿಂದಿನ ಘಟನೆಯನ್ನು ನೆನಪಿಸಿಕೊಂಡ ಇಬ್ರಾಹಿಂ, ‘‘ಕೆಪಿಸಿಸಿ ಅಧ್ಯಕ್ಷರಾಗುವ ಮೊದಲು, ದಿನೇಶ್ ಗುಂಡೂರಾವ್ ಯಾರು ಅಂತಾ ನನ್ನನ್ನು ಕೇಳಿದ್ದರು. ಇಂದಿರಾ ಗಾಂಧಿ ನಾಯಕರ ಹೆಸರನ್ನು ಹೇಳಿ ಕರೆಯುತ್ತಿದ್ದರು. ರಾಜೀವ್ ಗಾಂಧಿಯೂ ಹೆಸರು ಹೇಳಿ ಕರೆಯುತ್ತಿದ್ದರು. ಆದರೆ ರಾಹುಲ್ ಗಾಂಧಿ ಹೆಸರನ್ನು ಹೇಳಿ ಕರೆಯುವುದನ್ನು ಕಲಿತಿಲ್ಲ. ಅವರು ಇಲ್ಲಿನ ನಾಯಕರ ಹೆಸರೇಳಿ ಕರೆಯುವುದನ್ನು ಕಲಿಯಲಿ. ಇದು ನಮ್ಮ ಆಶಯ’’ ಎಂದು ಸಲಹೆ ನೀಡಿದ್ದಾರೆ.
ಯಡಿಯೂರಪ್ಪನವರು ವೀರತ್ವ ತೋರಿಸಬೇಕು; ಪಕ್ಷದಿಂದ ಹೊರಗೆ ಬರಬೇಕು- ಇಬ್ರಾಹಿಂ ಸಲಹೆ
ಜೆಡಿಎಸ್ ಪಕ್ಷ ಸೇರುವುದನ್ನು ಘೋಷಿಸಿರುವ ಸಿಎಂ ಇಬ್ರಾಹಿಂ ಇನ್ನೊಂದು ವರ್ಷದಲ್ಲಿ ಕಾಂಗ್ರೆಸ್ನವರೇ ಸಹಾಯ ಬೇಕು ಎಂದು ಬರುತ್ತಾರೆ ಎಂದಿದ್ದಾರೆ. ಸಿದ್ದರಾಮಯ್ಯನವರು ಕಾಂಗ್ರೆಸ್ನಲ್ಲಿ ಖುಷಿಯಾಗೇನೂ ಇಲ್ಲ ಎಂದೂ ಇಬ್ರಾಹಿಂ ಹೇಳಿದ್ದಾರೆ. ದೇವೇಗೌಡರ ಬುದ್ಧಿವಂತಿಕೆ ಹೊಗಳಿದ ಇಬ್ರಾಹಿಂ, ‘ಗೌಡ್ರು ಡ್ಯಾಮ್ ಕಟ್ಟೋಕೆ ಹೋಗಲ್ಲ. ಸೋರೋ ನೀರಿಗೆ ಬಕೆಟ್ ಹಿಡಿತಾರೆ. ಆ ನೀರಲ್ಲೇ ಕೊಡ ತುಂಬಿಸಿಕೊಳ್ಳುತ್ತಾರೆ’ ಎಂದಿದ್ದಾರೆ. ಯಡಿಯೂರಪ್ಪ ವ್ಯಕ್ತಿತ್ವ ದಿನೇ ದಿನೇ ಕ್ಷೀಣ ಆಗುತ್ತಿದೆ. ಅವರು ಧೈರ್ಯ ಮಾಡಬೇಕು. ವೀರತ್ವ ತೋರಿಸಬೇಕು. ಹರಹರ ಮಹಾದೇವ ಎಂದು ಹೊರಗೆ ಬರಬೇಕು ಎಂದು ಇಬ್ರಾಹಿಂ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Lata Mangeshkar Death: ಲತಾ ಮಂಗೇಶ್ಕರ್ ಅತಿ ಅಪರೂಪದ ಫೋಟೋ ಗ್ಯಾಲರಿ; ಲೆಜೆಂಡರಿ ಗಾಯಕಿಗೆ ಚಿತ್ರ ನಮನ