ಬೆಂಗಳೂರಿನಲ್ಲಿ ಪೋಷಕರು ಬೈದಿದಕ್ಕೆ ಮನೆ ಬಿಟ್ಟು ಹೋದ ಯುವಕ; ಪೊಲೀಸರಿಂದ ತೀವ್ರ ಹುಡುಕಾಟ
5,000 ಸಾವಿರ ರೂ. ಹಣ ತೆಗೆದುಕೊಂಡು ಮಗ ವಿಶಾಲ್ ಮನೆ ಬಿಟ್ಟು ಹೋಗಿದ್ದಾನೆ. ನಿನ್ನೆ (ಫೆ.05) ಸಂಜೆ ಹೊಂಡಾ ಆಕ್ಟಿವ್ ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಮನೆಯಿಂದ ಹೊರ ಹೋಗುವ ದೃಶ್ಯ ಅಪಾರ್ಟ್ಮೆಂಟ್ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಂಗಳೂರು: ಪೋಷಕರು (Parents) ಬೈದಿದಕ್ಕೆ ಯುವಕ ಮನೆ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಪಿಯುಸಿ ಪರೀಕ್ಷೆಯಲ್ಲಿ (PUC Exam) ಫೇಲ್ ಆಗಿದಕ್ಕೆ ಪೋಷಕರು ಮಗನಿಗೆ ಬೈದಿದ್ದಾರೆ. ಇದಕ್ಕೆ ಪತ್ರ ಬರೆದು ಮನೆ ಬಿಟ್ಟು ಹೋಗಿದ್ದಾನೆ. ನನ್ನ ಹುಡುಕಬೇಡಿ ಎಂದು ಪತ್ರದಲ್ಲಿ ಹೇಳಿದ್ದಾನೆ. ಬಿಲ್ಡರ್ ಮಂಜುನಾಥ್ ಎಂಬುವವರ ಪುತ್ರ ವಿಶಾಲ್ ಎಂಬಾತ ಮನೆ ಬಿಟ್ಟು ಹೋಗಿರುವ ಯುವಕ. ವಿಶಾಲ್ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದಿದ್ದ. ಆದರೆ ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಾನೆ. ಹೀಗಾಗಿ ಮನೆಯವರು ಬೈದಿದ್ದಾರೆ ಎಂದು ತಿಳಿದುಬಂದಿದೆ.
5,000 ಸಾವಿರ ರೂ. ಹಣ ತೆಗೆದುಕೊಂಡು ಮಗ ವಿಶಾಲ್ ಮನೆ ಬಿಟ್ಟು ಹೋಗಿದ್ದಾನೆ. ನಿನ್ನೆ (ಫೆ.05) ಸಂಜೆ ಹೊಂಡಾ ಆಕ್ಟಿವ್ ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಮನೆಯಿಂದ ಹೊರ ಹೋಗುವ ದೃಶ್ಯ ಅಪಾರ್ಟ್ಮೆಂಟ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮರಿಯಪ್ಪನಪಾಳ್ಯದ ಅಪಾರ್ಟ್ಮೆಂಟ್ನಿಂದ ಹೋಗಿದ್ದಾನೆ. ನಿನ್ನೆ ಸಂಜೆಯಿಂದ ಪೋಷಕರು ಮಗನನ್ನು ಹುಡುಕುತ್ತಿದ್ದಾರೆ. ಸಂಪರ್ಕಕ್ಕೆ ಸಿಗದಿದ್ದಕ್ಕೆ ಪೋಷಕರಿಗೆ ಆತಂಕ ಮೂಡಿದೆ.
ಮಗ ಕಾಣೆಯಾದ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ. ಸದ್ಯ ಕೇಸ್ ದಾಖಲಿಸಿಕೊಂಡ ಪೊಲೀಸರು ವಿಶಾಲ್ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಹೊರ ರಾಜ್ಯಕ್ಕೆ ತೆರಳಿರುವ ಬಗ್ಗೆ ಮಾಹಿತಿ ಇದೆ.
ಇದನ್ನೂ ಓದಿ
ಪ್ರಧಾನಿ ಮೋದಿ ಫೋಟೋವನ್ನೂ ಸಹಿಸಿಕೊಳ್ಳಲಾಗದಷ್ಟು ಅಸಹಿಷ್ಣುತೆಯನ್ನು ನಾಗರಿಕರು ತೋರಬಾರದು; ಕೇರಳ ಹೈಕೋರ್ಟ್
Lata Mangeshkar: ಲತಾ ಆರೋಗ್ಯ ಸ್ಥಿರವಾಗಿದೆ- ಆಶಾ ಭೋಸ್ಲೆ ಮಾಹಿತಿ; ಆಸ್ಪತ್ರೆಗೆ ಆಪ್ತರು, ಗಣ್ಯರ ಭೇಟಿ
Published On - 10:45 am, Sun, 6 February 22




