7,500 ಹೊಸ NCC ಕೆಡೆಟ್ಸ್ ತೆಗೆದುಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ; ಓಬವ್ವ ಆತ್ಮ ರಕ್ಷಣಾ ಕಲಾ ಕೌಶಲ್ಯ ತರಬೇತಿ ಚಾಲನೆ ವೇಳೆ ಸಿಎಂ ಬೊಮ್ಮಾಯಿ ಮಾತು

7,500 ಹೊಸ ಕೆಡೆಟ್ಸ್ ತೆಗೆದುಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. 44 ಸಾವಿರ ಶಾಲೆಗಳಲ್ಲಿ ಎನ್‌ಸಿಸಿ ಇದೆ. NCC ಕೆಡೆಟ್‌ಗಳ ಕಾರ್ಯಕ್ರಮ ಶೈಲಿ ಬದಲಾಯಿಸಿ. ಹೊಸ ಪರಿವರ್ತನೆಗೆ ರಕ್ಷಣಾ ಮಂತ್ರಿಗಳ ಅನುಮತಿ ಕೇಳಿದ್ದೇವೆ. -ಸಿಎಂ ಬೊಮ್ಮಾಯಿ

7,500 ಹೊಸ NCC ಕೆಡೆಟ್ಸ್ ತೆಗೆದುಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ; ಓಬವ್ವ ಆತ್ಮ ರಕ್ಷಣಾ ಕಲಾ ಕೌಶಲ್ಯ ತರಬೇತಿ ಚಾಲನೆ ವೇಳೆ ಸಿಎಂ ಬೊಮ್ಮಾಯಿ ಮಾತು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9kannada Web Team

| Edited By: Ayesha Banu

Feb 06, 2022 | 12:05 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನಸೌಧದಲ್ಲಿ ಓಬವ್ವ ಆತ್ಮ ರಕ್ಷಣಾ ಕಲಾ ಕೌಶಲ್ಯ ತರಬೇತಿ ಚಾಲನೆ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಹಾಗೂ ಕ್ರೈಸ್ತ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆಯ ಕಲೆಯನ್ನು ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಆತ್ಮ ರಕ್ಷಣೆ ಕಲೆಗಳ ಪ್ರದರ್ಶನ ಮಾಡಿದರು.

ಸಿಎಂ ಎದೆ ಎತ್ತರಕ್ಕೆ ಕಾಲು ಬೀಸಿದ ವಿದ್ಯಾರ್ಥಿನಿ ಓಬವ್ವ ಆತ್ಮ‌ರಕ್ಷಣೆ ತರಬೇತಿ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಮೊದಲು ಸಿಎಂ ಬೊಮ್ಮಾಯಿ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಸಿಎಂ ಎದೆ ಎತ್ತರಕ್ಕೆ ವಿದ್ಯಾರ್ಥಿನಿ ಕಾಲು ಬೀಸಿ ತಮ್ಮ ಕೌಶಲ್ಯ ಪ್ರದರ್ಶಿಸಿದಳು. ಆಗ ವಿದ್ಯಾರ್ಥಿನಿಗೆ ಸಿಎಂ ಶಬ್ಬಾಶ್ ಗಿರಿ ಕೊಟ್ಟರು. ತಮ್ಮ ಎದೆ ಎತ್ತರಕ್ಕೆ ಕೈ ಹಿಡಿದು ಕಿಕ್ ಮಾಡುವಂತೆ ವಿದ್ಯಾರ್ಥಿನಿಗೆ ಸೂಚಿಸಿ ವಿದ್ಯಾರ್ಥಿಯನ್ನು ಟೆಸ್ಟ್ ಮಾಡಿದರು.

ಇನ್ನು ಇದೇ ವೇಳೆ ಕಾರ್ಯಕ್ರಮ ಉದ್ಘಾಟನೆ ಬಳಿಕ ಸಿಎಂ ಬೊಮ್ಮಾಯಿ ಮಾತನಾಡಿದ್ದು ಸ್ವಾತಂತ್ರ್ಯ ಹೋರಾಟ ಮಾಡಿದ ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಡಿ ಮ್ಮಲ್ಲಮ್ಮ, ಒನಕೆ ಓಬವ್ವ, ಇವರು ಪುರುಷರನ್ನೂ ಮೀರಿಸುವ ಪೌರುಷ ಹೊಂದಿದ್ದರು ಎಂದರು. ದೇಶ ಕಟ್ಟುವುದಕ್ಕೆ ಆರ್ಥಿಕ ಅಭಿವೃದ್ಧಿ ಎಷ್ಟು ಮುಖ್ಯವೋ ಸ್ಫೂರ್ತಿ ಕೂಡ ಅಷ್ಟೇ ಮುಖ್ಯವಾಗಿರುತ್ತೆ. ಒಳ್ಳೆಯ ಇತಿಹಾಸ ಇದ್ದರೆ ದೆಶದ ಭವಿಷ್ಯ ಚೆನ್ನಾಗಿರುತ್ತದೆ. ಕನ್ನಡಿಗರ ಇತಿಹಾಸ ಹೋರಾಟ ಮತ್ತೆ ಮರುಕಳಿಸಿ ವೈಭವೀಕರಿಸಿ ಸ್ಫೂರ್ತಿ ತುಂಬುವ ಕಾಲ ಈಗ ಮತ್ತೆ ಬಂದಿದೆ.

7,500 ಹೊಸ ಕೆಡೆಟ್ಸ್ ತೆಗೆದುಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. 44 ಸಾವಿರ ಶಾಲೆಗಳಲ್ಲಿ ಎನ್‌ಸಿಸಿ ಇದೆ. NCC ಕೆಡೆಟ್‌ಗಳ ಕಾರ್ಯಕ್ರಮ ಶೈಲಿ ಬದಲಾಯಿಸಿ. ಹೊಸ ಪರಿವರ್ತನೆಗೆ ರಕ್ಷಣಾ ಮಂತ್ರಿಗಳ ಅನುಮತಿ ಕೇಳಿದ್ದೇವೆ. 50 ಸಾವಿರಕ್ಕೂ ಹೆಚ್ಚು ಕೆಡೆಟ್ಗಳಿಗೆ ರಾಜ್ಯದಿಂದ ಮಿಲಿಟ್ರಿ ಸಮಾನವಾದ ಶಿಕ್ಷಣ ನೀಡುವುದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಾದಯಾತ್ರೆ, ರೋಡ್ ಶೋಗಳಿಗೆ ನಿಷೇಧ ಮುಂದುವರಿಸಿದ ಚುನಾವಣಾ ಆಯೋಗ, ಸಭೆಗಳಿಗೆ ನಿರ್ಬಂಧ ಸಡಿಲಿಕೆ

‘ಬೆಳ್ಳನೆ ಬೆಳಗಾಯಿತು..’ ಎಂದು ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್​; ಇಲ್ಲಿದೆ ಅವರ ಕನ್ನಡ ಗೀತೆ ಬಗ್ಗೆ ವಿವರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada