Lata Mangeshkar: ಲತಾ ಆರೋಗ್ಯ ಸ್ಥಿರವಾಗಿದೆ- ಆಶಾ ಭೋಸ್ಲೆ ಮಾಹಿತಿ; ಆಸ್ಪತ್ರೆಗೆ ಆಪ್ತರು, ಗಣ್ಯರ ಭೇಟಿ

ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ. ಆಪ್ತರು ಹಾಗೂ ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಸಹೋದರಿ ಆಶಾ ಭೋಸ್ಲೆ ಲತಾ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Lata Mangeshkar: ಲತಾ ಆರೋಗ್ಯ ಸ್ಥಿರವಾಗಿದೆ- ಆಶಾ ಭೋಸ್ಲೆ ಮಾಹಿತಿ; ಆಸ್ಪತ್ರೆಗೆ ಆಪ್ತರು, ಗಣ್ಯರ ಭೇಟಿ
ಲತಾ ಮಂಗೇಶ್ಕರ್
Follow us
TV9 Web
| Updated By: shivaprasad.hs

Updated on:Feb 06, 2022 | 8:40 AM

ಮುಂಬೈ: ಹಿರಿಯ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ. ವೆಂಟಿಲೈಟರ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಲತಾ ಅವರು ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಲತಾ ಕೊವಿಡ್ ಹಾಗೂ ನ್ಯುಮೋನಿಯಾದಿಂದ ಗುಣಮುಖರಾಗಿರುವುದರಿಂದ ಚಿಕಿತ್ಸೆಗೆ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. ಜನವರಿ 8ರಂದು ಲತಾ ಅವರಿಗೆ ಕೊವಿಡ್ ಕಾಣಿಸಿಕೊಂಡಿತ್ತು. ನಂತರ ಅವರಿಗೆ ನ್ಯುಮೋನಿಯಾ ಕೂಡ ಕಾಣಿಸಿಕೊಂಡಿತ್ತು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ (Breach Candy Hospital) ತೀವ್ರ ನಿಗಾ ಘಟಕದಲ್ಲಿ ಲತಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯ ಡಾ.ಪ್ರತಿತ್ ಸಮ್ದಾನಿ ಮತ್ತು ಅವರ ತಂಡ ಲತಾ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಇತ್ತೀಚೆಗಷ್ಟೇ ಗಾಯಕಿ ಕೊವಿಡ್ ಹಾಗೂ ನ್ಯುಮೋನಿಯಾದಿಂದ ಚೇತರಿಸಿಕೊಂಡು, ವೆಂಟಿಲೇಟರ್​ನಿಂದ ಹೊರಬಂದಿದ್ದರು. ಆದರೆ ನಿನ್ನೆ (ಶನಿವಾರ) ಮತ್ತೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಮತ್ತೆ ವೆಂಟಿಲೇಟರ್ ಸಂಪರ್ಕದಲ್ಲಿದ್ದಾರೆ ಎಂದು ವೈದ್ಯರು ಸುದ್ದಿಸಂಸ್ಥೆ ಎಎನ್​ಐಗೆ ತಿಳಿಸಿದ್ದರು.

ಆಸ್ಪತ್ರೆಗೆ ಕುಟುಂಬಸ್ಥರು ಹಾಗೂ ಆಪ್ತರು ಭೇಟಿ ನೀಡಿ ಲತಾ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ. ಸಹೋದರಿ ಆಶಾ ಭೋಸ್ಲೆ ಶನಿವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ‘ಲತಾ ಅವರ ಆರೋಗ್ಯ ಈಗ ಸ್ಥಿರವಾಗಿದೆ’ ಎಂದು ಅವರು ನಂತರ ಸುದ್ದಿಗಾರರಿಗೆ ತಿಳಿಸಿದ್ದರು.

ಆಶಾ ಭೋಸ್ಲೆ ಮಾತನ್ನು ಹಂಚಿಕೊಂಡಿರುವ ಎಎನ್​ಐ:

ಆಸ್ಪತ್ರೆಗೆ ಭೇಟಿ ನೀಡುತ್ತಿರುವ ತಾರೆಯರು, ಆಪ್ತರು: ಇಂದು ಮುಂಜಾನೆ 1ಗಂಟೆ ಸುಮಾರಿಗೆ ಬಾಲಿವುಡ್​ನ ಖ್ಯಾತ ನಟಿ ಶ್ರದ್ಧಾ ಕಪೂರ್ ತಮ್ಮ ತಾಯಿಯೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದರು. ಅವರು ಲತಾ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಅಲ್ಲದೇ ಲತಾ ಅವರ ಆರೋಗ್ಯ ಬಿಗಡಾಯಿಸುವ ಸುದ್ದಿ ತಿಳಿದು ಆಪ್ತರು ಹಾಗೂ ವಿವಿಐಪಿಗಳು ಆಸ್ಪತ್ರೆಗೆ ಆಗಮಿಸಿದ್ದಾರೆ ಎಂದು ಪಿಂಕ್​ವಿಲ್ಲಾ ವರದಿ ಮಾಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ರಾಜಕಾರಣಿ ರಾಜ್ ಠಾಕ್ರೆ ಆಸ್ಪತ್ರೆಗೆ ಭೇಟಿ ನೀಡಿ ಲತಾ ಆರೋಗ್ಯ ವಿಚಾರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಟ್ವೀಟ್ ಮಾಡಿ ಲತಾ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಇದನ್ನೂ ಓದಿ:

Lata Mangeshkar: ಮತ್ತೆ ಬಿಗಡಾಯಿಸಿದ ಲತಾ ಮಂಗೇಶ್ಕರ್ ಆರೋಗ್ಯ; ವೈದ್ಯರು ಹೇಳಿದ್ದೇನು?

ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್​ 2’ ನಟಿ

Published On - 8:34 am, Sun, 6 February 22