ಬೆಂಗಳೂರಿನಲ್ಲಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಅಪರಿಚಿತ ವ್ಯಕ್ತಿ; ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಕೂಕ್ ಟೌನ್ ನ ಮೆಕ್ ಫೆರ್ಸನ್ ರಸ್ತೆಯಲ್ಲಿ ಅಪರಿಚಿತ ಕಾರೊಂದು ಬೀದಿ ನಾಯಿ ಮೇಲೆ ಕಾರು ಹತ್ತಿಸಿದ್ದಾನೆ ಕಾರು ನಿಲ್ಲಿಸಿ ಪರಿಶೀಲಿಸದೇ ಚಾಲಕನ ಅಮಾನವೀಯತೆ ಮೆರೆದಿದ್ದಾನೆ. ರಾತ್ರಿ 9:40ರ ಸುಮಾರಿಗೆ ನಡೆದಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಮೂಕ ಪ್ರಾಣಿಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ತನ್ನ ಪಾಡಿಗೆ ಓಡಾಡಿಕೊಂಡು ಇರುವ ನಾಯಿಗಳ (Dogs) ಮೇಲೆ ಉದ್ದೇಶ ಪೂರ್ವಕವಾಗಿ ವಾಹನಗಳನ್ನ (Vehicles) ಹತ್ತಿಸಿ ವಿಕೃತಿ ಮೆರೆಯುವ ಪ್ರಕರಣ ಹೆಚ್ಚಾಗಿದೆ. ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಕಣ್ಣು ಮುಂದೆ ಇರುವಾಗಲೇ ಇದೀಗ ಅಂತದ್ದೆ ಮತ್ತೊಂದು ಘಟನೆ ನಡೆದಿದೆ. ಬೀದಿ ನಾಯಿಯ ಮೇಲೆ ಕಾರು ಹತ್ತಿಸಿ ಅಪರಿಚಿತ ವ್ಯಕ್ತಿ ವಿಕೃತಿ ಮೆರೆದಿದ್ದಾನೆ. ಫೆ.2ರಂದು ಕೂಕ್ ಟೌನ್ ನ ಮೆಕ್ ಫೆರ್ಸನ್ ರಸ್ತೆಯಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೂಕ್ ಟೌನ್ ನ ಮೆಕ್ ಫೆರ್ಸನ್ ರಸ್ತೆಯಲ್ಲಿ ಅಪರಿಚಿತ ಕಾರೊಂದು ಬೀದಿ ನಾಯಿ ಮೇಲೆ ಕಾರು ಹತ್ತಿಸಿದ್ದಾನೆ ಕಾರು ನಿಲ್ಲಿಸಿ ಪರಿಶೀಲಿಸದೇ ಚಾಲಕನ ಅಮಾನವೀಯತೆ ಮೆರೆದಿದ್ದಾನೆ. ರಾತ್ರಿ 9:40ರ ಸುಮಾರಿಗೆ ನಡೆದಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಾಯಗೊಂಡು ಒದ್ದಾಡುತ್ತಿದ್ದ ನಾಯಿಯನ್ನ ಸ್ಥಳಿಯರು ರಕ್ಷಿಸಿದ್ದಾರೆ.
ಈ ಹಿಂದೆ ಅಂದರೆ ಜನವರಿ 26ರಂದು ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿ ಮಲಗಿದ್ದ ನಾಯಿ ಮೇಲೆ ಉದ್ಯಮಿ ಆದಿಕೇಶವಲು ನಾಯ್ಡು ಮೊಮ್ಮಗ ಆದಿಕೇಶವ ಕಾರು ಹತ್ತಿಸಿದ್ದ. ಘಟನೆ ಬಗ್ಗೆ ಸ್ಥಳೀಯ ಬದ್ರಿ ಎಂಬಾತ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿದ್ದಾಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಾಯಿ ಕಂಡರೆ ಆಗಲ್ಲ ಅದಕ್ಕೆ ಸಾಯಿಸಿದೆ ಎಂದು ಆದಿಕೇಶವ ಹೇಳಿಕೆ ನೀಡಿದ್ದಾಗಿ ಮಾಹಿತಿ ಲಭಿಸಿದೆ.
ಕಂಬನಿ ಮಿಡಿದ ನಟಿ ರಮ್ಯಾ: ಲಾರಾ ಎಂಬ ಮೇಲೆ ಆದಿಕೇಶವಲು ಮೊಮ್ಮಗ ಕಾರು ಹತ್ತಿಸಿದ್ದ. ಘಟನೆ ಬಳಿಕ ಶ್ವಾನ ನಾಪತ್ತೆಯಾಗಿತ್ತು. ಜನವರಿ 31ಕ್ಕೆ ನಾಯಿಯ ಮೃತ ದೇಹ ಪತ್ತೆಯಾಗಿತ್ತು. ನರಳಾಡಿ ನರಳಾಡಿ ಕೊನೆಗೂ ಪ್ರಾಣ ಬಿಟ್ಟಿದ್ದು, ಹೆಬ್ಬಾಳ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಮೃತ ಶ್ವಾನ ಲಾರಾಳ ಪೋಸ್ಟ್ ಮಾಟಂ ಮಾಡಲಾಗಿತ್ತು. ಆಂಬುಲೆನ್ಸ್ ಮೂಲಕ ಸುಮ್ಮನಹಳ್ಳಿ ಚಿತಾಗಾರಕ್ಕೆ ಶ್ವಾನ ಲಾರಾ ಮೃತದೇಹವನ್ನು ತರಲಾಗಿದ್ದು, ಬಿಬಿಎಂಪಿ ಪ್ರಾಣಿಗಳ ಚಿತಾಗಾರದಲ್ಲಿ ಲಾರಾ ಅಂತ್ಯಕ್ರಿಯೆ ಮಾಡಿದ್ದರು. ಅಂತ್ಯಕ್ರಿಯೆಯಲ್ಲಿ ಸ್ಯಾಂಡಲ್ವುಡ್ನ ನಟಿ ರಮ್ಯಾ ಭಾಗಿಯಾಗಿ ಕಂಬನಿ ಮಿಡಿದಿದ್ದರು.
ಇದನ್ನೂ ಓದಿ
ಒಮೈಕ್ರಾನ್ ತನಗಿಂತಲೂ ವೇಗವಾಗಿ ಹರಡುವ ಉಪರೂಪಾಂತರಿಯನ್ನು ಹೊಂದಿದೆ ಆದರೆ ಗಂಡಾಂತರಕಾರಿಯಲ್ಲ!!
ಗುರುವಾರ ನೆದರ್ಲ್ಯಾಂಡ್ನಿಂದ ಕಾಣೆಯಾಗಿದ್ದ ಪುಟ್ಟ ವಿಮಾನವೊಂದು ಐಸ್ಲ್ಯಾಂಡ್ನ ಒಂದು ಸರೋವರದಲ್ಲಿ ಪತ್ತೆಯಾಗಿದೆ
Published On - 9:10 am, Sun, 6 February 22