ಸಿಎಂ, ಡಿಸಿಎಂ ಬೆಂಬಲಕ್ಕೆ ನಿಲ್ಲುವಂತೆ ಶಾಸಕರು, ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ
ಸಿಎಂ ಡಿಸಿಎಂ ಬೆಂಬಲಕ್ಕೆ ಸಚಿವರು ಶಾಸಕರು ಯಾಕೆ ಮುಂದೆ ಬರುತ್ತಿಲ್ಲ ಎಂದು ಪ್ರಶ್ನೆ ಮಾಡಿರುವ ಕಾಂಗ್ರೆಸ್ ಹೈಕಮಾಂಡ್, ವಾರ್ನಿಂಗ್ ಕೊಟ್ಟಿದ್ದಾರೆ. ವಿವಾದ, ಗೊಂದಲಗಳ ಸಂದರ್ಭದಲ್ಲಿ ಶಾಸಕರು ಸಚಿವರು ಸಿಎಂ ಡಿಸಿಎಂ ಬೆಂಬಲಕ್ಕೆ ನಿಂತು ಕೌಂಟರ್ ಕೊಡುವ ಕೆಲಸ ಮಾಡಿ ಎಂದಿದ್ದಾರೆ.
ಬೆಂಗಳೂರು, ಜ.15: ಲೋಕಸಭಾ ಚುನಾವಣೆ (Lok Sabha Election) ಸಮೀಪಿಸುತ್ತಿದ್ದಂತೆ ರಾಜಕೀಯ ವಲಯದಲ್ಲಿ ಚರ್ಚೆ, ವಾದ-ವಿವಾದ, ಆರೋಪ-ಪ್ರತ್ಯಾರೋಪಗಳು ಜೋರಾಗಿದೆ. ಸೈಲೆಂಟ್ ಆಗಿದ್ದ ಅನಂತಕುಮಾರ್ ಹೆಗಡೆಯಿಂದ (Ananth Kumar Hegde) ಹಿಡಿದು ಬಿಜೆಪಿ, ಜೆಡಿಎಸ್ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದಿದ್ದಾರೆ. ಸರ್ಕಾರದ ನ್ಯೂನತೆಗಳನ್ನು ಎತ್ತಿ ಹಿಡಿದು ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಸಮಪರ್ಕವಾಗಿ ಉತ್ತರ ಕೊಡುವುದರಲ್ಲಿ ಕಾಂಗ್ರೆಸ್ ಎಡವುತಿದೆ ಎಂದು ಕಾಂಗ್ರೆಸ್ ಹೈಕಮಾಂಡ್ (Congress High Command) ಗಮನಕ್ಕೆ ಬಂದಿದ್ದು ಸಿಎಂ ಡಿಸಿಎಂ ಬೆಂಬಲಕ್ಕೆ ಸಚಿವರು ಶಾಸಕರು ಯಾಕೆ ಮುಂದೆ ಬರುತ್ತಿಲ್ಲ ಎಂದು ಪ್ರಶ್ನೆ ಮಾಡಿ ವಾರ್ನಿಂಗ್ ಕೊಟ್ಟಿದೆ.
ಶಾಸಕರಿಗೆ, ಸಚಿವರಿಗೆ ಹೈಕಮಾಂಡ್ ವಾರ್ನಿಂಗ್
ಸಿಎಂ, ಡಿಸಿಎಂ ಬೆಂಬಲಕ್ಕೆ ಸಚಿವರು, ಶಾಸಕರು ಯಾಕೆ ಮುಂದೆ ಬರುತ್ತಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಪ್ರಶ್ನೆ ಮಾಡಿದ್ದಾರೆ. ವಿವಾದ, ಗೊಂದಲಗಳ ಸಂದರ್ಭದಲ್ಲಿ ಶಾಸಕರು, ಸಚಿವರು ಸಿಎಂ ಡಿಸಿಎಂ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಶಾಸಕರು ಕೂಡ ವಿರೋಧ ಪಕ್ಷಗಳ ತಂತ್ರಗಾರಿಕೆಗೆ ಕೌಂಟರ್ ಕೊಡುವ ಕೆಲಸ ಮಾಡಿ. ಕೇವಲ ಸಿಎಂ ಡಿಸಿಎಂ ಮಾತ್ರ ಸರ್ಕಾರವನ್ನು ಸಮರ್ಥನೆ ಮಾಡಿಕೊಂಡರೆ ಸಾಲದು. ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಶಾಸಕರೇ ಜನರ ಮುಂದಿಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ್ದಾರೆ.
ಇದನ್ನೂ ಓದಿ: ಪ್ರಚೋದನಾಕರಿ ಹೇಳಿಕೆ: ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ಸುವೋಟೊ ಕೇಸ್ ದಾಖಲು
ಇನ್ನು ಸರ್ಕಾರದ ಕೆಲಸ, ಕೇಂದ್ರದಿಂದ ಆಗುತ್ತಿರುವ ಅನ್ಯಾಯಗಳ ಬಗ್ಗೆ ಶಾಸಕರೇ ಜನರ ಮುಂದಿಡಬೇಕು. ವಿಪಕ್ಷಗಳು ಸರ್ಕಾರವನ್ನು ಅಟ್ಯಾಕ್ ಮಾಡುವಾಗ ಶಾಸಕರು ಸಚಿವರು ಸಿಎಂ ಡಿಸಿಎಂ ಬೆಂಬಲಕ್ಕೆ ಬರಬೇಕು. ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಅಧ್ಯಯನ ಮಾಡಿ ಎಂದು ಹೈಕಮಾಂಡ್ ಸಲಹೆ ನೀಡಿದ್ದು ಶಾಸಕರು ಸಚಿವರಿಗೆ ಕಿವಿ ಮಾತು ಹೇಳಿದ್ದಾರೆ.
ಕಾರ್ಯಕರ್ತರೊಂದಿಗೆ ಸಭೆ ನಡೆಸಲು ಹೆಗಡೆ ನಿರ್ಧಾರ
ಮಸೀದಿ ಹಾಗೂ ಸಿದ್ಧರಾಮಯ್ಯ ಬಗ್ಗೆ ಆಡಿದ ಮಾತಿಗೆ ಬದ್ಧವಾಗಿರಲು ನಿರ್ಧರಿಸಿ, ಈಗ ಎದ್ದಿರುವ ಹಿಂದುತ್ವದ ಅಲೆಯನ್ನೆ ಅಸ್ತ್ರವಾಗಿಸಲು ಅನಂತ ಕುಮಾರ್ ಹೆಗಡೆ ಪ್ಲಾನ್ ಮಾಡಿಕೊಂಡಿದ್ದಾರೆ. ನಾಳೆ ಹಲಿಯಾಳ, ಜೊಯಿಡಾ, ದಾಂಡೆಲಿ ಮೂರು ತಾಲೂಕುಗಳ ಕಾರ್ಯಕರ್ತರ ಜೊತೆ ಹೆಗಡೆ ಸಭೆ ಮಾಡಲು ನಿರ್ಧರಿಸಿದ್ದಾರೆ. ನಾಡಿದ್ದು ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ತಾಲೂಕಿಗೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸಲು ಮುಂದಾಗಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ