ಸಿದ್ದರಾಮಯ್ಯ ಇಲ್ಲದೆ ಕರ್ನಾಟಕದಲ್ಲಿ ಕಾಂಗ್ರೆಸ್ ಝೀರೋ: ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ

ಕರ್ನಾಟಕದಲ್ಲಿ ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಶೂನ್ಯ ಎಂದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಅವರನ್ನು ಅಗೌರವದಿಂದ ಕಳಿಸಲು ಇವರು ಏನೆಲ್ಲಾ ಮಾಡಿದ್ದಾರೆ ಅಂತಾ ಚರ್ಚೆ ನಡೆಯುತ್ತಾ ಇದೆ. ಸ್ಟಿಂಗ್ ಆಪರೇಷನ್ ತೆಗೆದುಕೊಂಡು ಹೋಗಿ ಹೈಕಮಾಂಡ್​ಗೆ ಕೊಟ್ಟು ರಾಜೀನಾಮೆ ಪಡೆದಿದ್ದಾರೆಂದು ಹೇಳಲಾಗ್ತಿದೆ. ಆ ಸ್ಟಿಂಗ್ ಆಪರೇಷನ್ ಹಿಂದೆ ಇರೋರು ಯಾರು ಚರ್ಚೆ ಆಗಬೇಕಲ್ವಾ ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಇಲ್ಲದೆ ಕರ್ನಾಟಕದಲ್ಲಿ ಕಾಂಗ್ರೆಸ್ ಝೀರೋ: ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
Image Credit source: PTI
Edited By:

Updated on: Oct 07, 2026 | 5:34 PM

ಬೆಂಗಳೂರು, ಅಕ್ಟೋಬರ್​​ 07: ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಉಳಿದಿದ್ರೆ ಸಿದ್ದರಾಮಯ್ಯ ಕಾರಣ. ಅವರು ಇಲ್ಲದೆ ಕಾಂಗ್ರೆಸ್ ಝೀರೋ. ಅಂತಹ ವ್ಯಕ್ತಿಯನ್ನು ಸಿಎಂ ಸ್ಥಾನದಿಂದ ತೆಗೆಯಲು ಏನು ಕಾರಣ ಎಂದು ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯನವರು ದೇವರಾಜ ಅರಸು ದಾಖಲೆ ಮುರಿದವರು. ಒಂದು ವರ್ಗದಲ್ಲಿ ಸಿದ್ದರಾಮಯ್ಯ ಬಗ್ಗೆ ಒಳ್ಳೆಯ ಭಾವನೆ ಇದೆ. ಅವರ ಪ್ರತಿಮೆ ಕೂಡ ಅನಾವರಣ ಮಾಡಿದರು. ಅಂತಹ ವ್ಯಕ್ತಿಯನ್ನ ಸಂಪುಟ ವಿಸ್ತರಣೆಗೆಂದು ದೆಹಲಿಗೆ ಕರೆಸಿ, ಕ್ಷಣಮಾತ್ರದಲ್ಲಿ ರಾಜೀನಾಮೆ ಪಡೆದರು ಎಂದವರು ದೂರಿದ್ದಾರೆ.

‘ಎಸ್​ಐಟಿಯಿಂದ ತನಿಖೆ ಮಾಡಿಸಲಿ’

Kumaraswamy on Siddaramaiah: ನನ್ನ ಹೇಳಿಕೆಗಳನ್ನ ಅವ್ರಿಗೆ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ ಎಂದ ಕುಮಾರಣ್ಣ|#TV9D

ಸಿದ್ದರಾಮಯ್ಯರನ್ನು ಅಗೌರವದಿಂದ ಕಳಿಸಲು ಇವರು ಏನೆಲ್ಲ ಮಾಡಿದ್ದಾರೆ ಅಂತಾ ಚರ್ಚೆ ನಡೆಯುತ್ತಾ ಇದೆ. ಸ್ಟಿಂಗ್ ಆಪರೇಷನ್ ತೆಗೆದುಕೊಂಡು ಹೋಗಿ ಹೈಕಮಾಂಡ್​ಗೆ ಕೊಟ್ಟು ರಾಜೀನಾಮೆ ಪಡೆದಿದ್ದಾರೆಂದು ಹೇಳಲಾಗ್ತಿದೆ. ಆ ಸ್ಟಿಂಗ್ ಆಪರೇಷನ್ ಹಿಂದೆ ಇರೋರು ಯಾರು ಚರ್ಚೆ ಆಗಬೇಕಲ್ವಾ ಎಂದು ಹೆಚ್​​ಡಿಕೆ ಹೇಳಿದ್ದಾರೆ. ನಕಲಿ ಸಿಮ್​ ಬಳಸಿ ಸಿಎಂ ವಿರುದ್ಧ ಕುತಂತ್ರ ನಡೆಸಿದ್ದಾರೆಂಬ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆಗೂ ಕೌಂಟರ್​​ ನೀಡಿದ ಅವರು, ಆ ಬಗ್ಗೆ ಎಸ್​ಐಟಿಯಿಂದ ತನಿಖೆ ಮಾಡಿಸಲಿ. ಮುಂದಿನ ದಿನಗಳು ಕುಮಾರಸ್ವಾಮಿ ವರ್ಸಸ್ ಕಾಂಗ್ರೆಸ್ ಪಕ್ಷ ಎಂಬಂತಾಗಲಿದೆ. ಇದನ್ನು ಅರಗಿಸಿಕೊಳ್ಳಲಾರದೇ ಎಲ್ಲದಕ್ಕೂ ನನ್ನ ಮೇಲೆ ಹೇಳಿಕೆ ಕೊಡ್ತಾರೆ. ಅದಕ್ಕೆಲ್ಲಾ ನಾನು ಉತ್ತರ ಕೊಡುವುದಿಲ್ಲ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ನೈಸ್​​ ಟೋಲ್ ವಿವಾದ: 2008-09 ರಿಂದ 2025ರವರೆಗೆ 4,756 ಕೋಟಿ ರೂ ಸಂಗ್ರಹ: ಅಂಕಿ-ಸಂಖ್ಯೆ ಬಿಚ್ಚಿಟ್ಟ ಕುಮಾರಸ್ವಾಮಿ

ಸ್ಟಿಂಗ್ ಆಪರೇಷನ್ ಬಗ್ಗೆ ಕೆ.ಎನ್.ರಾಜಣ್ಣ ಏನು ಚರ್ಚೆ ಮಾಡಿದರು? ಸಂಪುಟದ ಮಂತ್ರಿನೇ ಮಾಡಿದ್ದು ಅಂತಾ ರಾಜಣ್ಣ ಹೇಳಿದ್ದು ಅಲ್ವಾ? ಹೀಗಿರುವಾಗ ರಾಜಣ್ಣ ಬಾಯಿ ಮುಚ್ಚಿಸಿದ್ದು ಯಾಕೆ? ಸಂಪುಟ ಸಭೆಯಲ್ಲಿ ನಿನ್ನೆ ಸಿಎಂ ಯಾಕೆ ಸ್ಟಿಂಗ್​​ ಆಪರೇಷನ್​​ ವಿಚಾರ ಪ್ರಸ್ತಾಪಿಸಿದರು? ಯಾವುದೋ ಫೈಲ್ ಇಟ್ಟುಕೊಂಡು ವಿಧಾನಸೌಧಕ್ಕೆ ಹೋಗ್ತಿದ್ರಲ್ಲ, ಯಾರು ಸ್ಟಿಂಗ್​ ಮಾಡಿದ್ದು ಅಂತಾ ಅದರಲ್ಲಿ ಇರಬೇಕು ಅಲ್ಲವೇ? ಬೇರೆಯವರು ಮಾಡಿದ್ದಾರಾ ಅಥವಾ ಕುಮಾರಸ್ವಾಮಿ ಮಾಡಿದ್ದಾರಾ ಎಂಬುದು ಆ ಫೈಲ್​​ ಅಲ್ಲಿಯೇ ಇರಬೇಕಲ್ಲವೇ? ಆ ಸತ್ಯವನ್ನು ಜನರ ಮುಂದೆ ಇಡುವುದಕ್ಕೆ ಹೇಳಿ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:33 pm, Wed, 7 October 26

ಸುನಿಲ್​ ಎಮ್​ ಹೆಚ್​
Loading...
Unable to load recommendations.
Follow Us