ಕೆಜಿಎಫ್ ಟು ಡೆಲ್ಲಿ: ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬುಗೆ ಇ.ಡಿ ಬುಲಾವ್; ನಾಳೆ ದೆಹಲಿಯತ್ತ ಪ್ರಯಾಣ

ಕೆಜಿಎಫ್ ಬಾಬು ಇಂದು ಇಡಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದ್ರೆ ರಾಹುಲ್ ಗಾಂಧಿ(Rahul Gandhi) ವಿಚಾರಣೆ ಹಿನ್ನೆಲೆ ನಾಳೆ ಬರಲು ಸೂಚಿಸಲಾಗಿದೆ. ಹೀಗಾಗಿ ನಾಳೆ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ.

ಕೆಜಿಎಫ್ ಟು ಡೆಲ್ಲಿ: ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬುಗೆ ಇ.ಡಿ ಬುಲಾವ್; ನಾಳೆ ದೆಹಲಿಯತ್ತ ಪ್ರಯಾಣ
ಕೆಜಿಎಫ್ ಬಾಬು
Edited By:

Updated on: Jun 15, 2022 | 10:19 PM

ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬುಗೆ ಇಡಿ(Enforcement Directorate) ಬುಲಾವ್ ಕೊಟ್ಟಿದೆ. ಹೀಗಾಗಿ ನಾಳೆ ಇಡಿ ವಿಚಾರಣೆಗೆ ಕೆಜಿಎಫ್ ಬಾಬು(KGF Babu) ಹಾಜರಾಗಲಿದ್ದಾರೆ. ನವದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ. ಕೆಜಿಎಫ್ ಬಾಬು ಇಂದು ಇಡಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದ್ರೆ ರಾಹುಲ್ ಗಾಂಧಿ(Rahul Gandhi) ವಿಚಾರಣೆ ಹಿನ್ನೆಲೆ ನಾಳೆ ಬರಲು ಸೂಚಿಸಲಾಗಿದೆ. ಹೀಗಾಗಿ ನಾಳೆ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ.

ಕೆಜಿಎಫ್ ಬಾಬು, ಸ್ಕ್ರ್ಯಾಪ್ ಬ್ಯುಸಿನೆಸ್ ಶುರುಮಾಡಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಬೆಳೆದಂತವ್ರು. ಕಳೆದ ಬಾರಿಯ ವಿಧಾನ ಪರಿಷತ್ ಎಲೆಕ್ಷನ್ಗೂ ನಿಂತು ಸದ್ದು ಮಾಡಿದ್ದವರು. ಆದ್ರೆ, ಇಂತಹ ಬಾಬು ಖಜಾನೆ ಮೇಲೆ ಇಡಿ ಕಣ್ಣು ಬಿದ್ದಿತ್ತು. ಮೇ 28ರ ಶನಿವಾರ ಬಾಬು ಮನೆ ಮೇಲೆ ರೇಡ್ ಮಾಡಿ, ಸುಮಾರು 18 ಗಂಟೆಗಳ ಕಾಲ ತಲಾಶ್ ನಡೆಸಿದ್ದ ಅಧಿಕಾರಿಗಳು ಹಲವು ಕಡತಗಳನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಕೆಜಿಎಫ್ ಬಾಬುಗೆ ವಿಚಾರಣೆಗಾಗಿ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.

ಇನ್ನು ಮತ್ತೊಂದು ಕಡೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಳೆದ 3 ದಿನಗಳಿಂದ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ ವಿಚಾರಣೆ ನಡೆಸುತ್ತಿದೆ. ಹೀಗಾಗಿ ಇದನ್ನು ಖಂಡಿಸಿ ನಾಳೆ ಕೆಪಿಸಿಸಿ ಕಚೇರಿಯಿಂದ ರಾಜಭವನದವರೆಗೆ ಮೆರವಣಿಗೆ ಮೂಲಕ ತೆರಳಿ ರಾಜಭವನಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ಮುಂದಾಗಿದೆ. ನಾಳೆ ಬೆಳಗ್ಗೆ 9.30ರಿಂದ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ನ ನೂರಾರು ಕಾರ್ಯಕರ್ತರ ಜೊತೆ ಮುತ್ತಿಗೆ ಹಾಕುತ್ತೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ‘ನನ್ನನ್ನೇಕೆ ದೂಷಿಸುತ್ತೀರಿ?’; ಏಕಾಏಕಿ ಸಿಟ್ಟಾದ ನಿರ್ಮಾಪಕ ಕರಣ್​ ಜೋಹರ್

ಇನ್ನು ನಾಳೆ ಮೆರವಣಿಗೆಯಲ್ಲಿ ತೆರಳಿ ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು. ನಾಡಿದ್ದು ಜಿಲ್ಲಾ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಪ್ರಜಾಪ್ರಭುತ್ವಕ್ಕೆ ಹೊಡೆತ ಬಿದ್ದಾಗ ಜನ ಸುಮ್ಮನೆ ಕೂರುವುದಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:05 pm, Wed, 15 June 22