AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಸಿಎಂ ಯಾರು, ನಿಮಗಿಂತ್ಲೂ ಚಕ್ರತೀರ್ಥ ದೊಡ್ಡೋರಾ: ಬೊಮ್ಮಾಯಿ ವಿರುದ್ಧ ಹರಿಹಾಯ್ದ ಪ್ರಿಯಾಂಕ್ ಖರ್ಗೆ

ನಮ್ಮ ರಾಜ್ಯದ ಮುಖ್ಯಮಂತ್ರಿ ಯಾರು ಎಂದು ಗಂಭೀರವಾಗಿ ಪ್ರಶ್ನಿಸಿದರು. ‘ಎಲ್ಲದಕ್ಕೂ‌ ಮೂಗ ಬಸವನ ರೀತಿ ಇರ್ತೀರಿ. ನಿಮಗಿಂತ ಚಕ್ರತೀರ್ಥ ದೊಡ್ಡವರಾದ್ರಾ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ನಮ್ಮ ಸಿಎಂ ಯಾರು, ನಿಮಗಿಂತ್ಲೂ ಚಕ್ರತೀರ್ಥ ದೊಡ್ಡೋರಾ: ಬೊಮ್ಮಾಯಿ ವಿರುದ್ಧ ಹರಿಹಾಯ್ದ ಪ್ರಿಯಾಂಕ್ ಖರ್ಗೆ
ಶಾಸಕ ಪ್ರಿಯಾಂಕ್ ಖರ್ಗೆ
TV9 Web
| Edited By: |

Updated on: Jun 04, 2022 | 2:58 PM

Share

ಬೆಂಗಳೂರು: ಪಠ್ಯವಿವಾದ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನಡೆದುಕೊಂಡಿರುವ ರೀತಿಯನ್ನು ಕಾಂಗ್ರೆಸ್​ ಖಂಡಿಸಿದೆ. ಪಿಎಸ್​ಐ ನೇಮಕಾತಿ ಹಗರಣ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಪ್ರಿಯಾಂಕ್ ಖರ್ಗೆ (Priyank Kharge) ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿಯೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಮುಖ್ಯಮಂತ್ರಿ ಯಾರು ಎಂದು ಗಂಭೀರವಾಗಿ ಪ್ರಶ್ನಿಸಿದರು. ‘ಎಲ್ಲದಕ್ಕೂ‌ ಮೂಗ ಬಸವನ ರೀತಿ ಇರ್ತೀರಿ. ನಿಮಗಿಂತ ಚಕ್ರತೀರ್ಥ ದೊಡ್ಡವರಾದ್ರಾ. ಬಸವ, ಬುದ್ಧ, ಅಂಬೇಡ್ಕರ್​ಗೆ ಅವರು ಅವಮಾನ ಮಾಡಿದ್ದಾನೆ. ನಾರಾಯಣಗುರು, ನಾಡಗೀತೆಗೆ ಅವಮಾನ ಮಾಡಿದ್ದಾನೆ. ಯಾಕೆ ನೀವು ಅವನ ಮೇಲೆ ಕ್ರಮ ಜರುಗಿಸಲಿಲ್ಲ ಎಂದು ಪ್ರಶ್ನಿಸಿದರು.

ಪಿಎಸ್​ಐ ಹಗರಣ ನಡೆದಾಗ ಸುಮ್ಮನಿದ್ದಿರಿ. ಉಪನ್ಯಾಸಕರ ನೇಮಕಾತಿ ಹರಗಣ ನಡೆದರೂ ಸುಮ್ಮನಿದ್ದಿರಿ. ಶ್ರೀರಾಮಸೇನೆ ನಿಮ್ಮ ಗಂಡಸ್ತನದ ಬಗ್ಗೆ ಪ್ರಶ್ನೆ ಮಾಡುತ್ತೆ. ನಿಮಗೆ ಡೇಟ್ ಮೇಲೆ ಡೇಟ್ ಕೊಡ್ತಾರೆ. ಯಾಕೆ ಯಾರ ಮೇಲೂ ‌ಕ್ರಮ ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಪ್ರಕಾರ ರೋಹಿತ್ ಚಕ್ರತೀರ್ಥ ಪ್ರಶ್ನಾತೀತರೇ? ನಿಮಗೆ ರೋಹಿತ್ ಬೇಕು. ವಿದ್ಯಾರ್ಥಿಗಳು ಮುಖ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಗೊಂದಲವಿದ್ದರೆ ಪರಿಶೀಲನೆ ಮಾಡುವುದಾಗಿ ಸಿಎಂ ಹೇಳುತ್ತಾರೆ. ಈಗ ಪರಿಷ್ಕರಣ ಸಮಿತಿ ವಿಸರ್ಜಿಸಿದ್ದೀರಿ. ಪುಸ್ತಕಗಳು ಈಗಾಗಲೇ ಮುದ್ರಣವಾಗಿದ್ದು, ಬಿಇಒ ಕಚೇರಿಗೆ ತಲುಪಿವೆ. ಸಮಿತಿಯೇ ಇಲ್ಲ ಅಂದರೆ ಪರಿಶೀಲನೆ ಹೇಗೆ ಸಾಧ್ಯ? ಎಸ್​ಡಿಎಂಸಿಗಳಿಗೆ ಕೊಡಬೇಕಾದಷ್ಟು ಅನುದಾನವನ್ನು ಈವರೆಗೆ ಕೊಟ್ಟಿಲ್ಲ. ಸ್ಕಾಲರ್​ಶಿಪ್, ಸೈಕಲ್​ಗಳ ವಿತರಣೆಯಾಗಿಲ್ಲ. ಇನ್ನು ಮಕ್ಕಳ ಕಲಿಕೆ ಎಲ್ಲಿಂದ ಬರುತ್ತದೆ? ಮಕ್ಕಳ ಕಲಿಕೆಗೆ ಏನಾದ್ರು ಕಾರ್ಯಕ್ರಮ ತಂದಿದ್ದೀರಾ ಎಂದು ಕೇಳಿದರು.

ಕೊವಿಡ್​ನಿಂದ ಮಕ್ಕಳ ಕಲಿಕೆ ಹೋಗಿಬಿಟ್ಟಿದೆ. ಆದರೆ ಬಡವರ ಮಕ್ಕಳಿಗೆ ಕೇಸರಿ ಶಾಲು ಹಾಕುತ್ತೀರಿ. ಕೇಸರಿ ಶಾಲು ಹಾಕಿರು ಬಿಜೆಪಿ ನಾಯಕರ ಮಕ್ಕಳು ಆರ್​ಎಸ್​ಎಸ್ ಶಾಖೆಗಳಿಗೆ ಹೋಗುತ್ತಿದ್ದಾರಾ? ಬಡವರ ಮಕ್ಕಳು ಇವತ್ತು ಶಾಖೆಗೆ ಹೋಗುತ್ತಾರೆ. ನಿಮ್ಮ ಮಕ್ಕಳು ಒಳ್ಳೊಳ್ಳೆ ಶಿಕ್ಷಣ ಕಲಿಯಬೇಕು. ಬಡವರ ಮಕ್ಕಳು ಗೋಶಾಲೆಗೆ ಹೋಗಿ ಗೋರಕ್ಷಕರಾಗಬೇಕು. ಇದು ಸರಿಯೇ ಇದನ್ನ ಮೊದಲು ನಿಲ್ಲಿಸಿ ಎಂದು ಸರ್ಕಾರದ ವಿರುದ್ಧ ಪ್ರಿಯಾಂಕ್ ವಾಗ್ದಾಳಿ ನಡೆಸಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ