‘ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಎಲ್ಲಾ ಕೆಲಸ ಕಾಂಗ್ರೆಸ್ನದ್ದು, ಬಿಜೆಪಿ ಸರ್ಕಾರ ಈವರೆಗೆ ಹಣ ಬಿಡುಗಡೆ ಮಾಡಿಲ್ಲ’
ಬಿಜೆಪಿ ಶಾಸಕರು, ಸಂಸದರು, RSSನಿಂದ ಮರು ವಿಂಗಡಣೆ ಮಾಡಲಾಗುತ್ತಿದೆ. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯೋಕೆ ಹೊರಟಿದ್ದಾರೆ ಎಂದು ಬಿಜೆಪಿ, RSS ವಿರುದ್ಧ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು: ನಗರದ 198 ವಾರ್ಡ್‌ಗಳಲ್ಲಿಯೂ ರಸ್ತೆ ಗುಂಡಿಗಳಿವೆ. 2 ತಿಂಗಳ ಅವಧಿಯಲ್ಲಿ ಕೆಲ ರಸ್ತೆ ಗುಂಡಿ ಮುಚ್ಚಲಾಗಿದೆ. 2 ತಿಂಗಳ ಅವಧಿಯಲ್ಲಿ ಎಲ್ಲ ರಸ್ತೆ ಗುಂಡಿ ಮುಚ್ಚಬೇಕಾಗಿತ್ತು. ಈ ಅವಧಿಯಲ್ಲಿ ರಸ್ತೆಗೆ ಡಾಂಬರನ್ನೇ ಹಾಕಬಹುದಾಗಿತ್ತು. ಆದರೆ ಇಲ್ಲಿಯವರೆಗೆ ಗುಂಡಿ ಮುಚ್ಚಿಲ್ಲ, ಡಾಂಬರೂ ಹಾಕಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಬುಧವಾರ ಆರೋಪ ಮಾಡಿದ್ದಾರೆ. 2 ವರ್ಷದಿಂದ ರಾಜ್ಯ ಸರ್ಕಾರ ಬಿಬಿಎಂಪಿಗೆ ಹಣ ಕೊಟ್ಟಿಲ್ಲ. ಪಾಲಿಕೆಯಿಂದಲೂ ಗುಂಡಿ ಮುಚ್ಚುವ ಕೆಲಸ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಈಗ ನಡೆಯುತ್ತಿರುವ ಎಲ್ಲ ಕೆಲಸ ನಮ್ಮದು. ಟೆಂಡರ್ ಶ್ಯೂರ್ ಎಲ್ಲಾ ನಮ್ಮ ಅವಧಿಯಲ್ಲಿ ಆಗಿರುವುದು. 1,500 ಕೋಟಿ ರೂಪಾಯಿ ನೀಡುವುದಾಗಿ ಹೇಳಿದ್ದರು. ಆದರೆ ಆ ಹಣವನ್ನು ಈವರೆಗೆ ಬಿಡುಗಡೆ ಮಾಡಿಲ್ಲ. ಪ್ರಚಾರಕ್ಕೆ ಮಾತ್ರ ನವ ಬೆಂಗಳೂರು ಎಂದು ಹೇಳುತ್ತಾರೆ. ಮೂರು ವರ್ಷದಲ್ಲಿ 6,000 ಕೋಟಿ ಕೊಡ್ತೇವೆ ಎಂದ್ರು. ಇದು ಬಿಡುಗಡೆಯಾಗೋದು ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಶನಿವಾರ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಬಗ್ಗೆ ಹೇಳುತ್ತಾರೆ. ಆಯುಕ್ತರು ಮಾಡಬೇಕಾದ ಕೆಲಸ ಶಾಸಕರು ಮಾಡ್ತಿದ್ದಾರೆ. ಬಿಜೆಪಿ ಶಾಸಕರು, ಸಂಸದರು, RSSನಿಂದ ಮರು ವಿಂಗಡಣೆ ಮಾಡಲಾಗುತ್ತಿದೆ. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯೋಕೆ ಹೊರಟಿದ್ದಾರೆ ಎಂದು ಬಿಜೆಪಿ, RSS ವಿರುದ್ಧ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ವಿದ್ಯುತ್ ಬಿಲ್ ಜತೆ ಕಸದ ತೆರಿಗೆ ಸೇರಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು ಬಂದಿರೋದೇ ಜನರ ತಲೆ ಮೇಲೆ ಹಾಕೋಕೆ. ಚುನಾವಣೆ ಮುಗಿಯುತ್ತಿದ್ದಂತೆ ತೆರಿಗೆಯನ್ನ ಹಾಕುತ್ತಾರೆ. ಬಿಜೆಪಿಯವರು 8 ಸಾವಿರ ಕೋಟಿ ಸಾಲ ಬಿಟ್ಟುಹೋಗಿದ್ರು. ಕಟ್ಟಡಗಳನ್ನೆಲ್ಲಾ ಅಡ ಇಟ್ಟು ಹೋಗಿದ್ದರೆಂದು ಆರೋಪ ಮಾಡಿದ್ದಾರೆ. ನಾವು ಬಂದ ಮೇಲೆ ಬಿಡಿಸಿಕೊಂಡೆವು ಎಂದು ತಿಳಿಸಿದ್ದಾರೆ.
ಕೊರೊನಾ ಕಡಿಮೆಯಾದ ಬಳಿಕ ಮೇಕೆದಾಟು ಪಾದಯಾತ್ರೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಫೆಬ್ರವರಿ 20ರ ಬಳಿಕ ನಡೆಯುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಮಲ್ಲೇಶ್ವರಂ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸಲು ನಿರ್ಧಾರ ಮಾಡಲಾಗಿದೆ. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಮಾರ್ಗ ನಿಗದಿಯಾಗಿದೆ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅನುದಾನ ತಾರತಮ್ಯ ವಿರೋಧಿಸಿ ಸಿಎಂ ಕಚೇರಿ ಮುಂದೆ ಕಾಂಗ್ರೆಸ್‌ನಿಂದ ಧರಣಿ: ರಾಮಲಿಂಗಾರೆಡ್ಡಿ ಹೇಳಿಕೆ
ಇದನ್ನೂ ಓದಿ: ಫೆಬ್ರವರಿ 20ರ ನಂತರ ಮೇಕೆದಾಟು 2ನೇ ಹಂತದ ಪಾದಯಾತ್ರೆ ಆರಂಭ: ಡಿಕೆ ಸುರೇಶ್ ಹೇಳಿಕೆ