ಫೆಬ್ರವರಿ 20ರ ನಂತರ ಮೇಕೆದಾಟು 2ನೇ ಹಂತದ ಪಾದಯಾತ್ರೆ ಆರಂಭ: ಡಿಕೆ ಸುರೇಶ್ ಹೇಳಿಕೆ
ಕೆಲವರು ಸುಳ್ಳನ್ನ ಅವರ ಮನೆ ದೇವರು ಮಾಡಿಕೊಂಡಿದ್ದಾರೆ. ಯಾರು ಅಂತ ಹೇಳಲು ಹೋಗಲ್ಲ ಎಂದು ಇದೇ ವೇಳೆ ರಾಮನಗರ ತಾಲೂಕಿನ ಬಸವನಪುರದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ರಾಮನಗರ: ಮೇಕೆದಾಟು ಪಾದಯಾತ್ರೆ ತಡೆದಿದ್ದಾರೆ, ಎಷ್ಟು ದಿನ ತಡೆಯುತ್ತಾರೆ. ಫೆಬ್ರವರಿ 20ರ ನಂತರ ಮೇಕೆದಾಟು 2ನೇ ಹಂತದ ಪಾದಯಾತ್ರೆ ಆರಂಭ ಮಾಡುತ್ತೇವೆ ಎಂದು ರಾಮನಗರ ತಾಲೂಕಿನ ಬಸವನಪುರದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದಾರೆ. ಕೆಲವರು ಸುಳ್ಳನ್ನ ಅವರ ಮನೆ ದೇವರು ಮಾಡಿಕೊಂಡಿದ್ದಾರೆ. ಯಾರು ಅಂತ ಹೇಳಲು ಹೋಗಲ್ಲ ಎಂದು ಇದೇ ವೇಳೆ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಒಂದು ವರ್ಷದಿಂದ ಜಿಲ್ಲೆ ಕಾಣುತ್ತಿದೆ, ಈ ಮುಂಚೆ ಕಾಣ್ತಿರಲಿಲ್ಲ. ಸುಳ್ಳು ಹೇಳಿದ್ದಾರೆ ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಉಳ್ತಾರ್ ದೊಡ್ಡಿ, ದೊಡ್ಡಮಣ್ಣಗುಡ್ಡೆ, ಮಾಕಳಿ, ತೆಂಗಿನಕಲ್ಲು ಅರಣ್ಯ ಪ್ರದೇಶದ ಬಗ್ಗೆ ಮಾತನಾಡುತ್ತಾರೆ. ಬಹಳ ಸಂತೋಷವಾಗಿದೆ ಅವರು ಇಷ್ಟೆಲ್ಲ ತಿಳಿದುಕೊಂಡಿದ್ದಾರೆ. ಹದಿನೈದು ವರ್ಷವಾದ ನಂತರವಾದರು ತಿಳಿದುಕೊಂಡಿದ್ದಾರೆ. ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಅವರಿಗೆ ಅಭಿನಂದನೆ ಎಂದು ರಾಮನಗರ ತಾಲೂಕಿನ ಬಸವನಪುರದಲ್ಲಿ ಡಿ.ಕೆ. ಸುರೇಶ್ ಹೇಳಿದ್ದಾರೆ.
ಕಾಂಗ್ರೆಸ್-ಬಿಜೆಪಿ ನಡುವೆ ಮೇಕೆದಾಟು ಯೋಜನೆ (Mekedatu Project) ಪಾದಯಾತ್ರೆ ಸಂಬಂಧಿಸಿದಂತೆ ರಾಜಕೀಯ ದಾಳ-ಪ್ರತಿದಾಳ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕೊವಿಡ್ ಮೂರನೇ ಅಲೆ ಶಾಂತಗೊಂಡ ನಂತರ ಕಾಂಗ್ರೆಸ್ ನಾಯಕರು ತಾವು ನಿಲ್ಲಿಸಿದ್ದ ಪಾದಯಾತ್ರೆಯನ್ನು ರಾಮನಗರದಿಂದಲೇ (Ramanagara) ಪಾದಯಾತ್ರೆ ಮುಂದುವರಿಸುವುದಾಗಿ ಹೇಳಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಸರ್ಕಾರ ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಿದೆ. ಈ ಸಭೆಯು ಫೆಬ್ರುವರಿ ಮೊದಲವಾರದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆ ಸೇರಿದಂತೆ ಅಂತರರಾಜ್ಯ ಜಲವಿವಾದಗಳನ್ನು ಚರ್ಚಿಸಲು ಸರ್ವಪಕ್ಷ ಸಭೆ ಕರೆದಿದ್ದಾರೆ ಮುಖ್ಯಮಂತ್ರಿ ಬೊಮ್ಮಾಯಿ
ಇದನ್ನೂ ಓದಿ: ಮೇಕೆದಾಟು ಯೋಜನೆಗೂ ತಮಿಳುನಾಡಿಗೂ ಏನು ಸಂಬಂಧ? ಮೂಲ ಪ್ರಶ್ನೆ ಎತ್ತಿದ ವಾಟಾಳ್ ನಾಗರಾಜ್, ಆನೇಕಲ್ ಪೊಲೀಸರ ವಶಕ್ಕೆ
Published On - 3:56 pm, Sat, 29 January 22