ಮೇಕೆದಾಟು ಯೋಜನೆಗೂ ತಮಿಳುನಾಡಿಗೂ ಏನು ಸಂಬಂಧ? ಮೂಲ ಪ್ರಶ್ನೆ ಎತ್ತಿದ ವಾಟಾಳ್ ನಾಗರಾಜ್, ಆನೇಕಲ್ ಪೊಲೀಸರ​​ ವಶಕ್ಕೆ

mekedatu drinking water project: ಆನೇಕಲ್ ಬಳಿ ಮಾತನಾಡಿದ ವಾಟಾಳ್ ನಾಗಾರಾಜ್ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಅಡ್ಡಿ ಪಡಿಸುತ್ತಿರುವುದು ಗೌರವ ಅಲ್ಲ, ಗೌರವ ಅಲ್ಲ. ಮೇಕೆದಾಟಿಗೂ ತಮಿಳುನಾಡಿಗೂ ಸಂಬಂಧ ಏನು? ಇವರಿಗೆ ಮಾನ ಮರ್ಯಾದೆ ಇದ್ದರೆ ಮೇಕೆದಾಟು ಬಗ್ಗೆ ವಿಚಾರ ಕೈ ಬಿಡಬೇಕು. ಮೇಕದಾಟು ಕುಡಿಯುವ ನೀರಿನ ಯೋಜನೆ. ಇದು ಬೇಕು ಅಂತಾನೇ ಜಗಳ ತೆಗೀತಿದಾರೆ ಎಂದರು.

ಮೇಕೆದಾಟು ಯೋಜನೆಗೂ ತಮಿಳುನಾಡಿಗೂ ಏನು ಸಂಬಂಧ? ಮೂಲ ಪ್ರಶ್ನೆ ಎತ್ತಿದ ವಾಟಾಳ್ ನಾಗರಾಜ್, ಆನೇಕಲ್ ಪೊಲೀಸರ​​ ವಶಕ್ಕೆ
ಮೇಕೆದಾಟಿ ಯೋಜನೆಗೂ ತಮಿಳುನಾಡಿಗೂ ಏನು ಸಂಬಂಧ? ಮೂಲ ಪ್ರಶ್ನೆ ಎತ್ತಿದ ವಾಟಾಳ್ ನಾಗಾರಾಜ್, ಆನೇಕಲ್ ಪೊಲೀಸ್​​ ವಶಕ್ಕೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 19, 2022 | 2:00 PM

ಆನೇಕಲ್: ಮೇಕೆದಾಟು ಯೋಜನೆ ಗೆ ಆಗ್ರಹಿಸಿ ಕನ್ನಡದ ಕಟ್ಟಾಳು ವಾಟಾಳ್ ನಾಗರಾಜ್ ಮತ್ತು ಇತರೆ ಕನ್ನಡಪರ ಸಂಘಟನೆಯವರು ಆನೇಕಲ್ ಬಳಿಯ ಗುಮ್ಮಳಪುರ ಬಾರ್ಡರ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದಿರುವ ತಮಿಳುನಾಡು ಮತ್ತು ಕರ್ನಾಟಕ ಪೊಲೀಸರು ಗಡಿ ದಾಟದಂತೆ ವಾಟಾಳ್ ರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಕರ್ನಾಟಕ ಪೊಲೀಸರು ವಾಟಾಳ್ ನಾಗರಾಜ್ ರನ್ನು ವಶಕ್ಕೆ ಪಡೆದಿದ್ದಾರೆ. ಮೇಕೆದಾಟು ಯೋಜನೆಗೆ ಅಡ್ಡಿ ಪಡಿಸುತ್ತಿರುವ ತಮಿಳು ಸರ್ಕಾರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆ ಹಾಕಿ, ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಧಿಕ್ಕಾರ‌ ಕೂಗಿದರು.

ಅದಕ್ಕೂ ಮುನ್ನ ಆನೇಕಲ್ ಬಳಿ ಮಾತನಾಡಿದ ವಾಟಾಳ್ ನಾಗಾರಾಜ್ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಅಡ್ಡಿ ಪಡಿಸುತ್ತಿರುವುದು ಗೌರವ ಅಲ್ಲ, ಗೌರವ ಅಲ್ಲ. ಮೇಕೆದಾಟಿಗೂ ತಮಿಳುನಾಡಿಗೂ ಸಂಬಂಧ ಏನು? ಇವರಿಗೆ ಮಾನ ಮರ್ಯಾದೆ ಇದ್ದರೆ ಮೇಕೆದಾಟು ಬಗ್ಗೆ ವಿಚಾರ ಕೈ ಬಿಡಬೇಕು. ಮೇಕದಾಟು ಕುಡಿಯುವ ನೀರಿನ ಯೋಜನೆ. ಇದು ಬೇಕು ಅಂತಾನೇ ಜಗಳ ತೆಗೀತಿದಾರೆ. ಇವರಿಗೆ ಪ್ರಧಾನಿಯವರೇ ಬೆಂಬಲವಾಗಿದ್ದಾರೆ. ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದರಿ. ಇವರು ಆಗ ಗಮನ ಕೊಡದೇ ಇವತ್ತು ಪಾದಯಾತ್ರೆ ಹೊರಟಿದ್ದಾರೆ ಎಂದು ವಾಟಾಳ್​ ಲೇವಡಿಯಾಡಿದರು.

ಬಿಜೆಪಿಯವರಿಗೆ ತಲೆಯೂ ಇಲ್ಲ, ಬಾಲವೂ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿಯವರ ಬಗ್ಗೆ ಗೌರವ ಇದೆ. ಮುಖ್ಯಮಂತ್ರಿಗಳು ಕೂಡಲೇ ಸರ್ವ ಪಕ್ಷ ಸಭೆ ಕರೆಯಬೇಕು. ಸರ್ವ ಪಕ್ಷ ಸಭೆ ಅಂದ್ರೆ ಬರೀ ಕಾಂಗ್ರೆಸ್, ಜೆಡಿಎಸ್ ಅಲ್ಲ. ಎಲ್ಲಾ ಸಂಘಟನೆಗಳನ್ನು ಕರೆದು ಪ್ರಧಾನಿ ಮೇಲೆ ಒತ್ತಡ ತರಬೇಕು. ಇಲ್ಲದಿದ್ದರೇ ಎಲ್ರೂ ರಾಜಿನಾಮೆ ಕೊಡಬೇಕು. ಬರೀ ‌ಮೇಕೆದಾಟು ಮಾತ್ರವಲ್ಲ, ಅದರ ಜತೆಗೆ ಮಹಾದಾಯಿ ಬಗ್ಗೆಯೂ ತೀವ್ರ ಹೋರಾಟ ಆಗಬೇಕು. ಇದು ಕೇವಲ ಕನಕಪುರದ ಹೋರಾಟ ಅಲ್ಲ. ಅದಕ್ಕೆ ನಾವು ಮುಂದಿನ ವಾರ ಮಾಹಾದಾಯಿ ನದಿ ಇರುವ ಸ್ಥಳ ಕಣಕುಂಬಿಗೆ ಹೋಗ್ತೇವೆ. ಅಲ್ಲಿ ನಾವು ಮುಂದಿನ ವಾರದಿಂದ ಹೋರಾಟ ಪ್ರಾರಂಭ ಮಾಡ್ತೆವೆ ಎಂದು ಎಚ್ಚರಿಸಿದರು.

Also Read: ನೂತನ ಚೆನೈ ಎಕ್ಸ್​​ಪ್ರೆಸ್​​ ಹೆದ್ದಾರಿ ಕಾಮಗಾರಿ: ಕಣ್ಣೀರು ಹಾಕುತ್ತಾ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ರೈತರು, ಯಾಕೆ?

Published On - 1:55 pm, Wed, 19 January 22

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ