Parappana Agrahara Jail: ಜಯಲಲಿಲಾ ಆಪ್ತೆ ಶಶಿಕಲಾಗೆ ನೆರವು ನೀಡಿದ ಪರಪ್ಪನ ಅಗ್ರಹಾರ ಜೈಲು ಪೊಲೀಸರಿಗೆ ಸಂಕಷ್ಟ
VK Sasikala: ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೌಕರ್ಯ ಕಲ್ಪಿಸಲು ಜಯಲಲಿತಾ ಆಪ್ತೆ ಶಶಿಕಲಾರಿಂದ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಜಯಲಲಿಲಾ ಆಪ್ತೆ ಶಶಿಕಲಾ ಮತ್ತು ಜೈಲು ಪೊಲೀಸರಿಗೆ ಸಂಕಷ್ಟ ಎದುರಾಗಿದೆ.
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಐಷಾರಾಮಿ ಸೌಕರ್ಯ ಕಲ್ಪಿಸಲು ಜಯಲಲಿತಾ ಆಪ್ತೆ ಶಶಿಕಲಾರಿಂದ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಜಯಲಲಿಲಾ ಆಪ್ತೆ ಶಶಿಕಲಾ (vk sasikala) ಮತ್ತು ಜೈಲು ಪೊಲೀಸರಿಗೆ ಸಂಕಷ್ಟ ಎದುರಾಗಿದೆ. ಕಂಳಕಿತ ಜೈಲು ಅಧಿಕಾರಿಗಳಾದ ಕೃಷ್ಣ ಕುಮಾರ್, ಡಾ. ಅನಿತಾ. ಆರ್, ಬಿ.ಎಸ್. ಸುರೇಶ್, ಗಜರಾಜ ಮಕನೂರು ಮತ್ತು ವಿ.ಕೆ.ಶಶಿಕಲಾ, ಇಳವರಸಿ ಆರೋಪಿಗಳ ವಿರುದ್ಧ ಜನವರಿ 7 ರಂದು ಚಾರ್ಜ್ ಷೀಟ್ ಸಲ್ಲಿಸಲಾಗಿದೆ. ತತ್ಸಂಬಂಧ ಅಧಿಕಾರಿಗಳ ವಿರುದ್ಧ ಚಾರ್ಜ್ ಷೀಟ್ ಸಲ್ಲಿಸಿಗೆ ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಗೆ ಪೂರ್ವಾನುಮತಿ ನೀಡಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆ. 19 ಅನುಸಾರ ಪೂರ್ವಾನುಮತಿ ದೊರೆತಿದೆ ಎಂದು ಹೈಕೋರ್ಟ್ ಗೆ ಎಸಿಬಿ ಪರ ವಕೀಲ ಪಿ.ಎನ್. ಮನಮೋಹನ್ ತಿಳಿಸಿದ್ದಾರೆ. ತನಿಖೆ ವಿಳಂಬ ಪ್ರಶ್ನಿಸಿ ಕೆ.ಎಸ್.ಗೀತಾ ಪಿಐಎಲ್ ಸಲ್ಲಿಸಿದ್ದರು. ಆದರೆ ಎಸಿಬಿ ಹೇಳಿಕೆ ದಾಖಲಿಸಿ ಕೋರ್ಟ್ ಇಂದು ಪಿಐಎಲ್ ಇತ್ಯರ್ಥ ಪಡಿಸಿದೆ.
ಈ ಹಿಂದೆ, ವಿಕೆ ಶಶಿಕಲಾಗೆ ಜೈಲಿನಲ್ಲಿ ಸೌಕರ್ಯ ಕಲ್ಪಿಸಲು ಲಂಚ ಪಡೆದ ಆರೋಪದ ಮೇಲೆ ತನಿಖಾ ವರದಿ ಸಲ್ಲಿಕೆ ವಿಳಂಬಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಜೈಲಿನಲ್ಲಿ ತಮಿಳುನಾಡು ಸಿಎಂ ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾಗೆ ಸೌಕರ್ಯ ಕಲ್ಪಿಸಲು ಲಂಚ ಆರೋಪಕ್ಕೆ ಸಂಬಂಧಿಸಿ, ಅಧಿಕಾರಿಗಳ ವಿರುದ್ಧ ತನಿಖಾ ವರದಿ ಸಲ್ಲಿಕೆ ವಿಳಂಬ ಮಾಡಿರುವುದಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಅಸಮಾಧಾನ ಹೊರಹಾಕಿತ್ತು. 1 ತಿಂಗಳಲ್ಲಿ ಅಂತಿಮ ವರದಿ ಸಲ್ಲಿಸದಿದ್ದರೆ ಖುದ್ದಾಗಿ ಹಾಜರಾಗುವಂತೆ ಗೃಹ ಕಾರ್ಯದರ್ಶಿಗೆ ಸೂಚನೆ ನೀಡಿತ್ತು.
ತನಿಖೆ ಪೂರ್ಣಗೊಂಡಿದ್ದು ತಾಂತ್ರಿಕ ಕಾರಣಗಳಿಂದ ವಿಳಂಬ ಆಗಿದೆ. ಸಕ್ಷಮ ಪ್ರಾಧಿಕಾರ ಕೆಲ ಅಂಶಗಳ ಬಗ್ಗೆ ಸ್ಪಷ್ಟನೆ ಕೇಳಿದೆ. ಅನುಮತಿ ಸಿಕ್ಕ ಕೂಡಲೇ ಅಂತಿಮ ವರದಿ ಸಲ್ಲಿಕೆ ಮಾಡಲಾಗುತ್ತದೆ ಎಂದು ಹೈಕೋರ್ಟ್‌ಗೆ ಎಸಿಬಿ ವತಿಯಿಂದ ಪ್ರಮಾಣಪತ್ರ ಸಲ್ಲಿಸಲಾಗಿತ್ತು. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾಗೆ ಶಿಕ್ಷೆ ನೀಡಲಾಗಿತ್ತು. ತಮಿಳುನಾಡು ಸಿಎಂ ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾಗೆ ಶಿಕ್ಷೆ ನೀಡಲಾಗಿತ್ತು. ಜೈಲಿನಲ್ಲಿದ್ದಾಗ ಲಂಚ ಪಡೆದು ವಿ.ಕೆ. ಶಶಿಕಲಾಗೆ ಸೌಲಭ್ಯ ಒದಗಿಸಿರುವ ವಿಚಾರಕ್ಕೆ ಸಂಬಂಧಿಸಿ ಅಧಿಕಾರಿಗಳ ವಿರುದ್ಧ ಎಸಿಬಿ ದೂರು ದಾಖಲಿಸಿಕೊಂಡಿತ್ತು. ತನಿಖೆ ವಿಳಂಬ ಪ್ರಶ್ನಿಸಿ ಕೆ.ಎಸ್. ಗೀತಾ ಪಿಐಎಲ್ ಸಲ್ಲಿಸಿದ್ದರು.
ಇದನ್ನೂ ಓದಿ:
ಪ್ರಧಾನಿ ಮೋದಿ ಬಜೆಟ್ ಭಾಷಣ ಕೇಳುತ್ತಲೇ 8000 ಹೆಜ್ಜೆ ಹಾಕಿದ ಮಾಜಿ ಸಚಿವ ಸುರೇಶ್ ಕುಮಾರ್
ಇದನ್ನೂ ಓದಿ: ಜಾತಿ-ಧರ್ಮ ಬಿಟ್ಟು ಕುಟುಂಬಸ್ಥರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದವಳ ದುರಂತ ಅಂತ್ಯ! ಪತಿಯೇ ಕೊಂದು ಕೆರೆಗೆ ಎಸೆದ್ನಾ?
Published On - 1:52 pm, Wed, 2 February 22