ಬೆಂಗಳೂರು: ಬಿ.ಎಸ್. ಯಡಿಯೂರಪ್ಪ(BS Yediyurappa) ಇಂದು ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. 8 ಬಾರಿ ಶಾಸಕರಾಗಿ ಆಯ್ಕೆಯಾದ ಶಿಕಾರಿಪುರ ಕ್ಷೇತ್ರವನ್ನು ಪುತ್ರ ಬಿ.ವೈ. ವಿಜಯೇಂದ್ರನಿಗೆ(BY Vijayendra) ಬಿಟ್ಟುಕೊಟ್ಟಿದ್ದಾರೆ. ನಾನು ಚುನಾವಣೆಯಲ್ಲಿ ನಿಲ್ಲುತ್ತಿಲ್ಲ. ಶಿಕಾರಿಪುರ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ ಕಣಕ್ಕಿಳಿಯುತ್ತಾರೆಂದು ಘೋಷಣೆ ಮಾಡಿದ್ದಾರೆ. ಬಿಎಸ್ವೈ ಈ ಹೇಳಿಕೆ ಕೊಟ್ಟ ನಂತರ ಅನೇಕ ಹೇಳಿಕೆಗಳು ಚರ್ಚೆಗಳು ಜೋರಾಗಿವೆ. ಸದ್ಯ ಈ ಬಗ್ಗೆ ಕಾಂಗ್ರೆಸ್(Congress) ಕೂಡ ಟ್ವೀಟ್ ಮಾಡಿದ್ದು ವ್ಯಾಂಗ್ಯವಾಡಿದೆ.
ವರುಣಾದಿಂದ ಬಿ.ವೈ. ವಿಜಯೇಂದ್ರ ಸ್ಪರ್ಧೆಯನ್ನು ತಡೆಯಲಾಗಿತ್ತು. ಮಸ್ಕಿ, ಹಾನಗಲ್‌ನಲ್ಲಿ ಸ್ಪರ್ಧೆಯ ಕನಸಿಗೂ ಬಿಜೆಪಿ ತಣ್ಣೀರು ಸುರಿದಿತ್ತು. ವಿಧಾನಪರಿಷತ್ ಸ್ಪರ್ಧೆಗೂ ಬ್ರೇಕ್ ಹಾಕಲಾಗಿತ್ತು. ಮಂತ್ರಿಗಿರಿಯನ್ನೂ ವಂಚಿಸಲಾಯ್ತು. ಬಿಜೆಪಿಯ ಕಸರತ್ತುಗಳಿಗೆ ಮಣಿದು ಬಿ.ಎಸ್. ಯಡಿಯೂರಪ್ಪ ಅವರೇ ಪುತ್ರನಿಗೆ ಕ್ಷೇತ್ರ ಬಿಡುವಂತಾಯಿತು! ಕಾಂಗ್ರೆಸ್‌ನತ್ತ ಕುಟುಂಬ ರಾಜಕಾರಣದ ಗೂಬೆ ಕೂರಿಸುವ ಬಿಜೆಪಿಗೆ ಶಿಕಾರಿಪುರದಲ್ಲಿ ಸ್ಪರ್ಧಿಸಲು ಸಾಮಾನ್ಯ ಕಾರ್ಯಕರ್ತರು ಸಿಗಲಿಲ್ಲವೇ? ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ಬಿ.ವೈ. ವಿಜಯೇಂದ್ರ ಅವರು ಸ್ಪರ್ಧಿಸುವುದು ಬಿಜೆಪಿ ಕುಟುಂಬ ರಾಜಕಾರಣಕ್ಕೆ ಹೊಸ ಸೇರ್ಪಡೆ. ದೇಶದುದ್ದಕ್ಕೂ ಕುಟುಂಬ ರಾಜಕಾರಣದ ಬೀಜ ಬಿತ್ತಿದ ಬಿಜೆಪಿ ಇತರ ಪಕ್ಷಗಳತ್ತ ಬೆರಳು ತೋರುವುದು ಪರಮ ಹಾಸ್ಯ! ಅಂತೂ ಇಂತೂ ‘ಸಂತೋಷ ಕೂಟ’ದ ಅಭಿಯಾನ ಕೊನೆಯ ಹಂತಕ್ಕೆ ಬಂದಿದೆ. ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಪುತ್ರನಿಗೆ ಕ್ಷೇತ್ರ ಬಿಟ್ಟುಕೊಡುವ ಮಾತನಾಡುವ ಮೂಲಕ ಅಧಿಕಾರದಿಂದ ಇಳಿಯುವಾಗ ಅವರು ಹಾಕಿದ ಕಣ್ಣೀರಿನ ನೈಜ ಅರ್ಥ ಬಯಲಾಗಿದೆ. ಬಿಎಸ್ವೈ ಅವರನ್ನು ಮೂಲೆಗುಂಪು ಮಾಡುವ ಬಿಜೆಪಿ ಪ್ರಯತ್ನ ಎದುರಿಸಲಾರದೆ ಅಸಹಾಯಕರಾಗಿ ಹಿಂದೆ ಸರಿದಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ವರುಣಾದಿಂದ @BYVijayendra ಸ್ಪರ್ಧೆಯನ್ನು ತಡೆಯಲಾಗಿತ್ತು.
ಮಸ್ಕಿ, ಹಾನಗಲ್‌ನಲ್ಲಿ ಸ್ಪರ್ಧೆಯ ಕನಸಿಗೂ @BJP4Karnataka ತಣ್ಣೀರು ಸುರಿದಿತ್ತು.
ವಿಧಾನಪರಿಷತ್ ಸ್ಪರ್ಧೆಗೂ ಬ್ರೇಕ್ ಹಾಕಲಾಗಿತ್ತು.
ಮಂತ್ರಿಗಿರಿಯನ್ನೂ ವಂಚಿಸಲಾಯ್ತು.ಬಿಜೆಪಿಯ #BSYmuktaBJP ಕಸರತ್ತುಗಳಿಗೆ ಮಣಿದು @BSYBJP ಅವರೇ ಪುತ್ರನಿಗೆ ಕ್ಷೇತ್ರ ಬಿಡುವಂತಾಯಿತು!
— Karnataka Congress (@INCKarnataka) July 22, 2022
Published On - 5:47 pm, Fri, 22 July 22