ಭಯೋತ್ಪಾದಕರು, ಉಗ್ರರಿಗೆ ಸರ್ಟಿಫಿಕೇಟ್ ಕೊಡುವ ಯಾತ್ರೆ: ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆಗೆ ಎನ್. ರವಿಕುಮಾರ್ ವ್ಯಂಗ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 11, 2023 | 4:47 PM

ಕಾಂಗ್ರೆಸ್ ಪಾರ್ಟಿಯ ಬಸ್ ಯಾತ್ರೆ ಆರಂಭವಾಗಿದ್ದು, ಈ ಯಾತ್ರೆ ಸುಳ್ಳು ಯಾತ್ರೆಗೆ ಸಾಕ್ಷಿ. ಭಯೋತ್ಪಾದಕರು, ಉಗ್ರರಿಗೆ ಸರ್ಟಿಫಿಕೇಟ್ ಕೊಡುವ ಯಾತ್ರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.

ಭಯೋತ್ಪಾದಕರು, ಉಗ್ರರಿಗೆ ಸರ್ಟಿಫಿಕೇಟ್ ಕೊಡುವ ಯಾತ್ರೆ: ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆಗೆ ಎನ್. ರವಿಕುಮಾರ್ ವ್ಯಂಗ್ಯ
ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್
Image Credit source: udayavani.com
Follow us on

ಬೆಂಗಳೂರು: ಕಾಂಗ್ರೆಸ್​ ನಾಯಕರ ಪ್ರಜಾಧ್ವನಿ ಯಾತ್ರೆಗೆ (PrajaDhwaniYatra)  ಬುಧವಾರ (ಜ. 11) ಚಾಲನೆ ಸಿಕ್ಕಿದೆ. 21 ಜಿಲ್ಲೆಗಳಲ್ಲಿ ಈ ಪ್ರಜಾಧ್ವನಿ ಯಾತ್ರೆ ಸಂಚಾರ ನಡೆಸಲಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕಮಾರ್​ ಮತ್ತು ಸಿದ್ಧರಾಮಯ್ಯ ಒಟ್ಟಾಗಿ ಬಸ್​ ಯಾತ್ರೆ ನಡೆಸಲಿದ್ದಾರೆ. ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆ ಬಗ್ಗೆ ಸದ್ಯ ಬಿಜೆಪಿ ಕೆಲ ನಾಯಕರು ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮತ್ತು ಛಲವಾದಿ ನಾರಾಯಣಸ್ವಾಮಿ ಹಾಗೂ ಭಾರತಿ ಶೆಟ್ಟಿ ಇಂದು (ಜ. 11)  ಸುದ್ದಿಗೋಷ್ಠಿ ಮಾಡಿದರು. ಎನ್. ರವಿಕುಮಾರ್ ಮಾತನಾಡಿ, ಕಾಂಗ್ರೆಸ್ ಪಾರ್ಟಿಯ ಬಸ್ ಯಾತ್ರೆ ಆರಂಭವಾಗಿದ್ದು, ಈ ಯಾತ್ರೆ ಸುಳ್ಳು ಯಾತ್ರೆಗೆ ಸಾಕ್ಷಿ. ಭಯೋತ್ಪಾದಕರು, ಉಗ್ರರಿಗೆ ಸರ್ಟಿಫಿಕೇಟ್ ಕೊಡುವ ಯಾತ್ರೆ. ಭಯೋತ್ಪಾದಕರನ್ನು, ಉಗ್ರರನ್ನು ರಕ್ಷಣೆ ಮಾಡಲಿಕ್ಕೆ ಹೊರಟಿರುವ ಯಾತ್ರೆ. ಭಯೋತ್ಪಾದನೆಗೆ ಶಕ್ತಿ ಕೊಡುವುದೇ ಈ ಯಾತ್ರೆಯ ಉದ್ದೇಶ ಎಂದು ಕಿಡಿಕಾರಿದ್ದಾರೆ.

ಪರೋಕ್ಷವಾಗಿ ಡಿ.ಕೆ ಶಿವಕುಮಾರ್​​ಗೆ ಟಾಂಗ್: ಎನ್. ರವಿಕುಮಾರ್

ಯಾತ್ರೆಯಲ್ಲಿ ನಮ್ಮ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದಿದ್ದಾರೆ. ಕೆಂಪಯ್ಯ ಮೇಲೆ ನಾವು ಮಾನನಷ್ಟ ಮೊಕದ್ದಮೆ ಹಾಕಿದ್ದೆವು. ಅವರು ಎಲ್ಲಿ ಭ್ರಷ್ಟಾಚಾರ ಸಂಬಂಧ ಸಾಕ್ಷ್ಯ ಕೊಟ್ಟರು ಎಂದು ಪ್ರಶ್ನಿಸಿದರು. ಇವರು 40 ಪರ್ಸೆಂಟ್ ಬಿಜೆಪಿ ಎಂದು ಬ್ರಾಂಡ್‌ ಮಾಡುವ ಸಂಚು ಮಾಡಿದ್ದಾರೆ. ಉಚಿತ ವಿದ್ಯುತ್ ಎಂದು ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್​​ಗೆ ಟಾಂಗ್​ ನೀಡಿದರು.

ಇದನ್ನೂ ಓದಿ: ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ಉಚಿತ ವಿದ್ಯುತ್​, ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ: ಡಿಕೆ ಶಿವಕುಮಾರ್ ಘೋಷಣೆ

ಸಿದ್ದರಾಮಯ್ಯ ಅಲೆಮಾರಿ ಸಿದ್ದರಾಮಯ್ಯ

ನಿಮ್ಮ ಕಾಲದಲ್ಲಿ ರಾಜ್ಯದಲ್ಲಿ ಕರೆಂಟೇ ಇರಲಿಲ್ಲ. ನಿಮ್ಮ ಸರ್ಕಾರ ಇದ್ದಾಗ ಕತ್ತಲಿನ ಸರ್ಕಾರ ಇತ್ತು. ಆದರೆ ನಾವು ಇವಾಗ ಎಸ್ಸಿ ಎಸ್ಟಿಯವರಿಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ ಎಂದರು. ಇನ್ನು ಸಿದ್ದರಾಮಯ್ಯ ಅಲೆಮಾರಿ ಸಿದ್ದರಾಮಯ್ಯ. ಚಾಮುಂಡೇಶ್ವರಿಯಲ್ಲಿ ಸೋತರು, ಬಾದಾಮಿಯಲ್ಲಿ ಕಡಿಮೆ ಅಂತರದಿಂದ ಗೆದ್ದರು. ಈಗ ಅಲ್ಲಿ ಸೋಲುತ್ತೇನೆ ಅಂತಾ ಕೋಲಾರಕ್ಕೆ ಹೋಗಿದ್ದಾರೆ. ಶ್ರೀನಿವಾಸ್ ಗೌಡ ಅವರು ಲಾಭ ಇಲ್ಲದೇ ಕ್ಷೇತ್ರ ತ್ಯಾಗ ಮಾಡಿದ್ದಾರಾ? ಸೀಟ್ ಬಿಟ್ಟು ಕೊಡುವ ಬಗ್ಗೆ ನಾನು ಆಡಿಯೋ ಬಿಡುಗಡೆ ಮಾಡುತ್ತಿದ್ದೇನೆ. ಆ ಆಡಿಯೋ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದರು.

ಇದನ್ನೂ ಓದಿ: Assembly Poll Preparations: ಬೆಳಗಾವಿಯಿಂದ ಪವಿತ್ರ ಪಂಪಾ ಸರೋವರ ಜಲದೊಂದಿಗೆ ‘ಪ್ರಜಾಧ್ವನಿ’ ಯಾತ್ರೆ ಅರಂಭಿಸಿದ ಕಾಂಗ್ರೆಸ್

ಶಾಸಕ ಯತ್ನಾಳ್​ಗೆ ನೋಟಿಸ್​ 

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೋಟಿ ಕೋಟಿ ಹೇಳಿಕೆಗೆ ಪಕ್ಷದಿಂದ ಕ್ರಮ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಯತ್ನಾಳ್ ಅವರಿಗೆ ನೋಟಿಸ್ ಕೊಟ್ಟಿದ್ದೇವೆ. ಇದರ ಬಗ್ಗೆ ಕೇಂದ್ರದ ನಾಯಕರ ಗಮನಕ್ಕೂ ಬಂದಿದೆ. ಬರುವಂತಹ ದಿನಗಳಲ್ಲಿ ಇದಕ್ಕೆ ಉತ್ತರ ಸಿಗುತ್ತದೆ. ಕೇಂದ್ರದ ನಾಯಕರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ. ರಾಜ್ಯಾಧ್ಯಕ್ಷರು ಕೇಂದ್ರದ ನಾಯಕರು ಗಮನಕ್ಕೆ ತಂದಿದ್ದಾರೆ. ಕೇಂದ್ರದ ನಾಯಕರು ಆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಎನ್. ರವಿಕುಮಾರ್ ತಿಳಿಸಿದರು.

ಇದು ಮ್ಯಾಚ್ ಫಿಕ್ಸಿಂಗ್​: ಛಲವಾದಿ ನಾರಾಯಣಸ್ವಾಮಿ

ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ದಲಿತರ ಹೆಸರನ್ನು ಹೇಳಿಕೊಂಡೇ ದಲಿತರನ್ನು ತುಳಿದರು. ಅವರು ಅಲೆಮಾರಿ ತರಹ ಓಡಾಡಿಕೊಂಡಿದ್ದಾರೆ. ಈಗ ಕೋಲಾರಕ್ಕೆ ಹೋಗಿದ್ದಾರೆ. ಇದು ಮ್ಯಾಚ್ ಫಿಕ್ಸಿಂಗ್. ಸೀಟು ಸೇಲಾಗಿದೆ. ಅದಕ್ಕೆ ಇವರು ಹೋಗಿದ್ದಾರೆ. ಎಂಎಲ್‌ಸಿ ಮಾಡಿ, ಮಂತ್ರಿ ಮಾಡುವ ಬಗ್ಗೆ ನಾನು ಮಾತನಾಡಲ್ಲ. ಮುಂದೆ ಇನ್ನಷ್ಟು ವಿಚಾರ ಹೊರಗೆ ಬರಲಿದೆ. ಇವರ ಮಾತಿನಲ್ಲಿ ಹುರುಳಿಲ್ಲ. ಜನರು ಇವರ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:45 pm, Wed, 11 January 23