AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಸ್ಯಾಂಟ್ರೋ ರವಿ ವಿರುದ್ಧ ಉನ್ನತ ಮಟ್ಟದ ತನಿಕೆ ನಡೆಸುವಂತೆ ಕಾಂಗ್ರೆಸ್​ನಿಂದ ರಾಜ್ಯಪಾಲರಿಗೆ ದೂರು

ರಾಜ್ಯ ಕಾಂಗ್ರೆಸ್​ ನಾಯಕರು ಸ್ಯಾಂಟ್ರೋ ರವಿಯ ಅಕ್ರಮದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ ಅವರಿಗೆ ದೂರು ನೀಡಿದ್ದಾರೆ.

Bengaluru: ಸ್ಯಾಂಟ್ರೋ ರವಿ ವಿರುದ್ಧ ಉನ್ನತ ಮಟ್ಟದ ತನಿಕೆ ನಡೆಸುವಂತೆ ಕಾಂಗ್ರೆಸ್​ನಿಂದ ರಾಜ್ಯಪಾಲರಿಗೆ ದೂರು
ಸ್ಯಾಂಟ್ರೋ ರವಿ, ಕಾಂಗ್ರೆಸ್​
TV9 Web
| Updated By: ವಿವೇಕ ಬಿರಾದಾರ|

Updated on:Jan 11, 2023 | 6:36 PM

Share

ಬೆಂಗಳೂರು: ವಂಚನೆ, ಅತ್ಯಾಚಾರ ಹಲವು ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಗೆ ಮತ್ತು ರಾಜ್ಯ ಸರ್ಕಾರಕ್ಕೆ ಸ್ಯಾಂಟ್ರೋ ರವಿ (Santro Ravi) ತೆಲೆನೋವಾಗಿದ್ದಾನೆ. ಪ್ರತಿಪಕ್ಷಗಳು ಸ್ಯಾಂಟ್ರೋ ರವಿ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿವೆ. ಈಗ ರಾಜ್ಯ ಕಾಂಗ್ರೆಸ್​ ನಾಯಕರು ಸ್ಯಾಂಟ್ರೋ ರವಿಯ ಅಕ್ರಮದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ ಅವರಿಗೆ ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ದೂರು ನೀಡಿದ್ದಾರೆ.

ಸ್ಯಾಂಟ್ರೋ ರವಿ ವಿರುದ್ಧ ಭ್ರಷ್ಟಾಚಾರ ಹಾಗೂ ಅನೈತಿಕ ವ್ಯವಹಾರ ಪ್ರಕರಣಗಳಿವೆ. ಪೊಲೀಸ್​ ಅಧಿಕಾರಿಗಳ ವರ್ಗಾವಣೆ ಮತ್ತು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದನು. ಹಾಗೇ ಸರ್ಕಾರಿ ಬಂಗಲೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದನು. ಹೀಗಾಗಿ ಸ್ಯಾಂಟ್ರೋ ರವಿ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಸುಳ್ಳು ಕೇಸ್​​: ಪ್ರಕರಣ ಸಿಸಿಬಿಗೆ ವರ್ಗಾಯಿಸಿ ಕಮಿಷನರ್​ ಪ್ರತಾಪ್ ರೆಡ್ಡಿ​​ ಆದೇಶ

ಈಗಾಗಲೇ ತನಿಖೆ ನಡೆಯುತ್ತಿದೆ, ಬಂಧನಕ್ಕೆ ಹುಡುಕಾಟದಲ್ಲಿದ್ದಾರೆ

ಹಾಸನ: ನಮ್ಮ ಸರ್ಕಾರ ಯಾರನ್ನೂ ರಕ್ಷಣೆ ಮಾಡುವ ಕೆಲಸ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಸ್ಯಾಂಟ್ರೋ ರವಿ ಜೊತೆ ಬಿಜೆಪಿ ಸಚಿವರ ನಂಟಿದೆ ಎಂಬ ಆರೋಪ ವಿಚಾರವಾಗಿ ಹಾಸನದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈಗಾಗಲೇ ತನಿಖೆ ನಡೆಯುತ್ತಿದೆ, ಬಂಧನಕ್ಕೆ ಹುಡುಕಾಟದಲ್ಲಿದ್ದಾರೆ. ಸ್ಯಾಂಟ್ರೋ ರವಿ ಬೆಳೆಸಿದ್ಯಾರು, ಮೈಸೂರಲ್ಲಿ ಯಾರು ಆಶ್ರಯ ಕೊಟ್ರು? ಬೆಂಗಳೂರಿಗೆ ಬಂದಾಗ ಸ್ಯಾಂಟ್ರೋ ರವಿ ಬೆಂಬಲಕ್ಕೆ ಯಾರು ನಿಂತಿದ್ರು? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:  ಮುರುಘಾ ಶ್ರೀ ಪರ ನಿಂತಿದ್ದ ಸ್ಯಾಂಟ್ರೋ ರವಿ ಒಡನಾಡಿ ಸ್ಟ್ಯಾನ್ಲಿಗೆ ಏನು ಮಾಡಿದ್ಧ ಗೊತ್ತಾ?

ಏನೇನು ವ್ಯವಹಾರ ಮಾಡಿದ್ದಾನೆ ಎಲ್ಲವೂ ತನಿಖೆ ನಂತರ ಗೊತ್ತಾಗುತ್ತೆ. ತನಿಖೆ ಹಂತದಲ್ಲಿಯೇ ಯಾರ ಬಗ್ಗೆಯೂ ಅನುಮಾನ ಪಡುವುದಿಲ್ಲ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಕೂಡ ಹೊರಗಡೆ ಬರಲಿ. ಯಾರನ್ನೂ ಸಮರ್ಥನೆ ಮಾಡಿಕೊಳ್ಳುವ ಪ್ರಶ್ನೆಯಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Wed, 11 January 23