ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಕೊರೊನಾ ಕಂಟಕ; ಕೊವಿಡ್ ಮಾರ್ಗಸೂಚಿಗಳಿಂದ ಮಾನಸಿಕ ಒತ್ತಡ ಹೆಚ್ಚಳ

ಕಳೆದ ಎರಡು ವರ್ಷಗಳಿಂದ ಮನೆಯಲ್ಲಿ ಆನ್​ಲೈನ್​ ತರಗತಿ ಮೊರೆ ಹೋಗಿದ್ದ ಮಕಳು, ಕಳೆದ ಒಂದು ತಿಂಗಳಿನಿಂದ ಹಂತ ಹಂತವಾಗಿ ಶಾಲೆಗೆ ಬರುತ್ತಿದ್ದಾರೆ. ಆದರೆ ಶಾಲೆಗೆ ಬಂದರು ಮಾನಸಿಕ ಒತ್ತಡ, ಆತಂಕ, ಕಲಿಕಾ ನಿರಾಸಕ್ತಿಯಂತಹ ಸಮಸ್ಯೆ ಎದುರಾಗುತ್ತಿದೆ.

ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಕೊರೊನಾ ಕಂಟಕ; ಕೊವಿಡ್ ಮಾರ್ಗಸೂಚಿಗಳಿಂದ ಮಾನಸಿಕ ಒತ್ತಡ ಹೆಚ್ಚಳ
ಪ್ರಾತಿನಿಧಿಕ ಚಿತ್ರ
Edited By:

Updated on: Nov 15, 2021 | 7:46 AM

ಬೆಂಗಳೂರು: ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲಾ- ಕಾಲೇಜುಗಳು ಆರಂಭಗೊಂಡಿದೆ. ಆದರೆ ಸೋಂಕು ಇಳಿಕೆ ಬಳಿಕವೂ ಮಕ್ಕಳ ಕಲಿಕೆ ಮೇಲೆ ಕೊರೊನಾ ಕರಿ ನೆರಳು ಚೆಲ್ಲಿದೆ. ಇದಕ್ಕೆ ಕಾರಣ ಶಾಲೆ (School) ಪೂರ್ಣ ಪ್ರಮಾಣದಲ್ಲಿ ಒಮ್ಮೆಲೆಗೆ ಆರಂಭವಾಗಿದ್ದು, ಈಗ ಮಕ್ಕಳಲ್ಲಿ(Children) ಮಾನಸಿಕ ಒತ್ತಡ ಹೆಚ್ಚಾಗಿರುವ ಆತಂಕ ಶುರುವಾಗಿದೆ. ಅದರಲ್ಲೂ ಕೊರೊನಾ ಮಾರ್ಗಸೂಚಿಗಳೇ ( corona guidelines) ಮಕ್ಕಳ ಕಲಿಕೆಗೆ ಕಿರಿಕಿರಿ ಉಂಟು ಮಾಡುತ್ತಿದೆ. ಹೀಗಾಗಿ ಶಾಲೆಯಿಂದ ಮಕ್ಕಳು ದೂರ ಉಳಿಯುತ್ತಿರುವುದು ಬೆಳಕಿಗೆ ಬಂದಿದೆ.

ಕಳೆದ ಎರಡು ವರ್ಷಗಳಿಂದ ಮನೆಯಲ್ಲಿ ಆನ್​ಲೈನ್​ ತರಗತಿ ಮೊರೆ ಹೋಗಿದ್ದ ಮಕಳು, ಕಳೆದ ಒಂದು ತಿಂಗಳಿನಿಂದ ಹಂತ ಹಂತವಾಗಿ ಶಾಲೆಗೆ ಬರುತ್ತಿದ್ದಾರೆ. ಆದರೆ ಶಾಲೆಗೆ ಬಂದರು ಮಾನಸಿಕ ಒತ್ತಡ, ಆತಂಕ, ಕಲಿಕಾ ನಿರಾಸಕ್ತಿಯಂತಹ ಸಮಸ್ಯೆ ಎದುರಾಗುತ್ತಿದೆ. ಇನ್ನು ಮಕ್ಕಳಲ್ಲಿ ಕಲಿಕಾ ಏಕಾಗ್ರತೆಯೂ ಕುಂಠಿತವಾಗಿದೆ.

ಕೊವಿಡ್ ಮಾರ್ಗಸೂಚಿಗಳಿಂದ ಮಕ್ಕಳಲ್ಲಿ ಮಾನಸಿಕ ಸಮಸ್ಯೆ
ಮನೆ, ಶಾಲೆಯಲ್ಲಿ ಕೊರೊನಾ ಮಾರ್ಗಸೂಚಿಗಳ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯದ ಬಗ್ಗೆ ಎಚ್ಚರಿಸಲಾಗುತ್ತಿದೆ. ಉಪಾಹಾರವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಬಾರದು. ಗುಂಪಾಗಿ ಆಟ ಆಡದಂತೆ ನಿತ್ಯ ಮಕ್ಕಳಿಗೆ ಎಚ್ಚರಿಸುತ್ತಿದ್ದಾರೆ. ಇದರಿಂದಾಗಿ ಮಾನಸಿಕವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಕಡ್ಡಾಯ ಕೊರೊನಾ ನಿಯಮಗಳು ಕಲಿಕಾ ಖಿನ್ನತೆಗೆ ಕಾರಣವಾಗುತ್ತಿದೆ. ಇದರಿಂದ ಶಿಕ್ಷಕರು, ಸ್ನೇಹಿತರ ಜತೆಯಿರಲು ವಿದ್ಯಾರ್ಥಿಗಳು ಇಷ್ಟಪಡುತ್ತಿಲ್ಲ. ಹೀಗಾಗಿ ಶಾಲೆಯಲ್ಲಿ ಮಕ್ಕಳು ಮಂಕಾಗಿರುತ್ತಿದ್ದಾರೆ. ಆಸಕ್ತಿ ಇಲ್ಲದೆ ಶಾಲೆಯಿಂದ ದೂರ ಉಳಿಯುತ್ತಿದ್ದಾರೆ. ಇನ್ನು ಮಕ್ಕಳ ಕಲಿಕಾ ಆಸಕ್ತಿ ಕುಂಠಿತಕ್ಕೆ ಪೋಷಕರಲ್ಲಿ ಕೂಡ ಆತಂಕ ಹೆಚ್ಚಾಗಿದೆ. ಹೀಗಾಗಿಯೇ ಪೋಷಕರು ವೈದ್ಯರ ಮೊರೆ ಹೋಗುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಇಷ್ಟು ದಿನ ಆನ್‌ಲೈನ್ ಕ್ಲಾಸ್ ಇತ್ತು. ಈಗ ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಕೊವಿಡ್ ಮಾರ್ಗಸೂಚಿಯಿಂದ ಸ್ನೇಹಿತರ ಜತೆ ಬೆರೆಯಲಾಗುತ್ತಿಲ್ಲ. ಹೀಗಾಗಿ ಮಕ್ಕಳು ಕಲಿಕೆಯಲ್ಲಿ ನಿರಾಸಕ್ತಿ ತೊರುತ್ತಿದ್ದಾರೆ. ಅತಿಯಾದ ಒತ್ತಡ, ಕಿರಿಕಿರಿಯಿಂದ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಿದ್ದಾರೆ ಎಂದು ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಹಾಗೂ ಮನೋವೈದ್ಯರಾದ ಡಾ.ಪಿ.ರಜಿನಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:
Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 236 ಜನರಿಗೆ ಕೊರೊನಾ ದೃಢ; 2 ಮಂದಿ ಸಾವು

ಪ್ರತಿದಿನ 31 ಮಕ್ಕಳ ಆತ್ಮಹತ್ಯೆ: ಮಕ್ಕಳ ಮೇಲೇಕೆ ಇಷ್ಟು ಮಾನಸಿಕ ಒತ್ತಡ? ಎನ್​ಸಿಆರ್​ಬಿ ವರದಿಯ ವಿಶ್ಲೇಷಣೆ ಇಲ್ಲಿದೆ

Published On - 7:37 am, Mon, 15 November 21