ಶ್ರೀಕಿ, ರಾಬಿನ್ಗೆ ವಿದೇಶಿ ಹ್ಯಾಕರ್ಗಳ ಜೊತೆ ನಂಟಿನ ಶಂಕೆ!
2019ರಲ್ಲಿ ಹ್ಯಾಕರ್ ಸಹೋದರರನ್ನು ಇಸ್ರೇಲ್ ಪೊಲೀಸರು ಬಂಧಿಸಿದ್ದರು. ಬಿಟ್ ಫಿನಿಕ್ಸ್ ಹ್ಯಾಕಿಂಗ್ ಭಾಗಿದಾರನೆಂದು ತಿಳಿದಿದ್ದ ಶ್ರೀಕಿ, 2,000 ಬಿಟ್ ಕಾಯಿನ್ ದೋಚಿದ್ದಾಗಿ ಹೇಳಿದ್ದ. 2020ರಲ್ಲಿ ಆ ಬಗ್ಗೆ ಹೇಳಿಕೊಂಡಿದ್ದ.
ಬೆಂಗಳೂರು: ಶ್ರೀಕಿ ಮತ್ತು ರಾಬಿನ್ಗೆ ಇಸ್ರೇಲ್ನ ಇಬ್ಬರು ಸಹೋದರರ ಜೊತೆ ನಂಟಿರುವ ಅನುಮಾನ ವ್ಯಕ್ತವಾಗಿದೆ. ಎಲಿ ಮತ್ತು ಅಸಾಫ್ ಎಂಬುವವರು 2016ರಲ್ಲಿ ದೊಡ್ಡ ಮೊತ್ತದ ಬಿಟ್ ಕಾಯಿನ್ನ ಕಳವು ಮಾಡಿದ್ದರು. ಇಬ್ಬರು ಸುಮಾರು 1 ಲಕ್ಷ 20 ಸಾವಿರ ಬಿಟ್ ಕಾಯಿನ್ ಕದ್ದಿದ್ದರು. ಕದ್ದ ಬಿಟ್ ಕಾಯಿನ್ ಮೌಲ್ಯ 56 ಸಾವಿರ ಕೋಟಿ ರೂಪಾಯಿ. ಈ ಹ್ಯಾಕರ್ಸ್ ಬ್ರದರ್ಸ್ ಕ್ರಿಪ್ಟೋ ಕರೆನ್ಸಿ ಫೋರಮ್, ರೆಡ್ಡಿಟ್, ಟೆಲಿಗ್ರಾಂ ಲಿಂಕ್ಗಳನ್ನು ಪೋಸ್ಟ್ ಮಾಡುತ್ತಿದ್ದರು. ಇಂತವರ ಜೊತೆ ಶ್ರೀಕಿ, ರಾಬಿನ್ ನಂಟಿದೆ ಎಂಬ ಶಂಕೆ ಮೂಡಿದೆ.
2019ರಲ್ಲಿ ಹ್ಯಾಕರ್ ಸಹೋದರರನ್ನು ಇಸ್ರೇಲ್ ಪೊಲೀಸರು ಬಂಧಿಸಿದ್ದರು. ಬಿಟ್ ಫಿನಿಕ್ಸ್ ಹ್ಯಾಕಿಂಗ್ ಭಾಗಿದಾರನೆಂದು ತಿಳಿದಿದ್ದ ಶ್ರೀಕಿ, 2,000 ಬಿಟ್ ಕಾಯಿನ್ ದೋಚಿದ್ದಾಗಿ ಹೇಳಿದ್ದ. 2020ರಲ್ಲಿ ಆ ಬಗ್ಗೆ ಹೇಳಿಕೊಂಡಿದ್ದ. ಆದರೆ ಶ್ರೀಕಿ ಹೇಳಿರುವುದಕ್ಕೆ ಯಾವ ಪುರಾವೆ ಸಿಕ್ಕಿರಲಿಲ್ಲ. ಈ ಬಗ್ಗೆ ಇಸ್ರೇಲ್ ಪೊಲೀಸರು ಭಾರತವನ್ನ ಸಂಪರ್ಕಿಸಿಲ್ಲ. 2019ರಲ್ಲೇ ಇಸ್ರೇಲ್ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು.
ಬಿಟ್ ಕಾಯಿನ್ ನಗದು ರೂಪಕ್ಕೆ ಪರಿವರ್ತಿಸುವುದು ಕಷ್ಟ. ದೊಡ್ಡ ಮಟ್ಟದ ಬಿಟ್ ಕಾಯಿನ್ ಕದ್ದರೆ ಅಕೌಂಟ್ ಫ್ರೀಜ್ ಆಗುತ್ತದೆ. ಶ್ರೀಕಿಯಿಂದ CONIEAL ಈಥೇರಿಯಂ ಕಾಯಿನ್ ಹ್ಯಾಕ್ ಆಗಿದೆ. ರಾಬಿನ್ ಖಾತೆಗೆ 450 ಈಥೇರಿಯಂ ಕಾಯಿನ್ ಮತ್ತು 60 ಸಾವಿರ ಬೆಲೆಯ US ಟಿಡಿ ಟೋಕನ್ ಕಳುಹಿಸಿದ್ದ. ಇದಾದ ಕೆಲವೇ ಕ್ಷಣದಲ್ಲಿ ಅಕೌಂಟ್ ಬ್ಲಾಕ್ ಆಗಿತ್ತು. BINANCE.COM ಕಂಪನಿ ಅಕೌಂಟ್ನ ಬ್ಲಾಕ್ ಮಾಡಿತ್ತು. ಬಳಿಕ ಕೆವೈಸಿ ನೀಡಿ ಖಾತೆ ರೀ ಓಪನ್ ಮಾಡಿಸಿಕೊಂಡಿದ್ದ.
ಇದಾದ ನಂತರ ಚೀನಾ ಮೂಲದ ವ್ಯಕ್ತಿಯಿಂದ ಇ-ಮೇಲ್ ಒಂದು ಬಂದಿತ್ತು. ತನ್ನ ಖಾತೆಯನ್ನು ಹ್ಯಾಕ್ ಮಾಡಿ ಹಣವನ್ನು ಎಗರಿಸಿದ್ದೀರಿ. ನಿಮ್ಮ ಕುಟುಂಬವನ್ನು ಸುಮ್ಮನೆ ಬಿಡಲ್ಲವೆಂದು ಬೆದರಿಸಿದ್ದ. ಈ ವೇಳೆ ನಾನು ಹ್ಯಾಕ್ ಮಾಡಿಲ್ಲವೆಂದು ರಾಬಿನ್ ಹೇಳಿದ್ದ. ನಂತರ ಚೀನಾ ಮೂಲದ ವ್ಯಕ್ತಿಗೆ ಶೇಕಡಾ 75ರಷ್ಟು ಹಣ, ರಾಬಿನ್ಗೆ ಶೇ.25ರಷ್ಟು ತೆಗೆದುಕೊಳ್ಳುವ ಡೀಲ್ ಆಗಿತ್ತು. ನಂತರ ರಾಬಿನ್ ಖಾತೆಯಲ್ಲಿ 7 ಬಿಟ್ ಕಾಯಿನ್ ಇರುತ್ತೆ. ತಲಾ 3.5 ಬಿಟ್ ಕಾಯಿನ್ ಶ್ರೀಕಿ, ರಾಬಿನ್ ಹಂಚಿಕೊಂಡಿದ್ದರು. ಆದರೆ ಶ್ರೀಕಿ ಕದ್ದಿರುವ ಬಿಟ್ ಕಾಯಿನ್ ಎಲ್ಲಿ ಹೋಯಿತೆಂಬ ಪ್ರಶ್ನೆ ಕಾಡಿದೆ.
ಇದನ್ನೂ ಓದಿ
ಡ್ರಗ್ಸ್ ತನಿಖೆ ದಾರಿ ತಪ್ಪಿಸಲೆಂದೇ ಬಿಟ್ ಕಾಯಿನ್ ಮುನ್ನೆಲೆಗೆ ತಂದ ಕಾಂಗ್ರೆಸ್: ಬಿಜೆಪಿ ನಾಯಕ ಗಂಭೀರ ಆರೋಪ
ಬಿಟ್ಕಾಯಿನ್ ಪ್ರಕರಣ 2018ರಿಂದಲೂ ಇದೆ ಅಂತಾರೆ, ಯಾಕೆ ಕ್ರಮ ಕೈಗೊಳ್ಳಲಿಲ್ಲ ಅಂತ ಸುರ್ಜೇವಾಲ ಕೇಳಲಿ; ಸಿಎಂ ಬೊಮ್ಮಾಯಿ
Published On - 9:15 am, Mon, 15 November 21