ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆತಂಕ ಮನೆಮಾಡಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 8,906 ಜನರಿಗೆ ಕೊರೊನಾ ಸೋಂಕು ತಗುಲಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕೂಡಾ ಹೆಚ್ಚಾಗುತ್ತಿದ್ದು, ಬೆಂಗಳೂರು ನಗರದಲ್ಲಿ ನಿನ್ನೆ ಶೇ.10.21 ರಷ್ಟು ದಾಖಲಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರದಲ್ಲಿ ಶೇ.9.36 ಕೊರೊನಾ ಪಾಸಿಟಿವಿಟಿ ರೇಟ್ ಇದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇಂದು 9,020 ಕೊವಿಡ್ ಕೇಸ್ ಪತ್ತೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 7,113 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,90,299 ಕ್ಕೆ ಏರಿಕೆಯಾಗಿದೆ. 12,90,299 ಸೋಂಕಿತರ ಪೈಕಿ 12,41,721 ಜನರು ಗುಣಮುಖರಾಗಿದ್ದಾರೆ.
ಬೇರೆ ಜಿಲ್ಲೆಗಳ ಪಾಸಿಟಿವಿಟಿ ರೇಟ್ ಎಷ್ಟಿದೆ?
ಶಿವಮೊಗ್ಗದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.2.19 ರಷ್ಟಿದೆ. ಮಂಡ್ಯದಲ್ಲಿ 10.41, ಮೈಸೂರು 6.83, ಕಲಬುರಗಿ, 3.55, ಹಾಸನ 4.99, ಧಾರವಾಡ 0.7, ಉಡುಪಿ 1.88, ಕೋಲಾರ 5.72, ತುಮಕೂರು 8.2, ದಕ್ಷಿಣ ಕನ್ನಡ 1.15, ಬಳ್ಳಾರಿ 9, ಚಿಕ್ಕಮಗಳೂರಿನಲ್ಲಿ ಶೇ.3.11 ರಷ್ಟಿದೆ. ಇನ್ನು ವಿಜಯಪುರದಲ್ಲಿ 0, ಉತ್ತರ ಕನ್ನಡ 2.46, ಚಿಕ್ಕಬಳ್ಳಾಪುರ 3.43, ಬೆಳಗಾವಿ 5.11, ಚಾಮರಾಜನಗರ 2, ರಾಮನಗರ ಶೇ.12.32 ರಷ್ಟಿದೆ.
ಕೊಪ್ಪಳದಲ್ಲಿ 0.71 ರಷ್ಟಿದ್ದರೆ, ದಾವಣಗೆರೆ 9.77, ಚಿತ್ರದುರ್ಗ 6.46, ಕೊಡಗು 0.27, ಯಾದಗಿರಿ 4.58, ಬೀದರ್ 1.14, ಬಾಗಲಕೋಟೆ 0.49, ಗದಗ 1.2, ರಾಯಚೂರು 1.8, ಮತ್ತು ಹಾವೇರಿಯಲ್ಲಿ ಶೇ. 0.78 ರಷ್ಟು ಕೊರೊನಾ ಪಾಸಿಟಿವಿಟಿ ರೇಟ್ ದಾಖಲಾಗಿದೆ.
ಇದನ್ನೂ ಓದಿ
ಶಶಿಕಲಾ ಜೊಲ್ಲೆ ದಂಪತಿಯಿಂದ ಸೇಡಿನ ರಾಜಕಾರಣ ಆರೋಪ; ಸದಲಗಾ ಪೊಲೀಸ್ ಠಾಣೆ ಮುಂದೆ ನೂರಾರು ಜನರಿಂದ ಧರಣಿ
Covid 19: ದೇಶದಲ್ಲಿ ಏರುತ್ತಿದೆ ಕೊರೊನಾ; ಒಂದೇ ದಿನ 1,59,632 ಪ್ರಕರಣ ಪತ್ತೆ, 327 ಜನರ ಸಾವು
Published On - 12:12 pm, Sun, 9 January 22