ಶಶಿಕಲಾ ಜೊಲ್ಲೆ ದಂಪತಿಯಿಂದ ಸೇಡಿನ ರಾಜಕಾರಣ ಆರೋಪ; ಸದಲಗಾ ಪೊಲೀಸ್ ಠಾಣೆ ಮುಂದೆ ನೂರಾರು ಜನರಿಂದ ಧರಣಿ

ಶಶಿಕಲಾ ಜೊಲ್ಲೆ ದಂಪತಿಯಿಂದ ಸೇಡಿನ ರಾಜಕಾರಣ ಆರೋಪ; ಸದಲಗಾ ಪೊಲೀಸ್ ಠಾಣೆ ಮುಂದೆ ನೂರಾರು ಜನರಿಂದ ಧರಣಿ
ಸದಲಗಾ ಠಾಣೆ ಮುಂಭಾಗದಲ್ಲಿ ಧರಣಿ

ಸಚಿವೆ ಶಶಿಕಲಾ ಜೊಲ್ಲೆ ಒತ್ತಡಕ್ಕೆ ಮಣಿದು ಪೊಲೀಸರು ಕೇಸ್ ದಾಖಲಿಸಿದ್ದಾರೆ. ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಇಂದು (ಜನವರಿ 9) ಬೆಳಗ್ಗೆ ಐದು ಗಂಟೆಯಿಂದ ಪೊಲೀಸ್​ ಠಾಣೆ ಮುಂದೆ ನೂರಕ್ಕೂ ಹೆಚ್ಚು ಜನರು ಧರಣಿ ನಡೆಸುತ್ತಿದ್ದಾರೆ.

TV9kannada Web Team

| Edited By: preethi shettigar

Jan 09, 2022 | 11:53 AM

ಬೆಳಗಾವಿ: ಶಶಿಕಲಾ ಜೊಲ್ಲೆ ದಂಪತಿಯಿಂದ ಸೇಡಿನ ರಾಜಕಾರಣ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರರ ಗೆಲುವು ವಿಚಾರಕ್ಕೆ ಸಂಬಂಧಪಟ್ಟಂತೆ ಸೇಡಿನ ರಾಜಕಾರಣ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಪರ ಹಣ ಹಂಚಿರುವುದಾಗಿ ಶಶಿಕಲಾ ಜೊಲ್ಲೆ (shashikala jolle) ಆಪ್ತರು ದೂರು ದಾಖಲಿಸಿದ್ದು, ಈ ಪ್ರಕರಣಕ್ಕೆ ಸಂಬಂಧ ಇಲ್ಲದೇ ಇರುವವರನ್ನು ಪೊಲೀಸರು (Karnataka police) ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಬೋರಗಾಂವ್ ಪಟ್ಟಣದ ಜನರು ಸದಲಗಾ ಠಾಣೆ ಮುಂಭಾಗದಲ್ಲಿ ಪೊಲೀಸರ ವಿರುದ್ಧ ಧರಣಿ ನಡೆಸಿದ್ದಾರೆ.

ಚುನಾವಣೆಯಲ್ಲಿ ಬೆಂಬಲ ನೀಡದವರ ಮೇಲೆ ಸೇಡಿನ ರಾಜಕಾರಣ ನಡೆಸಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಹಣ ಹಂಚಿರುವುದಾಗಿ ದೂರು ನೀಡಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಒತ್ತಡಕ್ಕೆ ಮಣಿದು ಪೊಲೀಸರು ಕೇಸ್ ದಾಖಲಿಸಿದ್ದಾರೆ. ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಇಂದು (ಜನವರಿ 9) ಬೆಳಗ್ಗೆ ಐದು ಗಂಟೆಯಿಂದ ಪೊಲೀಸ್​ ಠಾಣೆ ಮುಂದೆ ನೂರಕ್ಕೂ ಹೆಚ್ಚು ಜನರು ಧರಣಿ ನಡೆಸುತ್ತಿದ್ದಾರೆ.

ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಆಪ್ತ ಉತ್ತಮ್ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ರಾತ್ರೋರಾತ್ರಿ ಐದು ಜನರನ್ನ ಬಂಧಿಸಿ ಕರೆದುಕೊಂಡು ಬಂದ ಪೊಲೀಸರ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಸ್ಥಳಕ್ಕೆ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಭೇಟಿ ನೀಡಿದ್ದು, ಕಾನೂನು ಹೋರಾಟ ಮಾಡಿ ಎಂದು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದರೂ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬಾರದೆ ನಿರ್ಲಕ್ಷ್ಯ ತೋರಿದ್ದಾರೆ.

ಇದನ್ನೂ ಓದಿ: Assembly Elections 2022: ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ: ಪಂಚರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ ಹೆಚ್ಚಳ; ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಓರ್ವ ಅಭ್ಯರ್ಥಿ ಎಷ್ಟು ಖರ್ಚು ಮಾಡಬಹುದು?

Follow us on

Related Stories

Most Read Stories

Click on your DTH Provider to Add TV9 Kannada