ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿ ಹೆಚ್ಚಳ; ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಓರ್ವ ಅಭ್ಯರ್ಥಿ ಎಷ್ಟು ಖರ್ಚು ಮಾಡಬಹುದು?
Election spend raise impact: ಭಾರತೀಯ ಚುನಾವಣಾ ಆಯೋಗವು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಿಂದ ಈ ಪರಿಷ್ಕೃತ ವೆಚ್ಚದ ಮಿತಿಗಳು ಅನ್ವಯವಾಗಲಿವೆ.
ಐದು ರಾಜ್ಯಗಳಲ್ಲಿ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಮುನ್ನ, ಭಾರತೀಯ ಚುನಾವಣಾ ಆಯೋಗ (ಇಸಿಐ) ಗುರುವಾರ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಹೆಚ್ಚಿಸಿದೆ. ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಿರುವ ₹ 20 ಲಕ್ಷದಿಂದ ₹ 28 ಲಕ್ಷಕ್ಕೆ ಮತ್ತು ₹ 28 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಿಸಿ ಅದು ಮಾಹಿತಿ ನೀಡಿದೆ. ಸಂಸತ್ ಕ್ಷೇತ್ರಗಳಲ್ಲಿ ಮಿತಿಯನ್ನು ಪ್ರಸ್ತುತ ಇರುವ ₹ 54 ಲಕ್ಷದಿಂದ ₹ 75 ಲಕ್ಷಕ್ಕೆ ಮತ್ತು ₹ 70 ಲಕ್ಷದಿಂದ ₹ 95 ಲಕ್ಷಕ್ಕೆ ಏರಿಸಲಾಗಿದೆ ಎಂದು ಚುನಾವಣಾ ಸಮಿತಿಯು ತಿಳಿಸಿದೆ. ಈ ಹೊಸ ವೆಚ್ಚದ ಮಿತಿಯು ಮುಂಬರುವ ಎಲ್ಲಾ ಚುನಾವಣೆಗಳಿಗೆ ಅನ್ವಯಿಸುತ್ತದೆ ಎಂದು ಅದು ತಿಳಿಸಿದೆ. ವೆಚ್ಚದ ಮಿತಿಯಲ್ಲಿ ಕೊನೆಯ ಪ್ರಮುಖ ಪರಿಷ್ಕರಣೆ 2014 ರಲ್ಲಿ ನಡೆಸಲಾಗಿತ್ತು. ನಂತರ 2020ರಲ್ಲಿ ಇದನ್ನು ಶೇ.10ರಷ್ಟು ಹೆಚ್ಚಿಸಲಾಗಿತ್ತು. ಇದೇ ವೇಳೆ ಚುನಾವಣಾ ಆಯೋಗವು ವೆಚ್ಚ ಹೆಚ್ಚಳದ ಕುರಿತು ಅಧ್ಯಯನ ಮಾಡಲು ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ಚುನಾವಣಾ ಪ್ರಚಾರದ ಕ್ರಮಗಳು ಬದಲಾಗುತ್ತಿರುವುದನ್ನು ಉಲ್ಲೇಖಿಸಿ, ವರ್ಚುವಲ್ ಪ್ರಚಾರ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ ಎಂದು ಉಲ್ಲೇಖಿಸಿತ್ತು.
ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಿಂದ ಬೇಡಿಕೆ ಹಾಗೂ 2014 ರಿಂದ 2021 ರವರೆಗೆ ಮತದಾರರ ಸಂಖ್ಯೆಯಲ್ಲಿನ ಹೆಚ್ಚಳ (834 ಮಿಲಿಯನ್‌ನಿಂದ 936 ಮಿಲಿಯನ್, ಶೇಕಡಾ 12.23 ರಷ್ಟು ಏರಿಕೆ) ಮುಂತಾದ ಅಂಶಗಳನ್ನು ಪರಿಗಣಿಸಿದ ನಂತರ ಸಮಿತಿಯು ವೆಚ್ಚದ ಮಿತಿಯನ್ನು ಹೆಚ್ಚಿಸಲು ಶಿಫಾರಸು ಮಾಡಿದೆ ಎಂದು ಆಯೋಗವು ತಿಳಿಸಿದೆ. 2021 ರಿಂದ 2022 ರವರೆಗಿನ ವೆಚ್ಚದ ಹಣದುಬ್ಬರ ಸೂಚ್ಯಂಕವು ಶೇ.32.07 ಹೆಚ್ಚಳವಾಗಿದೆ.
Limits of candidate’s expenses enhanced @DDNewslive @PIB_India @airnewsalerts pic.twitter.com/lnnabes6lv
— Spokesperson ECI (@SpokespersonECI) January 6, 2022
ಚುನಾವಣಾ ಆಯೋಗವು ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿದೆ ಮತ್ತು ಪರಿಷ್ಕೃತ ಮಿತಿಗಳನ್ನು ಕಾನೂನು ಸಚಿವಾಲಯ ಹಾಗೂ ನ್ಯಾಯ ಮತ್ತು ಶಾಸಕಾಂಗ ಇಲಾಖೆಯು ಸೂಚಿಸಿದೆ ಎಂದು ಇಸಿಐ ತಿಳಿಸಿದೆ.
ನಿಯಮಾವಳಿ ಪ್ರಕಾರ, ಅಭ್ಯರ್ಥಿಯು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ರಾಜ್ಯವನ್ನು ಅವಲಂಬಿಸಿ ₹ 50 ಲಕ್ಷದಿಂದ ₹ 70 ಲಕ್ಷದವರೆಗೆ ಖರ್ಚು ಮಾಡಬಹುದು. ಅರುಣಾಚಲ ಪ್ರದೇಶ, ಗೋವಾ ಮತ್ತು ಸಿಕ್ಕಿಂ ಹೊರತುಪಡಿಸಿ ಎಲ್ಲಾ ರಾಜ್ಯಗಳಿಗೆ ಅಭ್ಯರ್ಥಿಯು ಪ್ರಚಾರಕ್ಕಾಗಿ ₹70 ಲಕ್ಷದವರೆಗೆ ಖರ್ಚು ಮಾಡಬಹುದು. ಈ ಮೂರು ರಾಜ್ಯಗಳ ಮಿತಿ ₹54 ಲಕ್ಷವಾಗಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿಯಲ್ಲಿ ₹ 70 ಲಕ್ಷ ವೆಚ್ಚದ ಮಿತಿಯಿದ್ದು, ಉಳಿದೆಡೆ ₹ 54 ಲಕ್ಷವಿದೆ.
The Election Commission of India enhances the existing election expenditure limit for candidates in Parliamentary and Assembly constituencies. These limits will be applicable in all upcoming elections. pic.twitter.com/TGbTaJBs7N
— ANI (@ANI) January 6, 2022
ಸದ್ಯ ಐದು ರಾಜ್ಯಗಳಾದ ಗೋವಾ, ಮಣಿಪುರ, ಪಂಜಾಬ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ವರ್ಷಾಂತ್ಯದಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಎರಡು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ.
ಇದನ್ನೂ ಓದಿ:
Published On - 7:58 am, Fri, 7 January 22