ಬೆಂಗಳೂರಿನಲ್ಲಿ ಘನಘೋರ ಪರಿಸ್ಥಿತಿ; ಕೊರೊನಾದಿಂದ ಮೃತಪಟ್ಟು 3 ದಿನವಾದ್ರೂ ನಡೆದಿಲ್ಲ ಅಂತ್ಯಸಂಸ್ಕಾರ

| Updated By: ಆಯೇಷಾ ಬಾನು

Updated on: Apr 27, 2021 | 11:04 AM

ಕಳೆದ ಮೂರು ದಿನದಿಂದ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನವನ್ನು ಹುಡುಕುವ ಪರಿಸ್ಥಿತಿ ಎದುರಾಗಿದೆ. ಚಿತಾಗಾರ ಖಾಲಿ ಇಲ್ಲದೇ ಶವಸಂಸ್ಕಾರ ಮಾಡಲಾಗದ ಕಾರಣ ಮಹಿಳೆಯ ದೇಹವನ್ನು ಆಸ್ಪತ್ರೆಗೆ ಹಿಂತಿರುಗಿಸಲಾಗಿದೆ.

ಬೆಂಗಳೂರಿನಲ್ಲಿ ಘನಘೋರ ಪರಿಸ್ಥಿತಿ; ಕೊರೊನಾದಿಂದ ಮೃತಪಟ್ಟು 3 ದಿನವಾದ್ರೂ ನಡೆದಿಲ್ಲ ಅಂತ್ಯಸಂಸ್ಕಾರ
ಆ್ಯಂಬುಲೆನ್ಸ್​
Follow us on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಹೆಚ್ಚಾಗುತ್ತಿದೆ. ಊಹಿಸಲೂ ಸಾಧ್ಯವಾಗದಷ್ಟು ಘನಘೋರ ಪರಿಸ್ಥಿತಿ ಎದುರಾಗಿದೆ. ಪ್ರತಿನಿತ್ಯ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು ಮೃತದೇಹಗಳ ಅಂತ್ಯಸಂಸ್ಕಾರಕ್ಕಾಗಿ ಚಿತಾಗಾರದಲ್ಲಿ ಅದೆಷ್ಟೋ ಗಂಟೆಗಳ ಕಾಲ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂತಹದ್ದೇ ಒಂದು ಮನಕಲಕುವ ಘಟನೆ ನಡೆದಿದ್ದು, ಮಹಿಳೆ ಮೃತಪಟ್ಟು 3 ದಿನವಾದರೂ ಶವಸಂಸ್ಕಾರವಾಗಿಲ್ಲದ ಕಾರಣ ಮತ್ತೆ ಹಿಂತಿರುಗಿಸಿ ಮೃತದೇಹವನ್ನು ಆಸ್ಪತ್ರೆಗೆ ಕೊಂಡೊಯ್ದ ಘಟನೆ ನಡೆದಿದೆ.

ಕಳೆದ ಮೂರು ದಿನದಿಂದ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನವನ್ನು ಹುಡುಕುವ ಪರಿಸ್ಥಿತಿ ಎದುರಾಗಿದೆ. ಚಿತಾಗಾರ ಖಾಲಿ ಇಲ್ಲದೇ ಶವಸಂಸ್ಕಾರ ಮಾಡಲಾಗದ ಕಾರಣ ಮಹಿಳೆಯ ದೇಹವನ್ನು ಆಸ್ಪತ್ರೆಗೆ ಹಿಂತಿರುಗಿಸಲಾಗಿದೆ.  ಏಪ್ರಿಲ್​ 24 ರಂದು ಇಂದಿರಾನಗರದ ಆಸ್ಪತ್ರೆಯಲ್ಲಿ 55 ವರ್ಷದ ಮಹಿಳೆಯೋರ್ವರು ಕೊರೊನಾಗೆ ಬಲಿಯಾಗಿದ್ದರು. ಪಣತ್ತೂರು ಚಿತಾಗಾರಕ್ಕೆ ಮೃತದೇಹವನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗಿದ್ದರು. ಆದರೆ ಚಿತಾಗಾರ ಖಾಲಿ ಇಲ್ಲದೇ ಹೋದ್ದರಿಂದ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಸಿಬ್ಬಂದಿ ಒಪ್ಪಿಗೆ ನೀಡಿಲ್ಲ.

ನಿನ್ನೆ ರಾತ್ರಿ ಇಡೀ ಚಿತಾಗಾರದಲ್ಲಿಯೇ ಕಾದು ಕುಳಿತಿದ್ದರೂ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದೇ ಶವವನ್ನು ಹಿಂತಿರುಗಿಸಿದ್ದಾರೆ. ಪುನಃ ಆಸ್ಪತ್ರೆಗೆ ಮೃತದೇಹವನ್ನ ಹಿಂದಿರುಗಿಸಲಾಗಿದೆ. ಇಂದು ಮತ್ತೆ ಅಂತ್ಯಸಂಸ್ಕಾರಕ್ಕೆ ಮೃತದೇಹವನ್ನು ತೆಗೆದುಕೊಂಡು ಬಂದಿದ್ದು, ಇವತ್ತೂ ಅಂತ್ಯಸಂಸ್ಕಾರ ನೆರವೇರಿಸಲು ಸಾಧ್ಯವಾಗುತ್ತಿಲ್ಲ ಎಂದು ಚಿತಾಗಾರದ ಸಿಬ್ಬಂದಿ ಹೇಳುತ್ತಿದ್ದಾರೆ. ಇದೀಗ 20 ಮೃತದೇಹಗಳು ಸರತಿ ಸಾಲಿನಲ್ಲಿ ನಿಂತಿವೆ.

ಇದನ್ನೂ ಓದಿ; ಕೊರೊನಾಗೂ ಅಂಜದೇ ಬಸ್ ನಿಲ್ದಾಣದ ಬಳಿ ಎಟಿಎಂ ಯಂತ್ರ ಕದ್ದ ಔರಾದ್​ನ ಐನಾತಿ ಕಳ್ಳರು