Omicron: ಕರ್ನಾಟಕದಲ್ಲಿ ಒಮಿಕ್ರಾನ್ ಉಪತಳಿ ಪತ್ತೆ; 4ನೇ ಅಲೆಯ ಆತಂಕ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 23, 2022 | 11:00 AM

Coronavirus: ಕರ್ನಾಟಕದಲ್ಲಿ ಒಮಿಕ್ರಾನ್ ರೂಪಾಂತರಿಯ ಉಪತಳಿ ಎನಿಸಿರುವ BA.3, BA.4, BA.5 ವೈರಾಣುಗಳು ಪತ್ತೆಯಾಗಿವೆ

Omicron: ಕರ್ನಾಟಕದಲ್ಲಿ ಒಮಿಕ್ರಾನ್ ಉಪತಳಿ ಪತ್ತೆ; 4ನೇ ಅಲೆಯ ಆತಂಕ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳ (Coronavirus) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ ಒಮಿಕ್ರಾನ್ (Omicron)​ ರೂಪಾಂತರಿಯ ಉಪತಳಿ ಎನಿಸಿರುವ BA.3, BA.4, BA.5 ವೈರಾಣುಗಳು ಪತ್ತೆಯಾಗಿವೆ. ಜೂನ್​ 2ರಿಂದ 9ರ ನಡುವೆ ಸಂಗ್ರಹಿಸಿದ್ದ 44 ಮಾದರಿಗಳ ಪೈಕಿ 38ರಲ್ಲಿ BA.5 ಉಪತಳಿ ಪತ್ತೆಯಾಗಿದೆ. ಸದ್ಯ ರಾಜ್ಯದಲ್ಲಿ BA.2 ಉಪತಳಿ ಹೆಚ್ಚಾಗಿ ವ್ಯಾಪಿಸುತ್ತಿದ್ದು, ಶೇ 82ರಷ್ಟು ಸೋಂಕು ಇದೇ ಉಪತಳಿಯಿಂದ ಹರಡುತ್ತಿದೆ. ಹೊಸದಾಗಿ ಪತ್ತೆಯಾಗಿರುವ ತಳಿಗಳ ಬಗ್ಗೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಈ ಹೊಸತಳಿಗಳಿಂದ ಕೊರೊನಾ 4ನೇ ಅಲೆ ವ್ಯಾಪಿಸಬಹುದು ಎಂಬ ಆತಂಕ ಕಾಣಿಸಿಕೊಂಡಿದೆ.

ಮೇ ಮತ್ತು ಜೂನ್ ತಿಂಗಳಲ್ಲಿ ಪತ್ತೆಯಾದ ಕೊರೊನಾ ರೂಪಾಂತರಗಳ ವಿವರ ಹೀಗಿದೆ…
ಡೆಲ್ಟಾ- 3, ಇತರೆ- 14, ಬಿಎ1.1.529- 189, ಬಿಎ1- 1, ಬಿಎ2- 1964, ಬಿಎ3- 2, ಬಿಎ4- 4, ಬಿಎ5- 38, ಒಟ್ಟು ಪರೀಕ್ಷೆಗೆ ಒಳಪಡಿಸಿದ ಸ್ಯಾಂಪಲ್​ಗಳು- 2215.

ದೇಶದಲ್ಲಿ ಕೊರೊನಾ ಮತ್ತಷ್ಟು ಉಲ್ಬಣ

ದೇಶದಲ್ಲಿ ಕೊರೊನಾ (Coronavirus) ಪ್ರಕರಣಗಳ ಸಂಖ್ಯೆ ದಿನೇ ದಿನೆ ಉಲ್ಬಣಗೊಳ್ಳುತ್ತಿದ್ದು, ನಾಲ್ಕನೇ ಅಲೆಯ ಆತಂಕ ಎದುರಾಗಿದೆ. ಕಳೆದ 24 ಗಂಟೆಗಳಲ್ಲಿ 13,313 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 38 ಮಂದಿ ಮೃತಪಟ್ಟಿರುವ ಕುರಿತು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಬಹುತೇಕರು ಕೊರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದಿದ್ದರೆ ಇನ್ನೂ ಕೆಲವರು ಬೂಸ್ಟರ್ ಡೋಸ್​ಗಳನ್ನು ಪಡೆದಿದ್ದಾರೆ. ಸಕ್ರಿಯ ಪ್ರಕರಣಗಳು 83,990 ಇದ್ದು ಪಾಸಿಟಿವಿಟಿ ದರ ಶೇ.2.03ರಷ್ಟಿದೆ. ದೇಶದಲ್ಲಿ ಒಂದೇ ದಿನದಲ್ಲಿ 14,91,941 ಮಂದಿ ಕೊರೊನಾ ಲಸಿಕೆ ನೀಡಲಾಗಿದೆ. ಇದುವರೆಗೂ ಒಟ್ಟು 1,96,62,11,973 ಮಂದಿಗೆ ಕೊರೊನಾ ಲಸಿಕೆ ಹಾಕಲಾಗಿದೆ.

ಕೋವಿಡ್​ನಿಂದ ಸಾವನ್ನಪ್ಪಿರುವವರ ಸಂಖ್ಯೆ 5,24,941ಕ್ಕೆ ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಲ್ಲಿ 10,972 ಮಂದಿ ಗುಣಮುಖರಾಗಿರುವುದರೊಂದಿಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,27,36,027ಕ್ಕೆ ಏರಿಕೆಯಾಗಿದೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:00 am, Thu, 23 June 22