Bengaluru: ಒಂದೇ ಕಾಲೇಜಿನ 54 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

| Updated By: ganapathi bhat

Updated on: Sep 28, 2021 | 3:55 PM

Coronavirus: ಹಾಸ್ಟೆಲ್​ನ ಮೂರು ಬ್ಲಾಕ್​ಗಳ ಪೈಕಿ ಒಂದು ಬ್ಲಾಕ್​ನಲ್ಲಿ ಇದ್ದ ಎಲ್ಲಾ ವಿದ್ಯಾರ್ಥಿನಿಯರು ಕೊರೊನಾ ಪಾಸಿಟಿವ್ ಆಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಾಲೇಜು ಮುಂಭಾಗಕ್ಕೆ ಪೋಷಕರು ಆಗಮಿಸಿದ್ದಾರೆ.

Bengaluru: ಒಂದೇ ಕಾಲೇಜಿನ 54 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದ ಕಾಲೇಜ್ ಒಂದರ 54 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆನೇಕಲ್‌ ತಾಲೂಕಿನ‌ ಸಿಂಗೇನಹಾರ ಬಳಿಯ ಚೈತನ್ಯ ಇಂಟರ್​​​ನ್ಯಾಷನಲ್ ಶಾಲೆಯ ಒಟ್ಟು 54 ವಿದ್ಯಾರ್ಥಿಗಳಿಗೆ ಇಂದು (ಸೆಪ್ಟೆಂಬರ್ 28) ಕೊರೊನಾ ಸೋಂಕು ದೃಢವಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿನ 54 ವಿದ್ಯಾರ್ಥಿಗಳಿಗೆ ಕೊರೊನಾ ಕಂಡುಬಂದಿದೆ. ಕೊವಿಡ್19 ಸೋಂಕು ದೃಢಪಟ್ಟಿರುವ 54 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತಗೆ ಸ್ಥಳಾಂತರಿಸಲಾಗಿದೆ. ಉಳಿದ‌ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಸಿಂಗೇನಹಾರದ ಶ್ರೀ ಚೈತನ್ಯ ಇಂಟರ್ ನ್ಯಾಶನಲ್‌ ಸ್ಕೂಲ್​ನಲ್ಲಿ ಘಟನೆ ನಡೆದಿದೆ. ಹಾಸ್ಟೆಲ್​ನ ಮೂರು ಬ್ಲಾಕ್​ಗಳ ಪೈಕಿ ಒಂದು ಬ್ಲಾಕ್​ನಲ್ಲಿ ಇದ್ದ ಎಲ್ಲಾ ವಿದ್ಯಾರ್ಥಿನಿಯರು ಕೊರೊನಾ ಪಾಸಿಟಿವ್ ಆಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕಾಲೇಜು ಮುಂಭಾಗಕ್ಕೆ ಪೋಷಕರು ಆಗಮಿಸಿದ್ದಾರೆ. ಕೊರೊನಾ ಸ್ಫೋಟಗೊಂಡ ಹಿನ್ನೆಲೆ‌ ಕಾಲೇಜ್ ಬಂದ್ ಮಾಡಲಾಗಿದೆ.

ಕಾಲೇಜು ಮಂಡಳಿ ಎಲ್ಲಾ ತರಗತಿಗಳನ್ನು ಮೊಟಕುಗೊಳಿಸಿದೆ. ಒಟ್ಟು 335‌ ವಿದ್ಯಾರ್ಥಿಗಳ ಪೈಕಿ 54‌ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಉಳಿದ ವಿದ್ಯಾರ್ಥಿಗಳು ಕ್ವಾರಂಟೈನ್ ಆಗಿದ್ದಾರೆ. ಕೊರೊನಾ‌ ಪಾಸಿಟಿವ್ ಬಂದ ವಿದ್ಯಾರ್ಥಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಕರ್ನಾಟಕವರು ಆಗಿದ್ದಾರೆ. ಎಂಟು ವಿದ್ಯಾರ್ಥಿಗಳಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ಕೊರೊನಾ ಲಸಿಕೆ ನೀಡಿಕೆಯಲ್ಲಿ ಭಾರತ ಮತ್ತೊಮ್ಮೆ ಸಾಧನೆ; ಸೋಮವಾರವೂ 1 ಕೋಟಿ ಡೋಸ್ ಲಸಿಕೆ ನೀಡಿಕೆ

ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 504 ಜನರಿಗೆ ಕೊರೊನಾ ದೃಢ; 20 ಮಂದಿ ಸಾವು

Published On - 3:53 pm, Tue, 28 September 21