Bengaluru Power Cut: ಬೆಂಗಳೂರಿನ ಯಾವ ಏರಿಯಾಗಳಲ್ಲಿ ಬುಧವಾರ ಕರೆಂಟ್ ಹೋಗಲಿದೆ?
ನಾಳೆ ಬುಧವಾರ ಸೆಪ್ಟೆಂಬರ್ 29ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು ಮಹಾನಗರದ ಹಲವು ಪ್ರದೇಶಗಳಲ್ಲಿ ನಾಳೆ ಬುಧವಾರ (ಸೆಪ್ಟೆಂಬರ್ 29) ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಸಂಜೆ 5 ಗಂಟೆಯವರೆವರೆಗೂ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾ ತಿಳಿಸಿದೆ. ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಮತ್ತು ಅಗತ್ಯ ಕೆಲಸಗಳನ್ನು ನಡೆಸಬೇಕಾದ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಹಾಗಾದರೆ ವಿದ್ಯುತ್ ವ್ಯತ್ಯಯ ಉಂಟಾದ ಪ್ರದೇಶಗಳು ಯಾವುವು? ನಿಮ್ಮ ಏರಿಯಾದಲ್ಲೂ ವಿದ್ಯುತ್ ಹೋಗಲಿದೆಯೇ?
ಬುಧವಾರ ಪವರ್ ಕಟ್ ಆಗುವ ಪ್ರದೇಶಗಳು ಸೋಲದೇವನಹಳ್ಳಿ ಉಪಕೇಂದ್ರ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ 10ರಿಂದ 4ರವರೆಗೆ ಹಾಗೂ ಐಐಎಚ್‌ಆರ್, ಕುಂಬಾರಹಳ್ಳಿ, ಕಸಘಟ್ಟಪುರ, ಕೆಂಪಾಪುರ, ದೊಡ್ಡಬ್ಯಾಲದಕೆರೆ, , ಮಾದಪ್ಪನಹಳ್ಳಿ ಮುಂತಾದ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಕಾಡಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ನಗರಗಿರಿ ಟೌನ್‍ಶಿಪ್, ಕೆ. ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಹೆಣ್ಣೂರು ಉಪ-ಕೇಂದ್ರ ವ್ಯಾಪ್ತಿಯಲ್ಲಿ ಬುಧವಾರ ವಿದ್ಯುತ್ ಸ್ಥಗಿತ: 66/11 ಕೆ.ವಿ ಹೆಣ್ಣೂರು ಉಪ-ಕೇಂದ್ರದಲ್ಲಿ ತುರ್ತುನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವುದರಿಂದ ಬುಧವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕರೆಂಟ್ ಇರುವುದಿಲ್ಲ.
ಹೆಣ್ಣೂರು ಬಂಡೆ, ಸಮುದ್ರಿಕಾ ಎನ್ ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ತ ಜಯಂತಿ ಕಾಲೇಜು, ಕೆ.ನಾರಾಯಣಪುರ, ಬಿಳಿಶಿವಾಲೆ, ಆಶಾ ಟೌನ್‍ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‍ಶಿಪ್, ಮೇಡಿಅಗ್ರಹಾರ, ಶಿವಕೋಟೆ, ಕೊಂಡಶೆಟ್ಟಿಹಳ್ಳಿ, ಕುರುಬರಹಳ್ಳಿ, ಚಿಕ್ಕಬ್ಯಾಲದಕೆರೆ, ಹುರುಳಿಚಿಕ್ಕನಹಳ್ಳಿ, ಲಿಂಗನಹಳ್ಳಿ ಅಂಜನಪ್ಪ ಲೇಔಟ್ನಲ್ಲಿ ವಿದ್ಯುತ್ ಇರದು.
ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂಧ್ರ ಕಾಲೊನಿ ಮಂಜುನಾಥ್ ನಗರ, ಹೊರಮಾವು ಬಿಬಿಎಂಪಿ, ಅಗರ ಗ್ರಾಮ, ಪಟಾಲಮ್ಮ ದೇವಸ್ಥಾನ, ಎ.ಕೆ.ಆರ್ ಸ್ಕೂಲ್ ಹೊಸ ಮಿಲೇನಿಯಮ್ ಸ್ಕೂಲ್, ಲಕ್ಕಮ್ಮ ಲೇಔಟ್ ಹಾಗೂ ಸಿಎಸ್ಐ ಗೇಟ್, ಬೈರತಿ ಕ್ರಾಸ್, ಬೈರತಿ ಹಳ್ಳಿ, ಎವರ್ ಗ್ರೀನ್ ಲೇಔಟ್, ಕನಕ ಶ್ರೀ ಲೇಔಟ್, ಗೆದ್ದಲಹಳ್ಳಿ, ಮಂತ್ರಿ ಅಪಾರ್ಟ್‍ಮೆಂಟ್, ಹಿರೇಮಠ ಲೇಔಟ್, ಟ್ರಿನಿಟಿ ಫಾರ್ಚೂನ್, ಮೈಕಲ್ ಸ್ಕೂಲ್, ಬಿಎಚ್‌ಕೆ ಇಂಡಸ್ಟ್ರೀಸ್, ಜಾನಕಿ ರಾಮ್ ಲೇಔಟ್, ವಡ್ಡರ ಪಾಳ್ಯ, ಅನುಗ್ರಹ ಲೇಔಟ್, ಕಾವೇರಿ ಲೇಔಟ್, ಬೈರತಿ ಹಳ್ಳಿ, ಕೆಆರ್‌ಸಿ, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಂ ಎನ್‍ಕ್ಲೇವ , ಪ್ರಕಾಶ್ ಗಾರ್ಡನ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳವಾರ ವಿದ್ಯುತ್ ಕಡಿತವಾಗುವ ಪ್ರದೇಶಗಳು ಆರ್ ಆರ್ ನಗರ, ವಿಡಿಯಾ, ನೆಲಗೆದರನಹಳ್ಳಿ, ಶ್ರೀಗಂಧಕಾವಲ್, ಬ್ಯಾಡರಹಳ್ಳಿ, ವಿಜಯನಗರ, ಭೂಮಿಕಾ ಲೇಔಟ್, ಪಟ್ಟಣಗೆರೆ, ಬಿಎಚ್‌ಇಎಲ್ ಲೇಔಟ್, ಮಾರಪ್ಪ ಲೇಔಟ್, ಆಂಧ್ರಹಳ್ಳಿ ಸರ್ಕಾರಿ ಶಾಲೆ, ಆಂಧ್ರಹಳ್ಳಿ ಸರ್ಕಲ್, ಮಾರುತಿ ನಗರ ಬಿಡಬ್ಲ್ಯೂಎಸ್‌ಎಸ್‌ಬಿ, ಲಕ್ಷ್ಮಣ್ ನಗರ, ಸಂಜೀವಿನಿ ನಗರ, ವಿಘ್ನೇಶ್ವರ ನಗರ, ಹೆಗ್ಗನಹಳ್ಳಿ, ಹೆಗ್ಗನಹಳ್ಳಿ ಕ್ರಾಸ್, ಸುಂಕದಕಟ್ಟೆ, ಪೈಪ್‌ಲೈನ್ ರೋಡ್ ಸುಂಕದಕಟ್ಟೆ,ಕೊಟ್ಟಿಗೆಪಾಳ್ಯ ಹಾಗೂ ಕೆಜಿಎಚ್‌ಎಸ್ ಲೇಔಟ್, ಪಾಪರೆಡ್ಡಿ ಪಾಳ್ಯ, ಕೆ.ಕೆ. ಲೇಔಟ್, ಬಿನ್ನಿ ಲೇಔಟ್, ಜಯಲಕ್ಷ್ಮಮ್ಮ ಲೇಔಟ್ ದೊಡ್ಡಬಳ್ಳಾಪುರ ಮುಖ್ಯ ರಸ್ತೆ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಚಿಕ್ಕಬೊಮ್ಮಸಂದ್ರ, ಶಾರದಾನಗರ, ಬಿ ಸೆಕ್ಟರ್, ಚಿಕ್ಕಮುನಿಯಪ್ಪ ಲೇಔಟ್, ಅಲ್ಲಸಂದ್ರ, ಜಿಕೆವಿಕೆ ಲೇಔಟ್, ಕೈಗಾರಿಕಾ ಪ್ರದೇಶ, ರಾಮಗೊಂಡನಹಳ್ಳಿ, ಐವಿಆರ್‌ಐ ರಸ್ತೆ, ಪುಟ್ಟೇನಹಳ್ಳಿ, ಕೆಎಚ್‌ಬಿ ಕಾಲೊನಿ ಹಾಗೂ ಸುರಭಿ ಲೇಔಟ್, ರೈತರ ಸಂತೆ, ಶಿವನಹಳ್ಳಿ, ಗಾಂಧಿನಗರ, ಬಿ.ಬಿ. ರಸ್ತೆ, ಯಲಹಂಕ ಓಲ್ಡ್ ಟೌನ್ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:
World Rabies Day 2021: ರೇಬೀಸ್ ರೋಗದ ಕುರಿತಾಗಿ ನೀವು ತಿಳಿಯಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ
(Bengaluru Power Cut these areas in Bengaluru have power cut from September 28 and 29)
Published On - 2:55 pm, Tue, 28 September 21