ಲಕ್ಕಸಂದ್ರದಲ್ಲಿ ಮನೆ ಕುಸಿದ ಬಳಿಕ ಎಚ್ಚೆತ್ತ ಬಿಎಂಆರ್​ಸಿಎಲ್ ಅಧಿಕಾರಿಗಳು; ಬೆಂಗಳೂರಿನಾದ್ಯಂತ ಮನೆಗಳ ಪರಿಶೀಲನೆಗೆ ಸೂಚನೆ

ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಮನೆ ನೆಲಕ್ಕೆ ಉರುಳಿತ್ತು. ಕುಸಿದ ಮನೆಯಲ್ಲಿ ಮೆಟ್ರೋ ಕಾರ್ಮಿಕರು ಇದ್ದರು. ಬೀಳುವ ನಿರೀಕ್ಷೆಯಿಂದ ಅಲ್ಲಿದ್ದ ಕಾರ್ಮಿಕರನ್ನು ಹೊರಗೆ ಕಳುಹಿಸಲಾಗಿತ್ತು.

ಲಕ್ಕಸಂದ್ರದಲ್ಲಿ ಮನೆ ಕುಸಿದ ಬಳಿಕ ಎಚ್ಚೆತ್ತ ಬಿಎಂಆರ್​ಸಿಎಲ್ ಅಧಿಕಾರಿಗಳು; ಬೆಂಗಳೂರಿನಾದ್ಯಂತ ಮನೆಗಳ ಪರಿಶೀಲನೆಗೆ ಸೂಚನೆ
ನೆಲಕ್ಕೆ ಉರುಳಿದ ಮನೆ
Follow us
TV9 Web
| Updated By: sandhya thejappa

Updated on:Sep 28, 2021 | 1:16 PM

ಬೆಂಗಳೂರು: ನಗರದ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತಗೊಂಡ ಹಿನ್ನೆಲೆ ಬಿಎಂಆರ್​ಸಿಎಲ್​ (BMRCL) ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಮೆಟ್ರೋ (Metro) ಕಾರ್ಮಿಕರು ವಾಸವಾಗಿರುವ ಮನೆಗಳನ್ನು ಪರಿಶೀಲನೆ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಗರದಾದ್ಯಂತ ಮೆಟ್ರೋ ಕಾರ್ಮಿಕರು ಇರುವ ಮನೆಗಳನ್ನು ಪರಿಶೀಲನೆ ಮಾಡಬೇಕೆಂದು ಗುತ್ತಿಗೆದಾರರಿಗೆ ಹಾಗೂ ನಿಗಮದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮೆಟ್ರೋ ಎಂಡಿ ಅಂಜುಂ ಫರ್ವೇಜ್ ಮಾಹಿತಿ ನೀಡಿದ್ದಾರೆ.

ನಿನ್ನೆ (ಸೆ.27) ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಮನೆ ನೆಲಕ್ಕೆ ಉರುಳಿತ್ತು. ಕುಸಿದ ಮನೆಯಲ್ಲಿ ಮೆಟ್ರೋ ಕಾರ್ಮಿಕರು ಇದ್ದರು. ಬೀಳುವ ನಿರೀಕ್ಷೆಯಿಂದ ಅಲ್ಲಿದ್ದ ಕಾರ್ಮಿಕರನ್ನು ಹೊರಗೆ ಕಳುಹಿಸಲಾಗಿತ್ತು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಈ ಘಟನೆ ನಡೆದ ಬಳಿಕ ಬಿಎಂಆರ್ಸಿಎಲ್ ಅಧಿಕಾರಿಗಳು ಬೆಂಗಳೂರಿನಲ್ಲಿ ಮೆಟ್ರೋ ಕಾರ್ಮಿಕರು ವಾಸವಾಗಿರುವ ಎಲ್ಲಾ ಮನೆಗಳನ್ನು ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರೆ.

ಮೆಟ್ರೋ ಪ್ರಾಜೆಕ್ಟ್​ನಲ್ಲಿ ಸುಮಾರು 60 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಮಿಕರು ವಾಸವಿರುವ ಮನೆಗಳ ವ್ಯವಸ್ಥೆ ಬಗ್ಗೆ ಪರಿಶೀಲಿಸಿ ನಡೆಸಲಾಗುತ್ತದೆ. ಪರಿಶೀಲನೆ ವೇಳೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು ತಿಳಿದುಬಂದರೆ ಕಾರ್ಮಿಕರನ್ನ ವ್ಯವಸ್ಥಿತ ಮನೆಗೆ ಸ್ಥಳಾಂತರ ಮಾಡಲಾಗುತ್ತದೆ. ನಿನ್ನೆ ಕುಸಿದ ಕಟ್ಟಡದಲ್ಲಿ 22 ಮೆಟ್ರೋ ಕಾರ್ಮಿಕರು ವಾಸವಿದ್ದು, ಮೆಟ್ರೋ ನಿಗಮ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿದೆ. ಈ ಬಗ್ಗೆ ಮೆಟ್ರೋ ನಿಗಮದ ಎಂಡಿ ಅಂಜುಂ ಫರ್ವೇಜ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ

ಬೆಂಗಳೂರಿನಲ್ಲಿ ಕುಸಿಯುವ ಹಂತದಲ್ಲಿದೆ 250 ಮನೆಗಳು, 2019ರಲ್ಲೇ ಪಟ್ಟಿ ಸಿದ್ಧವಿದ್ದರೂ ಕ್ರಮಕ್ಕೆ ಮುಂದಾಗದ ಬಿಬಿಎಂಪಿ

ಬೆಂಗಳೂರಿನಲ್ಲಿ ಮತ್ತೊಂದು ಮೂರು ಅಂತಸ್ತಿನ ಕಟ್ಟಡ ಕುಸಿತ! ಮಗುವನ್ನು ರಕ್ಷಿಸುವುದಕ್ಕೆ ಕೆಳಗೆ ಎಸೆದ ಪೋಷಕರು

(BMRCL officials have instructed that inspect the Metro workers houses in Bengaluru)

Published On - 1:14 pm, Tue, 28 September 21

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್