Covid19: ಬೆಂಗಳೂರು ಅಪಾರ್ಟ್​ಮೆಂಟ್​ನಲ್ಲಿ 27, ಹಾಸನ ಕಾಫಿತೋಟದಲ್ಲಿ 23 ಮಂದಿಗೆ ಕೊರೊನಾ ದೃಢ

| Updated By: ganapathi bhat

Updated on: Dec 29, 2021 | 4:42 PM

Bengaluru News: ಬೆಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿ 27 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಓಕಳಿಪುರಂನ ಶೋಭಾ ಇಂದ್ರಪ್ರಸ್ಥ ಅಪಾರ್ಟ್​ಮೆಂಟ್​ನಲ್ಲಿ ಘಟನೆ ನಡೆದಿದೆ.

Covid19: ಬೆಂಗಳೂರು ಅಪಾರ್ಟ್​ಮೆಂಟ್​ನಲ್ಲಿ 27, ಹಾಸನ ಕಾಫಿತೋಟದಲ್ಲಿ 23 ಮಂದಿಗೆ ಕೊರೊನಾ ದೃಢ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಹೈರಿಸ್ಕ್ ದೇಶಗಳಿಂದ‌ ಬೆಂಗಳೂರಿಗೆ 54,000 ಜನರು ಆಗಮಿಸಿದ್ದಾರೆ. ಕಳೆದ 29 ದಿನಗಳಲ್ಲಿ 54,000ಕ್ಕೂ ಹೆಚ್ಚು ಜನರ ಆಗಮನ ಆಗಿದೆ. ಈವರೆಗೆ 54,000 ಪ್ರಯಾಣಿಕರಲ್ಲಿ 105 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಐಸೋಲೇಷನ್​ ವ್ಯವಸ್ಥೆ ಮಾಡಲಾಗಿದೆ ಎಂದು ಟಿವಿ9ಗೆ ಬೆಂಗಳೂರು ಗ್ರಾಮಾಂತರ ಡಿಸಿ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿ 27 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಓಕಳಿಪುರಂನ ಶೋಭಾ ಇಂದ್ರಪ್ರಸ್ಥ ಅಪಾರ್ಟ್​ಮೆಂಟ್​ನಲ್ಲಿ ಘಟನೆ ನಡೆದಿದೆ. ಇಲ್ಲಿ ಡಿಸೆಂಬರ್ 19ರಂದು ಬ್ಯಾಡ್ಮಿಂಟನ್ ಟೂರ್ನಮೆಂಟ್​ ಆಯೋಜಿಸಿದ್ದರು. ಅಪಾರ್ಟ್​ಮೆಂಟ್ ನಿವಾಸಿಗಳೇ ಟೂರ್ನಮೆಂಟ್ ಆಯೋಜಿಸಿದ್ದರು. ಬಳಿಕ ವಿದೇಶಕ್ಕೆ ತೆರಳಲು ನಿವಾಸಿಗಳು ಕೊವಿಡ್ ಟೆಸ್ಟ್​ ಮಾಡಿಸಿದ್ದರು. ಕೊವಿಡ್-19 ಟೆಸ್ಟ್​ ವೇಳೆ 27 ಜನರಿಗೆ ಕೊರೊನಾ ಪಾಸಿಟಿವ್​ ವರದಿ ಬಂದಿದೆ.

ಅಪಾರ್ಟ್ಮೆಂಟ್ ನಿವಾಸಿಗಳಿಗೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಕಟ್ಟೆಚ್ಚರ ನೀಡಿದ್ದಾರೆ. ಸೀಲ್ ಡೌನ್ ಆಗಿರುವ ಮೂರು ಮಹಡಿಗಳ ಅಕ್ಕಪಕ್ಕ ಜನರು ಓಡಾಡಬಾರದು. ಮನೆಕೆಲಸಕ್ಕೆ ಬರುವವರು ಹಾಗೂ ಸಂಭಂದಿಕರು ಅಕ್ಕಪಕ್ಕದ ಮನೆಯವರು ಸಂಪರ್ಕಕ್ಕೆ ಬರುವಂತಿಲ್ಲ. ಸದ್ಯ 27 ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 81 ಜನ‌, ದ್ವಿತೀಯ ಸಂಪರ್ಕದಲ್ಲಿ 395 ಜನರನ್ನ ಗುರುತಿಸಿದ್ದು ಎಲ್ಲರಿಗೂ ಕೊರೊನಾ ಟೆಸ್ಟಿಂಗ್ ಮಾಡಲಾಗಿದೆ. ಇದರಲ್ಲಿ ಒಂದಷ್ಟು ಪಾಸಿಟೀವ್ ಕೇಸ್ ಬರುವ ಸಾಧ್ಯಾತೆಗಳಿದ್ದು ಪ್ರೈಮರಿ ಹಾಗೂ ಸೆಕೆಂಡರಿ ಕಾಂಟಾಕ್ಟ್ ನಲ್ಲಿ ಇರುವವರು ಟೆಸ್ಟಿಂಗ್ ರಿಪೋರ್ಟ್ ಬರುವವರೆಗೂ ಮನೆಯಲ್ಲಿಯೇ ಇರುವಂತೆ ಸೂಚನೆ ಕೊಡಲಾಗಿದೆ.

ಮಂಡ್ಯ, ಕೋಲಾರ ಹಾಗೂ ಹಾಸನದಲ್ಲೂ ಕೊರೊನಾ ಪ್ರಕರಣಗಳು
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹಳ್ಳಿಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೊರೊನಾ ಸ್ಫೋಟವಾಗಿದೆ. ಪ್ರೈಮರಿ ಸ್ಕೂಲ್‌ನ ಐವರು ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶಾಲೆಯ 50 ಮಕ್ಕಳ ಪೈಕಿ ಐವರಿಗೆ ಕೊವಿಡ್‌ ಸೋಂಕು ಪತ್ತೆ ಆಗಿದೆ. ಐವರು ಸೋಂಕಿತ ಮಕ್ಕಳಿಗೆ ಮನೆಗಳಲ್ಲೇ ಐಸೋಲೇಷನ್‌ ಮಾಡಲಾಗಿದೆ. ಸ್ಯಾನಿಟೈಸ್ ಮಾಡಿ ಒಂದು ವಾರ ಕಾಲ ಶಾಲೆ ಸೀಲ್‌ಡೌನ್‌ ಮಾಡಲಾಗಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗ್ರಾಮ ಸೋಮಯಾಜಲಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ವಸತಿ ಶಾಲೆಯ 10 ಮಕ್ಕಳಿಗೆ ಕೊರೊನಾ ಸೋಂಕು ದೃಢವಾಗಿದೆ. ಹಾಸ್ಟೆಲ್ ಪ್ರದೇಶ​ ಕಂಟೇನ್ಮೆಂಟ್​ ಜೋನ್​ ಎಂದು ಘೋಷಣೆ ಮಾಡಲಾಗಿದೆ. ಕೊರೊನಾ ಸೋಂಕಿತ ಮಕ್ಕಳು ಹಾಸ್ಟೆಲ್​ನಲ್ಲೇ ಕ್ವಾರಂಟೈನ್ ಮಾಡಲಾಗಿದೆ.

ಹಾಸನ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸ್ಫೋಟವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನಬಾಳು ಗ್ರಾಮದ ಬಳಿ ಕಾಫಿತೋಟದ 23 ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದೆ. ಪಶ್ಚಿಮ ಬಂಗಾಳ ಮೂಲದ 23 ಕಾರ್ಮಿಕರಿಗೆ ಕೊರೊನಾ ದೃಢ ಆಗಿದೆ. ವಾರದ ಹಿಂದೆ ಊರಿಗೆ ಹೋಗಿ ಬಂದಿದ್ದ ಇಬ್ಬರು ಕಾರ್ಮಿಕರು, ಸೇರಿದಂತೆ 23 ಕಾರ್ಮಿಕರಿಗೆ ಸೋಂಕು ದೃಢವಾಗಿದೆ. ಜಿನೋಮಿಕ್​ ಸೀಕ್ವೆನ್ಸಿಂಗ್​ಗಾಗಿ ಬೆಂಗಳೂರಿಗೆ ಸ್ಯಾಂಪಲ್ ರವಾನೆ ಮಾಡಲಾಗಿದೆ. ಕಾಫಿತೋಟಕ್ಕೆ ಡಿಹೆಚ್​ಒ ಡಾ. ಸತೀಶ್ ಕುಮಾರ್ ಭೇಟಿ ನೀಡಿದ್ದಾರೆ.

ನ್ಯೂ ಇಯರ್​ಗೆ ಉತ್ತರ ಕನ್ನಡ ಜಿಲ್ಲೆಯ ಬೀಚ್​ಗಳು ಬಂದ್
ನ್ಯೂ ಇಯರ್​ಗೆ ಉತ್ತರ ಕನ್ನಡ ಜಿಲ್ಲೆಯ ಬೀಚ್​ಗಳು ಬಂದ್​ ಆಗಲಿದೆ. ಬೀಚ್​ಗಳಿಗೆ ನಿರ್ಬಂಧ ವಿಧಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 31ರ ರಾತ್ರಿ 8 ರಿಂದ ಜನವರಿ 1ರ ಮುಂಜಾನೆ 5ರ ವರೆಗೆ ನಿಷೇಧಾಜ್ಞೆ ಇರಲಿದೆ. ಜಿಲ್ಲೆಯ ಬೀಚ್​ಗಳಲ್ಲಿ ಗುಂಪುಗೂಡಿ ಸೆಲೆಬ್ರೇಷನ್​ಗೆ ನಿರ್ಬಂಧ ವಿಧಿಸಲಾಗಿದೆ. ಕೊರೊನಾ, ಒಮಿಕ್ರಾನ್​ ಆತಂಕದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದ ಸಮುದ್ರ ತೀರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಎನ್​ಡಿಎಂಎ ಅಡಿ ಕೇಸ್​ ದಾಖಲು ಮಾಡಲಾಗುವುದು. ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಸುಮಾರು 80ಕ್ಕೂ ಹೆಚ್ಚು ಅನಧಿಕೃತ ರೆಸಾರ್ಟ್‌ಗಳಿಗೆ ಬೀಗ ಹಾಕಲಾಗಿದೆ. ಸಂಗಾಪುರ, ಸಣಾಪುರ, ಮಲ್ಲಾಪುರ ಬಳಿಯ ರೆಸಾರ್ಟ್‌ಗಳಿಗೆ ಬೀಗ ಹಾಕಲಾಗಿದೆ. ಕೊಪ್ಪಳ ಡಿಸಿ ಸೂಚನೆ ಮೇರೆಗೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗಿದೆ. ಅನಧಿಕೃತ ರೆಸಾರ್ಟ್‌ಗಳಿಗೆ ಬೀಗ ಹಾಕಿದ ಅಧಿಕಾರಿಗಳು, 2 ದಿನಗಳಲ್ಲಿ ರೆಸಾರ್ಟ್ ತೆರವು ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ರೆಸಾರ್ಟ್‌ಗೆ ವಿದ್ಯುತ್ ಕಟ್ ಮಾಡಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಕೊರೊನಾ ಲಸಿಕೆ 3ನೇ ಡೋಸ್​ಗಾಗಿ ಕಾರ್ಬೆವ್ಯಾಕ್ಸ್​ ಬಳಕೆ?-3ನೇ ಹಂತದ ಕ್ಲಿನಕಲ್​ ಪ್ರಯೋಗಕ್ಕೆ ಡಿಸಿಜಿಐ ಅನುಮೋದನೆ

ಇದನ್ನೂ ಓದಿ: ಹೊಸ ವರ್ಷಕ್ಕೆ ಗೋವಾದಲ್ಲಿ ಪಾರ್ಟಿ ಮಾಡೋ ಪ್ಲಾನ್ ಇದೆಯಾ?; ಹೊಸ ಕೊವಿಡ್ ನಿಯಮಗಳು ಹೀಗಿವೆ