AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷಕ್ಕೆ ಗೋವಾದಲ್ಲಿ ಪಾರ್ಟಿ ಮಾಡೋ ಪ್ಲಾನ್ ಇದೆಯಾ?; ಹೊಸ ಕೊವಿಡ್ ನಿಯಮಗಳು ಹೀಗಿವೆ

ಗೋವಾದಲ್ಲಿ ಪಾರ್ಟಿ ಅಥವಾ ರೆಸ್ಟೋರೆಂಟ್‌ಗಳಿಗೆ ಹೋಗಲು ಕೊವಿಡ್ ನೆಗೆಟಿವ್ ವರದಿ ಅಥವಾ ಎರಡು ಡೋಸ್​ಗಳ ಕೊವಿಡ್ ಲಸಿಕೆಯ ಪ್ರಮಾಣಪತ್ರವನ್ನು ನೀಡಬೇಕಾದುದು ಅತ್ಯಗತ್ಯ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಹೊಸ ವರ್ಷಕ್ಕೆ ಗೋವಾದಲ್ಲಿ ಪಾರ್ಟಿ ಮಾಡೋ ಪ್ಲಾನ್ ಇದೆಯಾ?; ಹೊಸ ಕೊವಿಡ್ ನಿಯಮಗಳು ಹೀಗಿವೆ
ಗೋವಾದ ಹೊಸ ವರ್ಷಾಚರಣೆ (ಸಂಗ್ರಹ ಚಿತ್ರ)
TV9 Web
| Edited By: |

Updated on:Dec 29, 2021 | 3:33 PM

Share

ಗೋವಾ: ಇನ್ನೇನು ಮೂರೇ ದಿನದಲ್ಲಿ 2021 ಮುಗಿದು ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಈ ಬಾರಿ ವೀಕೆಂಡ್​ನಲ್ಲೇ ಹೊಸ ವರ್ಷ ಬಂದಿರುವುದರಿಂದ ದೂರಕ್ಕೆ ಹೋಗಿ ಪಾರ್ಟಿ ಮಾಡಬೇಕೆಂದು ಅನೇಕರು ಪ್ಲಾನ್ ಮಾಡಿರುತ್ತಾರೆ. ನೀವೇನಾದರೂ ಈ ವರ್ಷದ ನ್ಯೂ ಇಯರ್​ಗೆ ಗೋವಾಗೆ ಹೋಗಿ ಪಾರ್ಟಿ ಮಾಡಬೇಕೆಂದು ಪ್ಲಾನ್ ಮಾಡಿದ್ದರೆ ಈ ನಿಯಮಗಳನ್ನು ಅನುಸರಿಸುವುದು ಕಡ್ಡಾಯ. ಹೊಸ ವರ್ಷಾಚರಣೆಗೆ ಬೇರೆ ರಾಜ್ಯಗಳಿಂದ ಗೋವಾಗೆ ಪಾರ್ಟಿ ಮಾಡಲು ಬರುವವರ ಸಂಖ್ಯೆ ಹೆಚ್ಚಾಗುವುದರಿಂದ ಗೋವಾ ಸರ್ಕಾರ ಹೊಸ ಕೊವಿಡ್ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.

ಗೋವಾ ರಾಜ್ಯದಲ್ಲಿ ಪಾರ್ಟಿಗಳಿಗೆ ಹಾಜರಾಗಲು ಅಥವಾ ರೆಸ್ಟೋರೆಂಟ್‌ಗಳಿಗೆ ಹೋಗಲು ಕೊವಿಡ್ ನೆಗೆಟಿವ್ ವರದಿ ಅಥವಾ ಎರಡು ಡೋಸ್​ಗಳ ಕೊವಿಡ್ ಲಸಿಕೆಯ ಪ್ರಮಾಣಪತ್ರವನ್ನು ನೀಡಬೇಕಾದುದು ಅತ್ಯಗತ್ಯ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ಇಂದು ಈ ಕುರಿತು ವಿವರವಾದ ಆದೇಶವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಸಾವಂತ್ ಸುದ್ದಿಗಾರರಿಗೆ ತಿಳಿಸಿದರು.

ಅನೇಕ ರಾಜ್ಯಗಳು ಒಮಿಕ್ರಾನ್ ಹರಡುವಿಕೆಯ ನಡುವೆ ರಾತ್ರಿ ಕರ್ಫ್ಯೂಗಳನ್ನು ಮರಳಿ ಜಾರಿಗೆ ತಂದಿದ್ದರೂ, ಕ್ರಿಸ್‌ಮಸ್-ಹೊಸ ವರ್ಷದ ಹಬ್ಬದ ಮಧ್ಯೆ ಜನರು ಪಾರ್ಟಿ ಮಾಡುವುದನ್ನು ನಿಯಂತ್ರಿಸುವುದು ಕಷ್ಟ. ಗೋವಾದಲ್ಲಿನ ಕೋವಿಡ್ -19 ಪರಿಸ್ಥಿತಿಯನ್ನು ತಮ್ಮ ಸರ್ಕಾರವು ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ಅಗತ್ಯವಿದ್ದಲ್ಲಿ ಜನವರಿ 3ರಂದು ನಡೆಯಲಿರುವ ಕಾರ್ಯಪಡೆಯ ಸಭೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸಾವಂತ್ ಭರವಸೆ ನೀಡಿದ್ದಾರೆ.

ಹೊಸ ವರ್ಷಾಚರಣೆಗೆ ಮುಂಚಿತವಾಗಿ, ಪ್ರಸ್ತುತ ರಾಜ್ಯದ ಹೋಟೆಲ್‌ಗಳಲ್ಲಿ ಶೇ. 90ರಷ್ಟು ಜನರು ಆಗಮಿಸಲು ಅನುಮತಿಯಿದೆ. ಆದರೆ ಬೀಚ್‌ಗಳು ಈಗಾಗಲೇ ಮೋಜುಗಾರರಿಂದ ತುಂಬಿ ತುಳುಕುತ್ತಿವೆ. ಇಯರ್ ಎಂಡ್​ನಲ್ಲಿ ಗೋವಾಗೆ ಬರುವ ಪ್ರವಾಸಿಗರ ಸಂಖ್ಯೆ ಭಾರೀ ಹೆಚ್ಚಳವಾಗುತ್ತದೆ. ಇಲ್ಲಿನ ಎಲ್ಲ ರೆಸಾರ್ಟ್, ರೆಸ್ಟೋರೆಂಟ್, ಹೋಟೆಲ್, ಲಾಡ್ಜ್​ಗಳೂ ಪೂರ್ತಿ ಬುಕ್ ಆಗುತ್ತವೆ. ಹೀಗಾಗಿ, ಕೆಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಈ ವೀಕೆಂಡ್​ನಲ್ಲಿ ಗೋವಾದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದ್ದು, ಇದರಿಂದ ಹೊಸ ವರ್ಷದ ಹಿಂದಿನ ರಾತ್ರಿ ಪಾರ್ಟಿ ಮಾಡುವವರಿಗೆ ನಿರಾಸೆಯಾಗಲಿದೆ. ಗೋವಾಗೆ ಬರುವವರು ಕೊವಿಡ್ ನೆಗೆಟಿವ್ ರಿಪೋರ್ಟ್​ ತೋರಿಸಬೇಕು ಅಥವಾ ಎರಡೂ ಡೋಸ್​ ವ್ಯಾಕ್ಸಿನ್ ಆದ ಸರ್ಟಿಫಿಕೆಟ್ ನೀಡಬೇಕು ಎಂದು ಗೋವಾ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಸಮಂತಾ ಗೋವಾ ಟ್ರಿಪ್

ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟ; ಈ ಬಾರಿ ಎಂಜಿ ರೋಡ್, ಬ್ರಿಗೇಡ್ ರೋಡ್​ನಲ್ಲಿ ಹೇಗಿರಲಿದೆ ಸೆಲೆಬ್ರೆಷನ್

Published On - 3:32 pm, Wed, 29 December 21

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ