ಕೊರೊನಾ ಹಿನ್ನೆಲೆ; ವಿಧಾನ ಪರಿಷತ್ ಚುನಾವಣೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ಕೊರೊನಾ ಹಿನ್ನೆಲೆ; ವಿಧಾನ ಪರಿಷತ್ ಚುನಾವಣೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ
ಸಾಂದರ್ಭಿಕ ಚಿತ್ರ

ಸಿಬ್ಬಂದಿ ಕೊವಿಡ್​ ರೋಗ ಲಕ್ಷಣ ರಹಿತರಾಗಿರಬೇಕು. 50 ವರ್ಷ ಮೇಲ್ಪಟ್ಟ ಸಿಬ್ಬಂದಿ, ಶುಗರ್​, ಬಿಪಿ ಸಮಸ್ಯೆ ಇದ್ದರೆ ಅಂತಹ ಸಿಬ್ಬಂದಿ ಕಡ್ಡಾಯವಾಗಿ ಫೇಸ್​ ಶೀಲ್ಡ್​ ಧರಿಸಬೇಕು ಎಂದು ಪರಿಷತ್​ ಚುನಾವಣೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

TV9kannada Web Team

| Edited By: ganapathi bhat

Nov 19, 2021 | 8:15 PM

ಬೆಂಗಳೂರು: ವಿಧಾನಪರಿಷತ್​ನ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ. ಪರಿಷತ್​ ಚುನಾವಣೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗಿಯಾಗುವವರು ಮಾಸ್ಕ್​ ಧರಿಸಬೇಕು. ನಾಮಪತ್ರ ಸಲ್ಲಿಸುವಾಗ ಕೇವಲ ನಾಲ್ವರಿಗೆ ಮಾತ್ರ ಅವಕಾಶ ನೀಡಲಾಗಿದೆ. ನಾಮಪತ್ರ ಸಲ್ಲಿಸಲು ತೆರಳುವಾಗ 3 ವಾಹನ ಮಾತ್ರ ಬಳಸಬೇಕು. ಚುನಾವಣಾಧಿಕಾರಿ ಅಭ್ಯರ್ಥಿಗೆ ಸಮಯ ನಿಗದಿ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಚುನಾವಣಾ ಪ್ರಚಾರ ವೇಳೆ 500 ಜನ ಭಾಗಿ ಆಗಬಹುದು. ಪ್ರಚಾರದಲ್ಲಿ ಭಾಗಿ ಆಗುವವರು ಲಸಿಕೆ ತೆಗೆದುಕೊಂಡಿರಬೇಕು. 2 ಡೋಸ್​ ಲಸಿಕೆ ಪಡೆದಿರಬೇಕು. ದೊಡ್ಡ ಹಾಲ್​ಗಳಲ್ಲಿ ಪರಿಷತ್ ಚುನಾವಣಾ ಸಭೆ ನಡೆಸಬೇಕು. ಸಭೆಯ ಹಿಂದಿನ ದಿನ ಸಭಾಂಗಣ ಸ್ಯಾನಿಟೈಸ್ ಮಾಡಿರಬೇಕು. ಚುನಾವಣಾ ಸಿಬ್ಬಂದಿ ಕೂಡ 2 ಡೋಸ್ ಲಸಿಕೆ ಪಡೆದಿರಬೇಕು. ಸಿಬ್ಬಂದಿ ಕೊವಿಡ್​ ರೋಗ ಲಕ್ಷಣ ರಹಿತರಾಗಿರಬೇಕು. 50 ವರ್ಷ ಮೇಲ್ಪಟ್ಟ ಸಿಬ್ಬಂದಿ, ಶುಗರ್​, ಬಿಪಿ ಸಮಸ್ಯೆ ಇದ್ದರೆ ಅಂತಹ ಸಿಬ್ಬಂದಿ ಕಡ್ಡಾಯವಾಗಿ ಫೇಸ್​ ಶೀಲ್ಡ್​ ಧರಿಸಬೇಕು ಎಂದು ಪರಿಷತ್​ ಚುನಾವಣೆಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

ಡಿಸೆಂಬರ್ 13 ರಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಡಿಸೆಂಬರ್ 13 ರಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಲಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ 10 ದಿನ ಅಧಿವೇಶನ ಎಂದು ಮಾಹಿತಿ ನೀಡಲಾಗಿದೆ. ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯಬೇಕು ಎನ್ನುವ ಬಗ್ಗೆ ಬಹಳ ಬೇಡಿಕೆ ಇತ್ತು. ಅದರಂತೆ ಈ ಬಾರಿ ಬೆಳಗಾವಿಯಲ್ಲಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯಲಿದೆ. ಅಧಿವೇಶನ ನಡೆಯಲಿರುವ ದಿನಾಂಕ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಎಸ್‌ಐಟಿ ತಂಡದಿಂದ 63 ಲಕ್ಷ ರೂ. ಮೌಲ್ಯದ ನಕಲಿ ಛಾಪಾ ಕಾಗದ ವಶ; ಐವರು ಆರೋಪಿಗಳ ಬಂಧನ

ಇದನ್ನೂ ಓದಿ: ಬೆಳಗಾವಿಯ ಸುವರ್ಣ ಸೌಧದಲ್ಲೇ ಚಳಿಗಾಲದ ಅಧಿವೇಶನ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

Follow us on

Related Stories

Most Read Stories

Click on your DTH Provider to Add TV9 Kannada