ಬೆಂಗಳೂರು: ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಹಲವು ಕಠಿಣ ನಿರ್ಬಂಧಗಳನ್ನು ನಿನ್ನೆ (ನ.3) ಜಾರಿಗೊಳಿಸಿದೆ. ರಾಜ್ಯದಲ್ಲಿ ಟೆಸ್ಟಿಂಗ್ ಹೆಚ್ಚಿಸಲು, ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರು ಹಾಗೂ ವಿವಿಧ ವರ್ಗಗಳ ಜನರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಬೆಂಗಳೂರಿನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಒಮಿಕ್ರಾನ್ ಸೋಂಕು ಪತ್ತೆಯಾಗಿತ್ತು. ಈ ನಡುವೆ ಗುಜರಾತ್ನ ಜುನಾಗಡದಲ್ಲಿಯೂ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿತ್ತು.
ಕರ್ನಾಟಕದಲ್ಲಿ ಶನಿವಾರ ಒಟ್ಟು 397 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿನಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಒಟ್ಟು 277 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 7012 ಸಕ್ರಿಯ ಪ್ರಕರಣಗಳಿದ್ದು ಪಾಸಿಟಿವಿಟಿ ಪ್ರಮಾಣ ಶೇ 0.35, ಸೋಂಕಿತರ ಸಾವಿನ ಸರಾಸರಿ ಶೇ 1ರಷ್ಟು ಇದೆ. ರಾಜ್ಯದಲ್ಲಿ ಈವರೆಗೆ 29,97,643 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,52,378 ಮಂದಿ ಚೇತರಿಸಿಕೊಂಡಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 207, ಮೈಸೂರು 29, ಧಾರವಾಡ 26, ದಕ್ಷಿಣ ಕನ್ನಡ 22, ಶಿವಮೊಗ್ಗ, ಹಾಸನ, ಕೊಡಗು 19, ಚಿಕ್ಕಮಗಳೂರು 11, ಉಡುಪಿ, ತುಮಕೂರು 8, ಉತ್ತರ ಕನ್ನಡ 7, ಕೋಲಾರ 5, ಚಿತ್ರದುರ್ಗ, ಬೆಳಗಾವಿ 3, ಬಳ್ಳಾರಿ, ಮಂಡ್ಯ, ದಾವಣಗೆರೆ 2, ಬೆಂಗಳೂರು ಗ್ರಾಮಾಂತರ, ಕಲಬುರಗಿ 1.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಒಮಿಕ್ರಾನ್ 4ನೇ ಪ್ರಕರಣ ಪತ್ತೆ; ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಮಹಾರಾಷ್ಟ್ರದ ವ್ಯಕ್ತಿಯಲ್ಲಿ ಸೋಂಕು ದೃಢ
ಇದನ್ನೂ ಓದಿ: ಒಮಿಕ್ರಾನ್ನಿಂದ ದಕ್ಷಿಣ ಆಫ್ರಿಕಾದಲ್ಲಿ ಸೋಂಕಿತರ ಪ್ರಮಾಣ ಆರು ಪಟ್ಟು ಹೆಚ್ಚಳ: ಭಾರತದಲ್ಲಿ ಹೆಚ್ಚಾಗುತ್ತಿದೆ ಆತಂಕ