ಮಹಿಳಾ ಪ್ರಯಾಣಿಕರ ಎದುರೇ ಹಸ್ತಮೈಥುನ ಮಾಡಿಕೊಂಡ ಓಲಾ ಕ್ಯಾಬ್ ಚಾಲಕ, ಬೆಂಗಳೂರು ನಗರ ಅಸುರಕ್ಷಿತ ಎಂದ ಮಹಿಳೆ

ಮಹಿಳೆ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳುವಾಗ ತಮ್ಮ ಮೊಬೈಲ್ ಮೂಲಕ ಓಲಾ ಕ್ಯಾಬ್‌ ಬುಕ್ ಮಾಡಿದ್ದರು. ಬಳಿಕ ಓಲಾದಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪತ್ರಕರ್ತೆ ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಹಿಳಾ ಪ್ರಯಾಣಿಕರ ಎದುರೇ ಹಸ್ತಮೈಥುನ ಮಾಡಿಕೊಂಡ ಓಲಾ ಕ್ಯಾಬ್ ಚಾಲಕ, ಬೆಂಗಳೂರು ನಗರ ಅಸುರಕ್ಷಿತ ಎಂದ ಮಹಿಳೆ
ಓಲಾ ಕ್ಯಾಬ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರ ಅನುಚಿತ ಘಟನೆಯೊಂದು ನಡೆದಿದೆ. ಓಲಾ ಕ್ಯಾಬ್(Ola Cab) ಚಾಲಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಎದುರೇ ಹಸ್ತಮೈಥುನ(Masturbation) ಮಾಡಿಕೊಂಡಿದ್ದಾನೆ. ಈ ವಿಚಾರವನ್ನು ಮಹಿಳಾ ಪ್ರಯಾಣಿ ಪತ್ರಕರ್ತೆ ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಮಹಿಳೆ ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳುವಾಗ ತಮ್ಮ ಮೊಬೈಲ್ ಮೂಲಕ ಓಲಾ ಕ್ಯಾಬ್‌ ಬುಕ್ ಮಾಡಿದ್ದರು. ಬಳಿಕ ಓಲಾದಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪತ್ರಕರ್ತೆ ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಓಲಾ ಕ್ಯಾಬ್ನಲ್ಲಿ ಮನೆಗೆ ಹೋಗುವಾಗ ಚಾಲಕ ಕಾರು ಚಲಾಯಿಸುತ್ತಲೇ ಹಸ್ತಮೈಥುನ ಮಾಡಿಕೊಳ್ಳಲು ಶುರು ಮಾಡಿದ. ನಾನು ಅದನ್ನು ಗಮನಿಸಿದೆ. ಆಗ ತಕ್ಷಣ ಆತ ತಾನು ಧರಿಸಿದ್ದ ಧೋತಿಯನ್ನು ಮುಚ್ಚಿಕೊಂಡು ಏನೂ ನಡೆದೇ ಇಲ್ಲ ಎನ್ನುವಂತೆ ವರ್ತಿಸಿದ. ಈ ವೇಳೆ ನಾನು ಕೊಂಚ ಧೈರ್ಯ ಮಾಡಿ ಕಿರುಚಾಡಿದ್ದರಿಂದ ಕ್ಯಾಬ್ ನಿಲ್ಲಿಸಿದ. ಬಳಿಕ ನಾನು ಕೆಳಗೆ ಇಳಿದು ಮತ್ತೊಂದು ಕ್ಯಾಬ್ನಲ್ಲಿ ಮನೆಗೆ ತೆರಳಿದೆ ಎಂದು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೆ ಈ ಘಟನೆಯಿಂದ ಬೆಂಗಳೂರು ನಗರ ಅಸುರಕ್ಷಿತ ಎನ್ನುವ ಭಾವನೆ ಮೂಡಿದೆ. ನನ್ನಲ್ಲಿ ಭಯ ಹುಟ್ಟಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಸುರಕ್ಷತೆಯ ದೃಷ್ಟಿಯಿಂದ ಒಂಟಿಯಾಗಿ ಕ್ಯಾಬ್ಗಳಲ್ಲಿ ತೆರಳುವಾಗ ಪರಿಚಿತರ ಸಂಪರ್ಕದಲ್ಲಿರಬೇಕು. ಪ್ರಯಾಣವನ್ನು ಟ್ರ್ಯಾಕ್ ಮಾಡಲು ಲೈವ್ ಲೊಕೇಶನ್ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ.

ಸದ್ಯ ಘಟನೆ ಬೆಳಕಿಗೆ ಬಂದ ಕೂಡಲೇ ಓಲಾ ಕಂಪನಿ ಕ್ಯಾಬ್‌ ಚಾಲಕನನ್ನು ಅಮಾನತುಗೊಳಿಸಿರುವುದಾಗಿ ಹಾಗೂ ಈ ಬಗ್ಗೆ ದೂರು ದಾಖಲಾಗಿರುವುದಾಗಿ ಮಹಿಳೆಗೆ ಇಮೇಲ್ ಮೂಲಕ ಸಂದೇಶ ರವಾನಿಸಲಾಗಿದೆ. ಘಟನೆಯನ್ನು ಗಮನಿಸಿದ ಬೆಂಗಳೂರು ನಗರ ಪೊಲೀಸರು ಪತ್ರಕರ್ತೆಗೆ ಕ್ಷಮೆಯಾಚಿಸಿದ್ದು, ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿ ಪತ್ತೆಗೆ ಈಗಾಗಲೇ ತಂಡವನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಆಟೋರಿಕ್ಷಾ ಚಾಲಕರಿಗೆ ಪರಿಷ್ಕೃತ ಬಾಡಿಗೆ ದರದ ಸಂತಸ ಕ್ಷಣಿಕ, ಬೆಳಗಾಗುವಷ್ಟರಲ್ಲಿ ಕಾದಿತ್ತೊಂದು ಆಘಾತ!

Click on your DTH Provider to Add TV9 Kannada